»   » ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ, ಈಕೆ ಯಾರು ಅಂತ ಹೇಳಿ..

ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ, ಈಕೆ ಯಾರು ಅಂತ ಹೇಳಿ..

Posted By:
Subscribe to Filmibeat Kannada
nandita shwetha

ಈ ಫೋಟೋದಲ್ಲಿರುವ ನಟಿಮಣಿ ಯಾರು ಅಂತ ಗೊತ್ತಾಯ್ತಾ. ಇಲ್ಲಾಂದ್ರೆ ಸ್ವಲ್ಪ ನಿಮ್ಮ ಮೈಂಡ್ ನ ರಿವೈಂಡ್ ಮಾಡಿಕೊಳ್ಳಿ...

'ಜಿಂಕೆಮರಿನಾ...ನೀ ಜಿಂಕೆಮರಿನಾ...' ಅಂತ ಲೂಸ್ ಮಾದ ಯೋಗಿ ಹಾಡಿದ್ದು ಈ ಹುಡುಗಿಗಾಗಿಯೇ ಅಂತ ಈಗ ನೆನಪಾಯ್ತಾ..?

ಹೌದು, ಅದು 2008. ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಲೆ ಇದ್ದ ಸಮಯ. ಆಗ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ 'ಜಿಂಕೆಮರಿ' ಆಗಿ ಎಂಟ್ರಿಕೊಟ್ಟವರೇ ಶ್ವೇತ ಅಲಿಯಾಸ್ ನಂದಿತಾ ಶ್ವೇತ.

ನಂದಿತಾ ಶ್ವೇತ ಬಗ್ಗೆ ನಾವೀಗ ಮಾತನಾಡುತ್ತಿರುವುದಕ್ಕೆ ಕಾರಣ 'ಪುಲಿ' ಸಿನಿಮಾ.

ಕಾಲಿವುಡ್ ನಲ್ಲಿ ಹೈ ಎಕ್ಸ್ ಪೆಕ್ಟೇಷನ್ಸ್ ಕ್ರಿಯೇಟ್ ಮಾಡಿರುವ 'ಪುಲಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡತಿ ನಂದಿತಾ ಶ್ವೇತ ನಟಿಸಿದ್ದಾರೆ. 'ಪುಲಿ' ಚಿತ್ರದಲ್ಲಿನ ಅವರ ಲುಕ್ ಔಟ್ ಆಗಿದೆ.

puli

'ಪುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವುದು ನಿಮಗೆ ಗೊತ್ತೇಯಿದೆ. ಸುದೀಪ್ ಜೊತೆ ಕನ್ನಡತಿ ನಂದಿತಾ ಶ್ವೇತ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಖುಷಿ ಕೊಟ್ಟಿದೆ. [ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]

'ನಂದ ಲವ್ಸ್ ನಂದಿತಾ' ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದ ನಂದಿತಾ ಶ್ವೇತ ಈಗ ಕಾಲಿವುಡ್ ನಲ್ಲೇ ಬಿಜಿಯಾಗಿದ್ದಾರೆ. 'ಎದಿರ್ ನೀಚಲ್', 'ಇದರ್ಕುತಾವೆ ಆಸೈ ಪಟ್ಟೈ ಬಾಲಕುಮಾರ', 'ಮುಂಡಾಸುಪಟ್ಟಿ' ಅಂತಹ ಹಿಟ್ ಸಿನಿಮಾಗಳನ್ನ ತಮಿಳಿನಲ್ಲಿ ನೀಡಿರುವ ನಂದಿತಾ ಶ್ವೇತ 'ಪುಲಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. [ಇಳೆಯದಳಪತಿ ವಿಜಯ್ 'ಪುಲಿ' ಆಡಿಯೋ ಲಾಂಚ್]

ಅಂದ್ಹಾಗೆ, 'ಪುಲಿ' ಸಿನಿಮಾದಲ್ಲಿ ನಂದಿತಾ ಶ್ವೇತ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅವರ ಲುಕ್ ನೋಡಿದ್ರೆ, ರಾಜಕುಮಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಾಗಿದೆ. [ಪ್ರೀತಿಯ ಮುಂದೆ ನಾನು ಹನಿ, ಎದುರಾಳಿ ಮುಂದೆ ನಾನು 'ಪುಲಿ']

ಲಾಂಗ್ ಗ್ಯಾಪ್ ನಂತರ ಶ್ರೀದೇವಿ 'ಪುಲಿ' ಮೂಲಕ ಬಣ್ಣ ಹಚ್ಚಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ವಿಜಯ್, ಹಂಸಿಕಾ ಮೋಟ್ವಾನಿ, ಶೃತಿ ಹಾಸನ್ ಲೀಡ್ ರೋಲ್ ನಲ್ಲಿರುವ 'ಪುಲಿ' ಅಕ್ಟೋಬರ್ 1 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.

English summary
Along with Kannada Actor Sudeep, Kannada Actress Nandita Shwetha of 'Nanda loves Nandita' fame has played the lead role in Vijay starrer Tamil movie 'Puli'. Check out the picture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada