India
  For Quick Alerts
  ALLOW NOTIFICATIONS  
  For Daily Alerts

  ಮುದ್ದು ರಾಜಕುಮಾರಿಗೆ ತಾಯಿಯಾದ 'ಸಖತ್ ಹಾಟ್' ವೀಣಾ ಮಲಿಕ್

  By Harshitha
  |

  'ಸಿಲ್ಕ್' ಚಿತ್ರದ ಮೂಲಕ ಗಾಂಧಿನಗರದ ಪಡ್ಡೆಗಳ ಮೈ ಬಿಸಿ ಏರಿಸಿದ್ದ ಪಾಕ್ ತುಪಾಕಿ ವೀಣಾ ಮಲಿಕ್ ಗೆ ಹೆಣ್ಣು ಮಗುವಾಗಿದೆ. ಕಳೆದ ಬುಧವಾರ (ಸೆಪ್ಟೆಂಬರ್ 23) ಅಮೇರಿಕದ ವರ್ಜಿನಿಯಾದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವೀಣಾ ಮಲಿಕ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಅಂದೇ, ಪುಟಾಣಿಗೆ ಅಮಾಲ್ ಅಸಾದ್ ಖಾನ್ ಅಂತ ನಾಮಕರಣ ಕೂಡ ಮಾಡಿದ್ದಾರೆ ವೀಣಾ ಮಲಿಕ್ ಮತ್ತು ಪತಿ ಅಸಾದ್ ಬಶೀರ್ ಖಾನ್. [ನಟಿ ವೀಣಾ ಮಲಿಕ್ ಗೆ ಗಂಡನ ಪ್ರೇಮದ ಕಾಣಿಕೆ]

  ಪಾಕ್ ನಟಿ ವೀಣಾ ಮಲಿಕ್, ಬಿಸಿನೆಸ್ಮೆನ್ ಅಸಾದ್ ಬಶೀರ್ ಖಾನ್ ರನ್ನ ಮದುವೆಯಾಗಿದ್ದು 2013ರಲ್ಲಿ. ಇಬ್ಬರ ದಾಂಪತ್ಯದ ಫಲವಾಗಿ ಕಳೆದ ವರ್ಷ ಅವರಿಗೆ ಗಂಡು ಮಗು ಪ್ರಾಪ್ತಿಯಾಗಿತ್ತು. [ಸಖತ್ ಹಾಟ್ ಬೆಡಗಿ ವೀಣಾ ಮಲಿಕ್ ಗೆ ಶಾದಿಭಾಗ್ಯ]

  ವಿಶೇಷ ಅಂದ್ರೆ, ವೀಣಾ ಮಲಿಕ್-ಅಸಾದ್ ಬಶೀರ್ ಖಾನ್ ದಂಪತಿಯ ಇಬ್ಬರು ಮಕ್ಕಳ ಹುಟ್ಟಿದ ತಾರೀಖು ಒಂದೇ (ಸೆಪ್ಟೆಂಬರ್ 23). ಈ ಸಂತಸವನ್ನ ಟ್ವಿಟ್ಟರ್ ನಲ್ಲಿ ಸತಿ-ಪತಿ ಹಂಚಿಕೊಂಡಿದ್ದಾರೆ.

  English summary
  Pakistani Actress Veena Malik and husband Asad Bashir Khan Khattak have been blessed with a baby girl on Wednesday (September 23rd).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X