»   » ಬುಲೆಟ್ ಏರಿ ಬಂದ ಮೂಗುತಿ ಸುಂದರಿ ಶ್ರುತಿ ಹರಿಹರನ್

ಬುಲೆಟ್ ಏರಿ ಬಂದ ಮೂಗುತಿ ಸುಂದರಿ ಶ್ರುತಿ ಹರಿಹರನ್

Posted By: Naveen
Subscribe to Filmibeat Kannada

ಯಾವಾಗಲೂ ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿಯೇ ಇರುವ ಚಂದನವನದ ಭರವಸೆಯ ನಟಿ ಶ್ರುತಿ ಹರಿಹರನ್. ಇತ್ತೀಚೆಗಷ್ಟೆ ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದ ಶ್ರುತಿ ಸದ್ಯ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರುತಿ ಹರಿಹರನ್ ಈಗ 'ಟೆಸ್ಲಾ' ಎಂಬ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ವಿಶೇಷವಾಗಿದೆಯಂತೆ. ಪಾತ್ರಕ್ಕಾಗಿ ಶ್ರುತಿ ಮೇಕ್ ಓವರ್ ಮಾಡಿಕೊಂಡಿದ್ದು, 'ಲೂಸಿಯ' ಬೆಡಗಿ ಇಲ್ಲಿ 'ಬಾಯ್ ಕಟ್' ಸುಂದರಿಯಾಗಿ ಬದಲಾಗಿದ್ದಾರೆ.['ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್]

ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಶ್ರುತಿ ಹೊಸ ಸಿನಿಮಾದ ಬಗ್ಗೆ ಕ್ಲೂ ನೀಡಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಅವರ ಲುಕ್ ಹೇಗಿರಲಿದೆ ಎಂಬುದನ್ನ ರಿವೀಲ್ ಮಾಡಿದ್ದಾರೆ. ಬುಲೆಟ್ ಏರಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವ ಶ್ರುತಿ ಹರಿಹರನ್ ಅವರ ಈ ಹೊಸ ಸಿನಿಮಾದ ಡೀಟೇಲ್ಸ್ ಇಲ್ಲಿದೆ ಓದಿ...

ಹೊಸ ಸಿನಿಮಾ ಶುರು

ಸದ್ಯ ಶ್ರುತಿ ಹರಿಹರನ್ ಕನ್ನಡದಲ್ಲಿ ಸಖತ್ ಬಿಜಿಯಾಗಿರುವ ನಟಿ. ಶ್ರುತಿ ಕೈನಲ್ಲಿ ಈಗ ಆರು ಸಿನಿಮಾಗಳಿವೆ. ಇದರ ಮಧ್ಯೆ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.[ವಿಮರ್ಶಕರ ಮನಸ್ಸನ್ನು ಉಸಿರುಗಟ್ಟಿಸಿದ ಉರ್ವಿಯ 'ಕ್ರಾಂತಿ' ]

ಟೈಟಲ್ ಫಿಕ್ಸ್

ಶ್ರುತಿ ಹರಿಹರನ್ ಅಭಿನಯದಲ್ಲಿ ಬರುತ್ತಿರುವ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಟೆಸ್ಲಾ' ಅನ್ನುವ ಹೆಸರನ್ನ ಇಟ್ಟಿದ್ದಾರೆ.['ದಿ ವಿಲನ್' ಜೊತೆ ಶೃತಿ ಹರಿಹರನ್‌ ಗೆ ಏನು ಕೆಲಸ?]

ನಿರ್ದೇಶಕ ಯಾರು..?

'ಟೆಸ್ಲಾ' ಸಿನಿಮಾಗೆ ವಿನೋದ್.ಜೆ ರಾಜ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ಇವರು 'ಯಶೋಗಾಥೆ' ಎನ್ನುವ ಸಿನಿಮಾವನ್ನ ಮಾಡಿದ್ರಂತೆ.[ಪ್ರೀತಿ ಗೊತ್ತಿರುವ ಎಲ್ಲರಿಗಾಗಿ ಲವ್ ಸಾಂಗ್ ಬಿಡುಗಡೆ: ಶೃತಿ ಹರಿಹರನ್]

ಡಿಫರೆಂಟ್ ಲುಕ್

ಈ ಸಿನಿಮಾದ ಫೋಟೋಶೂಟ್ ಈಗಾಗಲೇ ಆಗಿದೆ. ಸಿನಿಮಾದಲ್ಲಿ ಶೃತಿ ಲುಕ್ ಹೇಗಿರುತ್ತೆ ಎನ್ನುವ ಝಲಕ್ ಹೊರಬಿದ್ದಿದೆ. ಬಾಯ್ ಕಟ್ ಲುಕ್ ನಲ್ಲಿ ಬುಲೆಟ್ ಮೇಲೆ ಸಖತ್ ಸ್ಟೈಲಿಷ್ ಆಗಿ ಶ್ರುತಿ ಮಿಂಚಿದ್ದಾರೆ.

ಯಾವ ರೀತಿಯ ಸಿನಿಮಾ..?

'ಟೆಸ್ಲಾ' ಒಂದು ಪ್ರಯೋಗಾತ್ಮಕ ಸಿನಿಮಾ ಅಂತ ಹೇಳಲಾಗುತ್ತಿದೆ. ಸೈನ್ಸ್ ಫಿಕ್ಷನ್ ಕಥೆ ಚಿತ್ರದಲ್ಲಿದ್ದು, ಕಲಾತ್ಮಕ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಸದ್ಯದಲ್ಲೇ ಟೀಸರ್

ಸದ್ಯ 'ಟೆಸ್ಲಾ' ಸಿನಿಮಾದಲ್ಲಿನ ಶ್ರುತಿ ಹರಿಹರಿನ್ ಲುಕ್ ರಿವೀಲ್ ಆಗಿದೆ. ಚಿತ್ರದ ಟೀಸರ್ ರೆಡಿಯಾಗಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆಯಂತೆ.

ಶ್ರುತಿ ಸಿಕ್ಕಾಪಟ್ಟೆ ಬಿಜಿ

ಸದ್ಯ ಆರು ಸಿನಿಮಾಗಳು ಶ್ರುತಿ ಕೈನಲ್ಲಿದೆ. ಅದರಲ್ಲಿ 'ಉಪೇಂದ್ರ ಮತ್ತೆ ಹುಟ್ಟಿ ಬಾ', 'ದಿ ವಿಲನ್', 'ತಾರಕ್' ರೀತಿಯ ದೊಡ್ಡ ಸಿನಿಮಾಗಳು ಸಹ ಇದೆ. ಇದನೆಲ್ಲ ನೋಡಿದರೆ ಗೊತ್ತಾಗುತ್ತೆ ಶ್ರುತಿ ಹರಿಹರನ್ ಡಿಮ್ಯಾಂಡ್ ಎಷ್ಟಿದೆ ಅಂತ.

English summary
Kannada Actress Sruthi Hariharan's new look for her upcoming movie 'Tesla'. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada