»   » ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.?

ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.?

Posted By:
Subscribe to Filmibeat Kannada
ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್ | Filmibeat Kannada

ತಮ್ಮ ಆಕಾರವನ್ನೇ ಬಂಡವಾಳ ಮಾಡಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಹಾಸ್ಯ ನಟನಾಗಿ ಮಿಂಚಿ ಎಲ್ಲರಿಗೂ ನಗುವಿನ ಟಾನಿಕ್ ನೀಡುತ್ತಿದ್ದ ಬುಲೆಟ್ ಪ್ರಕಾಶ್ ಇದೀಗ ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ಕೆಜಿ ಲೆಕ್ಕದಲ್ಲಿ ತೂಕ ಇಳಿಸಿದ್ದಾರೆ ಬುಲೆಟ್ ಪ್ರಕಾಶ್.

ಗುಂಡು ಗುಂಡಾಗಿ ಇದ್ದ ಬುಲೆಟ್ ಪ್ರಕಾಶ್, ತೆರೆಮೇಲೆ 'ಕರಿ ಇಡ್ಲಿ' ಅಂತಲೇ ಫೇಮಸ್ ಆಗಿದ್ದವರು. ಆದ್ರೆ, ಬುಲೆಟ್ ಪ್ರಕಾಶ್ ಅವರನ್ನ ಇನ್ಮೇಲೆ ನೀವು ಹಾಗೆ ಕರೆಯುವಂತಿಲ್ಲ. ಯಾಕಂದ್ರೆ, ಬುಲೆಟ್ ಈಗ 'ದಡೂತಿ' ವ್ಯಕ್ತಿ ಆಗಿ ಉಳಿದಿಲ್ಲ.

ಆಡಿದ ಮಾತಿನಂತೆ ವರ್ಷದಿಂದ ಕಟ್ಟುನಿಟ್ಟಾಗಿ ಡಯೆಟ್ ಪಾಲಿಸುತ್ತಿರುವ ಬುಲೆಟ್ ಪ್ರಕಾಶ್ ಇಂದು ಹೇಗೆ ಕಾಣ್ತಾರೆ ಅಂತ ಫೋಟೋ ಸ್ಲೈಡ್ ಗಳಲ್ಲಿ ನೀವೇ ನೋಡಿರಿ...

ಬುಲೆಟ್ ಪ್ರಕಾಶ್ ಹೇಗಾಗಿದ್ದಾರೆ ನೋಡಿ...

'ತೂಕ'ದ ವ್ಯಕ್ತಿ ಬುಲೆಟ್ ಪ್ರಕಾಶ್ ಈಗ ಎಷ್ಟು ಸಣ್ಣ ಆಗಿದ್ದಾರೆ ಅನ್ನೋದಕ್ಕೆ ಈ ಫೋಟೋ ಉತ್ತಮ ಉದಾಹರಣೆ.

ಬುಲೆಟ್ ಪ್ರಕಾಶ್ ರವರ ಈ ಪ್ರಯತ್ನಕ್ಕೆ 'ಭೇಷ್' ಎಂದು ಬೆನ್ನು ತಟ್ಟಲೇಬೇಕು.!

ಕಠಿಣ ಡಯೆಟ್ ಅನುಸರಿಸುತ್ತಿರುವ ಬುಲೆಟ್ ಪ್ರಕಾಶ್

ಹೊಟ್ಟೆ ತುಂಬಾ ಊಟ ಮಾಡುತ್ತಿದ್ದ ಬುಲೆಟ್ ಪ್ರಕಾಶ್, ಕಳೆದ ಒಂದು ವರ್ಷದಿಂದ ಡಯೆಟ್ ಮಾಡುತ್ತಿದ್ದಾರೆ. ಶಿಸ್ತುಬದ್ಧ ಆಹಾರ ಕ್ರಮ ಅನುಸರಿಸುತ್ತಿರುವ ಬುಲೆಟ್ ಪ್ರಕಾಶ್, ಕೇವಲ ನೀರು ಮತ್ತು ಜ್ಯೂಸ್ ಸೇವನೆ ಮಾಡಿ ಕೆಜಿ ಗಟ್ಟಲೆ ತೂಕ ಇಳಿಸಿದ್ದಾರೆ.

ಸಿಕ್ಸ್ ಪ್ಯಾಕ್ ಮಾಡ್ತಾರೆ ಬುಲೆಟ್ ಪ್ರಕಾಶ್

ತೂಕ ಇಳಿಸುವುದರ ಜೊತೆಗೆ ಸಿಕ್ಸ್ ಪ್ಯಾಕ್ ಕೂಡ ಮಾಡಬೇಕು ಎಂಬ ಹಂಬಲ ಬುಲೆಟ್ ಪ್ರಕಾಶ್ ರವರಿಗಿದೆ.

ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಏಕೆ.?

ಸಿನಿಮಾ ರಂಗದಲ್ಲಿ ಇನ್ನೂ ಮಿಂಚಬೇಕು, ಹೊಸಬರ ಮಧ್ಯೆ ತಾವೂ ಚೆನ್ನಾಗಿ ಕಾಣಬೇಕು, ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಬುಲೆಟ್ ಪ್ರಕಾಶ್ ಡಯೆಟ್ ಮಾಡುತ್ತಿದ್ದಾರೆ.

English summary
Kannada Actor Bullet Prakash looses oodles of weight. Take a look at the new photo of Bullet Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada