'ಬಾಹುಬಲಿ' ಆಯ್ತು, 'ಉಪ್ಪಿಟು' ಗಣೇಶ ಉಲ್ಟಾ ನಿಂತ ನೋಡಿ..
'ವೀರಪ್ಪನ್' ಗಣೇಶ ಆಯ್ತು, ಕೂಲಿಂಗ್ ಗ್ಲಾಸ್ ಗಣೇಶ ಕೂಡ ಬಂದು ಹೋಯ್ತು. 'ಒಬಾಮಾ' ಮತ್ತು 'ಬಿನ್ ಲಾಡೆನ್' ಗಣೇಶ ಔಟ್ ಡೇಟೆಡ್ ಬಿಡಿ. ಈಗೇನಿದ್ದರೂ 'ಉಪ್ಪಿ-2' ಹವಾ.
ಹೌದು, ಗಣಪತಿಗೂ ಕಡುಬು, ಕರ್ಜಿಕಾಯಿ, ಮೋದಗ ಬಿಟ್ಟು ಈ ಬಾರಿ 'ಉಪ್ಪಿಟ್ಟು' ಬಯಕೆ ಆಗಿದೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ....

ಯೆಸ್, ಗಣೇಶ-ಗೌರಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ವಿಧವಿಧವಾದ ಗಣಪತಿ ಪ್ರತಿಮೆಗಳು ತಯಾರಾಗುತ್ತಿರುವಾಗಲೇ 'ಉಪ್ಪಿಟ್ಟು' ಗಣಪತಿ ಕೂಡ ರೆಡಿಯಾಗಿ ತಲೆಕೆಳಗಾಗಿ ನಿಂತಿದ್ದಾನೆ.
'ಉಪ್ಪಿ-2' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೀಗೆ ತಲೆಕೆಳಗಾಗಿ ನಿಂತುಕೊಂಡು ಎಲ್ಲರ ತಲೆಗೆ ಹುಳ ಬಿಟ್ಟಿದ್ದರು. ಉಪೇಂದ್ರ ಅವರ ಈ ಪೋಸ್ ಸಖತ್ ಪಾಪ್ಯುಲರ್ ಆಗಿತ್ತು. ಆ ಜನಪ್ರಿಯತೆಗೆ ಈ ಗಣೇಶ ಉತ್ತಮ ಉದಾಹರಣೆ. [ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್]
ಅಸಲಿಗೆ, ಈ ಉಪ್ಪಿಟ್ಟು ಗಣೇಶನ ಫೋಟೋ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. ಇದರ ತಯಾರಕರು ಯಾರು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ.

'ಬಾಹುಬಲಿ' ಗಣೇಶನ ನಂತ್ರ ಈಗ ಉಪ್ಪಿಟ್ಟು ಗಣೇಶ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ['ಬಾಹುಬಲಿ' ಗಣೇಶ ಬಂದ ನೋಡಿ...]


Click it and Unblock the Notifications











