»   » ಸಿಮ್ರಾನ್ ಬಂದಾಳಮ್ಮ..ಬಿಸಿ ಬಿಸಿ ಸುದ್ದಿ ತಂದಾಳಮ್ಮ..

ಸಿಮ್ರಾನ್ ಬಂದಾಳಮ್ಮ..ಬಿಸಿ ಬಿಸಿ ಸುದ್ದಿ ತಂದಾಳಮ್ಮ..

Posted By:
Subscribe to Filmibeat Kannada

''ಬಂದಾಳಮ್ಮ ಉಷೆ ಬಂದಾಳಮ್ಮ...'' ಸೂಪರ್ ಹಿಟ್ ಸಿನಿಮಾ 'ಸಿಂಹದ ಮರಿ' ಚಿತ್ರದ ಈ ಹಾಡು ನೆನಪಿದೆ ಅಲ್ವಾ. ಹಾಗೇ, ಈ ಹಾಡಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಕುಣಿದು ಕುಪ್ಪಳಿಸಿದ ನಟಿ ಸಿಮ್ರಾನ್ ಗುರುತು ನಿಮಗೆ ಇರಲೇಬೇಕು.

ಅಂದಿನ ಕಾಲದಲ್ಲಿ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಬಹುಬೇಡಿಕೆಯಲ್ಲಿದ್ದ ನಟಿ ಸಿಮ್ರಾನ್ ಈಗ ಸ್ಯಾಂಡಲ್ ವುಡ್ ಕಡೆ ಮತ್ತೆ ಮುಖ ಮಾಡಿರುವ ವಿಷಯ ಇದೇ 'ಫಿಲ್ಮಿಬೀಟ್ ಕನ್ನಡ' ಮೂಲಕ ನಾವೇ ನಿಮಗೆ ಹೇಳಿದ್ವಿ. [ಗಾಂಧಿನಗರಕ್ಕೆ 'ಸಿಂಹದ ಮರಿ' ರಾಣಿ ಸಿಮ್ರಾನ್ ರೀ ಎಂಟ್ರಿ]

In Pic; Actress Simran in Trilingual movie 'Alone'

ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ಜೆಕೆ ನಿರ್ದೇಶನದ 'ಅಲೋನ್' ಚಿತ್ರದ ಮೂಲಕ ಸಿಮ್ರಾನ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಸಿಮ್ರಾನ್, 'ಅಲೋನ್' ಚಿತ್ರದಲ್ಲಿ ಹೇಗೆ ಕಾಣ್ತಾರೆ ಗೊತ್ತಾ? 'ಅಲೋನ್' ಚಿತ್ರದ ಎಕ್ಸ್ ಕ್ಲೂಸಿವ್ ಸ್ಟಿಲ್ ಇಲ್ಲಿದೆ, ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ

In Pic; Actress Simran in Trilingual movie 'Alone'

ಯೆಸ್...'ಸಿಂಹದ ಮರಿ' ಚಿತ್ರದಲ್ಲಿ ಸಿಮ್ರಾನ್ ಹೇಗಿದ್ರೋ...ಈಗಲೂ ಹಾಗೇ ಇದ್ದಾರೆ. 'ಅಲೋನ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ ನಟಿ ಸಿಮ್ರಾನ್.

ಹಾಗ್ನೋಡಿದ್ರೆ, ಸಿಮ್ರಾನ್ ಜಾಗದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಇರಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಸುನೀಲ್ ಶೆಟ್ಟಿ ಹಿಂದೆ ಸರಿದ ಮೇಲೆ, ಸೂಪರ್ ಕಾಪ್ ಪಾತ್ರದಲ್ಲಿ ಸಿಮ್ರಾನ್ ಕಾಣಿಸಿಕೊಂಡಿದ್ದಾರೆ. [ಖಾಕಿ ಖದರ್ ನಲ್ಲಿ ಕನ್ನಡಕ್ಕೆ ಸುನಿಲ್ ಶೆಟ್ಟಿ ಎಂಟ್ರಿ]

In Pic; Actress Simran in Trilingual movie 'Alone'

ಹಾರರ್ ಕಮ್ ಥ್ರಿಲ್ಲರ್ ಚಿತ್ರವಾಗಿರುವ 'ಅಲೋನ್' ನಾಯಕಿ ನಿಕಿಶಾ ಪಟೇಲ್. ವಸಿಷ್ಠ, ಗಣೇಶ್, ಸಾಧು ಕೋಕಿಲ, ತಬಲಾ ನಾಣಿ, ದಿಲೀಪ್ ಮತ್ತು ಅವಿನಾಶ್ ಉಳಿದ ತಾರಾಗಣದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
By playing a Super Cop in Trilingual movie 'Alone', Multilingual Actress Simran is making her comeback to Kannada Cinema. Here is an Exclusive still of Actress Simran from the sets of 'Alone'. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada