»   » 'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

Posted By:
Subscribe to Filmibeat Kannada

ಇಷ್ಟು ದಿನ 'ಪ್ರೇಮ ಲೋಕ'ದ ಲವರ್ ಬಾಯ್ ಆಗಿ, 'ರಣಧೀರ'ನಾಗಿ, ಯಾವುದಕ್ಕೂ ಅಂಜದ ಗಂಡಾಗಿ, 'ಮಲ್ಲ'ನಾಗಿ, 'ಹಠವಾದಿ'ಯಾಗಿ ತೆರೆ ಮೇಲೆ ಮಿಂಚಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಇದೇ ಮೊಟ್ಟ ಮೊದಲ ಬಾರಿಗೆ 'ಕುರುಕ್ಷೇತ್ರ' ಚಿತ್ರದ ಮೂಲಕ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದ ಪ್ರತಿಷ್ಟಿತ ಸಿನಿಮಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ರವಿಚಂದ್ರನ್ 'ಶ್ರೀಕೃಷ್ಣ'ನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.


ಶ್ರೀಕೃಷ್ಣನ ಪಾತ್ರದಲ್ಲಿ ರವಿಚಂದ್ರನ್ ಹೇಗೆ ಕಾಣಿಸಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿಯೂ ಇದೆ. ಆ ಕುತೂಹಲಕ್ಕೆ ನಾವು ಬ್ರೇಕ್ ಹಾಕ್ತಿದ್ದೀವಿ. ಶ್ರೀಕೃಷ್ಣನ ಅವತಾರ ಎತ್ತಿರುವ ರವಿಮಾಮ ಹೇಗೆ ಕಾಣ್ತಾರೆ ಅಂತ ನೀವೇ ನೋಡ್ಬಿಡಿ...


ಶ್ರೀಕೃಷ್ಣ... ರವಿಚಂದ್ರನ್...

'ಶ್ರೀಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾಣುವುದು ಹೀಗೆ... ಆಶ್ಚರ್ಯ ಆಗ್ತಿದ್ಯಾ..? ಇವರು ರವಿಚಂದ್ರನ್ ಹೌದೋ, ಅಲ್ವೋ ಎಂಬ ಗೊಂದಲ ನಿಮಗೆ ಆಗುತ್ತಿರಬಹುದು. ಆದ್ರೆ ಇದೇ ಸತ್ಯ. ಕೈಯಲ್ಲಿ ಕೊಳಲು, ಕೊರಳಿಗೆ ಹಾರ, ತಲೆಗೆ ಕಿರೀಟ ಧರಿಸಿರುವವರು ಬೇರೆ ಯಾರೂ ಅಲ್ಲ... ರವಿಮಾಮನೇ.!


'ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್.!ಎಂಟು ಕೆಜಿ ತೂಕ ಕಮ್ಮಿ ಮಾಡಿಕೊಂಡ ರವಿಚಂದ್ರನ್

'ಕುರುಕ್ಷೇತ್ರ' ಚಿತ್ರಕ್ಕಾಗಿ 'ಶ್ರೀಕೃಷ್ಣ'ನ ಪಾತ್ರಕ್ಕಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟು ಕೆ.ಜಿ ತೂಕ ಕಮ್ಮಿ ಮಾಡಿಕೊಂಡಿದ್ದಾರೆ. ಸಾಲದಕ್ಕೆ ಮೀಸೆ ಕೂಡ ತೆಗೆದಿರುವುದರಿಂದ ರವಿಚಂದ್ರನ್ ಅವರನ್ನ 'ಶ್ರೀಕೃಷ್ಣ'ನ ಪಾತ್ರದಲ್ಲಿ ಥಟ್ ಅಂತ ಕಂಡು ಹಿಡಿಯುವುದು ಕಷ್ಟ.


'ಕುರುಕ್ಷೇತ್ರ' ಚಿತ್ರಕ್ಕಾಗಿ ಮೀಸೆ ಬೋಳಿಸಿದ ರವಿಚಂದ್ರನ್ ಹೀಗೆ ಕಾಣ್ತಾರೆ ನೋಡಿಮಾಂಸಾಹಾರ ಸೇವನೆ ಇಲ್ಲ

'ಶ್ರೀಕೃಷ್ಣ'ನ ಅವತಾರ ಎತ್ತಲು ಮಾಂಸಾಹಾರ ಸೇವನೆ ಹಾಗೂ ಕಾಫಿ ಕುಡಿಯುವುದನ್ನೂ ರವಿಚಂದ್ರನ್ ಕೈಬಿಟ್ಟಿದ್ದರು.


'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?ಕೊನೆಯ ಹಂತದ ಚಿತ್ರೀಕರಣದಲ್ಲಿ 'ಕುರುಕ್ಷೇತ್ರ'

ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ 'ಕುರುಕ್ಷೇತ್ರ' ತಂಡ ಬಿಜಿಯಾಗಿದೆ. ಮುಂದಿನ ವರ್ಷ 'ಕುರುಕ್ಷೇತ್ರ' ಸಿನಿಮಾ ತೆರೆ ಕಾಣಲಿದೆ.


English summary
Take a look at Kannada Actor Ravichandran, who is playing as Sri Krishna in Kannada Movie 'Kurukshetra'. ಶ್ರೀಕೃಷ್ಣನ ಅವತಾರ ಎತ್ತಿರುವ ರವಿಮಾಮ ಹೇಗೆ ಕಾಣ್ತಾರೆ ಅಂತ ನೀವೇ ನೋಡ್ಬಿಡಿ...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada