For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ಸಮಂತಾ ಯೂ-ಟರ್ನ್ ಹೊಡೆಯುವುದು ಯಾವಾಗ.?

  By Harshitha
  |

  ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು... ಡಿವೈಡರ್ ಕಲ್ಲನ್ನ ಪಕ್ಕಕ್ಕೆ ಸರಿಸಿ 'ಯು-ಟರ್ನ್' ತೆಗೆದುಕೊಂಡು ಹೋದವರು ನಿಗೂಢವಾಗಿ ಸಾವನ್ನಪ್ಪುವ ಸಸ್ಪೆನ್ಸ್-ಥ್ರಿಲ್ಲರ್ ಕಥಾನಕ ಹೊಂದಿರುವ ಸಿನಿಮಾ 'ಯು-ಟರ್ನ್'.

  ಕನ್ನಡದಲ್ಲಿ ತೆರೆಕಂಡ 'ಯು-ಟರ್ನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿತ್ತು. ಸ್ಯಾಂಡಲ್ ವುಡ್ ನಲ್ಲಿ 'ಯು-ಟರ್ನ್' ಮಾಡುತ್ತಿದ್ದ ಸೌಂಡ್ ಗೆ ಸಮಂತಾ ಕೂಡ ಬೆರಗಾಗಿದ್ದರು. ಇದಾದ್ಮೇಲೆಯೇ, ಟಾಲಿವುಡ್ ನಲ್ಲಿ 'ಯು-ಟರ್ನ್' ಪ್ಲಾನ್ ಆಗಿದ್ದು.

  ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ 'ಯು-ಟರ್ನ್' ಸಿನಿಮಾ ರೆಡಿ ಆಗಿದೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ್ದ ಪಾತ್ರಕ್ಕೆ ತೆಲುಗು ಹಾಗೂ ತಮಿಳಿನಲ್ಲಿ ಸಮಂತಾ ಅಕ್ಕಿನೇನಿ ಬಣ್ಣ ಹಚ್ಚಿದ್ದಾರೆ.

  ಈಗಾಗಲೇ, ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ತೆಲುಗು, ತಮಿಳಿನ 'ಯು-ಟರ್ನ್' ಚಿತ್ರದ ಫಸ್ಟ್ ಲುಕ್ ಔಟ್ ಆಗಿದ್ದು, ಸೆಪ್ಟೆಂಬರ್ 13 ರಂದು ಸಿನಿಮಾ ರಿಲೀಸ್ ಆಗಲಿದೆ. ಮುಂದೆ ಓದಿರಿ....

  ಸಂತಸದಲ್ಲಿ ಪವನ್ ಕುಮಾರ್

  ''ಕಥೆ ಹೇಳುವಲ್ಲಿ ಹೊಸ ಅನುಭವ ಕೊಟ್ಟ ಚಿತ್ರ ಇದು. ಪ್ರತಿಭಾವಂತ ಚಿತ್ರತಂಡದಿಂದ ನಾನು ತುಂಬಾ ಕಲಿತಿದ್ದೇನೆ'' ಎನ್ನುವ ಮೂಲಕ 'ಯು-ಟರ್ನ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಪವನ್ ಕುಮಾರ್.

  'ಯೂ ಟರ್ನ್' ರಿಮೇಕ್ ಸಿನಿಮಾದಲ್ಲಿ ಸಮಂತಾ ನಟಿಸುವುದು ಪಕ್ಕಾ!'ಯೂ ಟರ್ನ್' ರಿಮೇಕ್ ಸಿನಿಮಾದಲ್ಲಿ ಸಮಂತಾ ನಟಿಸುವುದು ಪಕ್ಕಾ!

  ನಟಿ ಸಮಂತಾ ಮಾಡಿರುವ ಟ್ವೀಟ್ ಏನು.?

  ''ಈ ಚಿತ್ರದ ಬಗ್ಗೆ ನನಗೆ ತುಂಬಾ ನಂಬಿಕೆ ಇದೆ. ಸೆಪ್ಟೆಂಬರ್ 13 ರಂದು ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ಬಿಡುಗಡೆ ಆದ್ಮೇಲೆ ನೀವೂ ಕೂಡ ಇದನ್ನೇ ಹೇಳ್ತೀರಾ ಎಂಬ ನಂಬಿಕೆ ನನಗೆ ಇದೆ'' ಎಂದು ಟ್ವೀಟಿಸಿದ್ದಾರೆ ನಟಿ ಸಮಂತಾ

  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

  ತಮಿಳು ಹಾಗೂ ತೆಲುಗಿನಲ್ಲಿ ಮೂಡಿ ಬರುತ್ತಿರುವ 'ಯು-ಟರ್ನ್' ಚಿತ್ರದ ಫಸ್ಟ್ ಲುಕ್ ನ ಖ್ಯಾತ ಟ್ರೇಡ್ ಎಕ್ಸ್ ಪರ್ಟ್ ತರಣ್ ಆದರ್ಶ್ ಕೂಡ ಟ್ವೀಟ್ ಮಾಡಿದ್ದಾರೆ. ಸದ್ಯ ಟ್ವಿಟ್ಟರ್ ನಲ್ಲಿ 'ಯು-ಟರ್ನ್' ಫಸ್ಟ್ ಲುಕ್ ಟ್ರೆಂಡಿಂಗ್ ಆಗುತ್ತಿದೆ.

  ಬಿಡುಗಡೆ ಯಾವಾಗ.?

  ಬಿಡುಗಡೆ ಯಾವಾಗ.?

  ತೆಲುಗು ಹಾಗೂ ತಮಿಳಿನಲ್ಲಿ ರೆಡಿ ಆಗಿರುವ 'ಯು-ಟರ್ನ್' ಚಿತ್ರದಲ್ಲಿ ಸಮಂತಾ ಅಕ್ಕಿನೇನಿ, ರಾಹುಲ್ ರವೀಂದ್ರನ್, ಭೂಮಿಕಾ ಚಾವ್ಲಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರಕ್ಕೂ ಕನ್ನಡಿಗ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 13 ರಂದು ಬಿಡುಗಡೆ ಆಗಲಿದೆ.

  English summary
  Tollywood Actress Samantha starrer Telugu-Tamil bi-lingual 'U-Turn' first look is out. Take a look at the poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X