»   » ಕಮಲ್ ಹಾಸನ್ ಪುತ್ರಿಯನ್ನು ನಿರ್ದೇಶಕ ನಾಗಶೇಖರ್ ಭೇಟಿ ಮಾಡಿದ್ದೇಕೆ ?

ಕಮಲ್ ಹಾಸನ್ ಪುತ್ರಿಯನ್ನು ನಿರ್ದೇಶಕ ನಾಗಶೇಖರ್ ಭೇಟಿ ಮಾಡಿದ್ದೇಕೆ ?

Posted By:
Subscribe to Filmibeat Kannada

ನಟ ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಇದೆ. ಇದೀಗ ನಿರ್ದೇಶಕ ನಾಗಶೇಖರ್ ಅಕ್ಷರ ಹಾಸನ್ ಅವರನ್ನು ಭೇಟಿ ಮಾಡಿದ್ದಾರೆ.

ನಾಗಶೇಖರ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ಕಮಲ್ ಮಗಳು ನಟಿಸುತ್ತಾರೆ ಎಂಬ ಗಾಸಿಪ್ ಸಖತ್ ಜೋರಾಗಿ ಹರಿದಾಡಿದ್ದು ನಿಜ. ಅದೇ ರೀತಿ ಸದ್ಯ ನಾಗಶೇಖರ್ ಅಕ್ಷರ ಹಾಸನ್ ಅವರನ್ನು ಭೇಟಿ ಮಾಡಿದ್ದು, ಆ ಫೋಟೋ ಈಗ ಟ್ವಿಟ್ಟರ್ ನಲ್ಲಿ ಹರಿದಾಡಿದೆ.

In pic: Director Nagashekar with Akshara Haasan

ನಾಗಶೇಖರ್ ಸದ್ಯ 'ನವೆಂಬರ್ ನಲ್ಲಿ ನಾನು ಅವಳು' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಎರಡನೇ ಪುತ್ರಿ ವಿಕ್ರಮ್ ನಾಯಕನಾಗಿ ನಟಿಸುತ್ತಿದ್ದಾರೆ. ವಿಕ್ರಮ್ ರವಿಚಂದ್ರನ್ ಜೋಡಿಯಾಗಿ ಅಕ್ಷರ ಹಾಸನ್ ಅವರನ್ನು ಕರೆ ತರುವ ತಯಾರಿ ನಿರ್ದೇಶಕ ನಾಗಶೇಖರ್ ಅವರದ್ದಾಗಿದೆ.

ಸದ್ಯ ಚಿತ್ರದ ಬಗ್ಗೆ ಅಕ್ಷರ ಹಾಸನ್ ಜೊತೆ ಮಾತುಕತೆ ನಡೆದಿದೆ. ಅಕ್ಷರ ಈ ಚಿತ್ರಕ್ಕೆ ಓಕೆ ಅಂದರೆ ಇಬ್ಬರು ಬಿಗ್ ಸ್ಟಾರ್ ಗಳ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡುವ ಸೌಭಾಗ್ಯ ಅಭಿಮಾನಿಗಳದ್ದಾಗಲಿದೆ.

English summary
Director Nagashekar has approached Akshara Haasan for his new film 'November Nalli Nannu Avalu'. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada