»   » ನಟಿ ಭಾವನಾ-ಕನ್ನಡಿಗ ನವೀನ್ ನಿಶ್ಚಿತಾರ್ಥ ಸಂಭ್ರಮದ ಕಲರ್ ಫುಲ್ ಚಿತ್ರಗಳು

ನಟಿ ಭಾವನಾ-ಕನ್ನಡಿಗ ನವೀನ್ ನಿಶ್ಚಿತಾರ್ಥ ಸಂಭ್ರಮದ ಕಲರ್ ಫುಲ್ ಚಿತ್ರಗಳು

Posted By:
Subscribe to Filmibeat Kannada

ಎಲ್ಲ ಊಹಾಪೋಹಗಳಿಗೆ... ಸಕಲ ಗಾಸಿಪ್ ಗಳಿಗೆ ಬ್ರೇಕ್ ಹಾಕಿ ನಟಿ ಭಾವನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದು ತಾವು ನಾಲ್ಕು ವರ್ಷಗಳಿಂದ ಪ್ರೀತಿಸಿದ ನವೀನ್ ಜೊತೆಗೆ.!

ಹೌದು, ನಟಿ ಭಾವನಾ ಹಾಗೂ ಕನ್ನಡ ಚಿತ್ರ ನಿರ್ಮಾಪಕ ನವೀನ್ ರವರ ನಿಶ್ಚಿತಾರ್ಥ ಸರಳವಾಗಿ ಕೇರಳದ ಕೊಚ್ಚಿಯಲ್ಲಿ ನೆರವೇರಿದೆ. ಭಾವನಾ-ನವೀನ್ ನಿಶ್ಚಿತಾರ್ಥ ಸಮಾರಂಭದ ಕಲರ್ ಫುಲ್ ಚಿತ್ರಗಳು ಇಲ್ಲಿವೆ... ಕಣ್ತುಂಬಿಕೊಳ್ಳಿ...

ನಿಶ್ಚಿತಾರ್ಥದಲ್ಲಿ ಕಂಗೊಳಿಸಿದ ನಟಿ ಭಾವನಾ

ಕೇಸರಿ ಹಾಗೂ ಕಂದು ಬಣ್ಣ ಮಿಶ್ರಿತ ನೆಟ್ಟೆಡ್ ಸೀರೆ ತೊಟ್ಟು ನಿಶ್ಚಿತಾರ್ಥ ಸಮಾರಂಭದಲ್ಲಿ ನಟಿ ಭಾವನಾ ಮಿರ ಮಿರ ಮಿಂಚಿದ್ದು ಹೀಗೆ....

ಉಂಗುರ ತೊಡಿಸಿದ ಕ್ಷಣ

ನಟಿ ಭಾವನಾ ರವರಿಗೆ ನಿರ್ಮಾಪಕ ನವೀನ್ ಉಂಗುರ ತೊಡಿಸಿದ ಅದ್ಭುತ ಕ್ಷಣ ಕ್ಯಾಮರಾ ಕಂಗಳಲ್ಲಿ ಸೆರೆ ಆಗಿರುವುದು ಹೀಗೆ...

ಕೇಕ್ ಕತ್ತರಿಸಿ ಸಂಭ್ರಮಸಿದ ಜೋಡಿ...

ಉಂಗುರ ತೊಡಿಸಿದ ಬಳಿಕ ಕೇಕ್ ಕತ್ತರಿಸಿ ನವ ಜೋಡಿ ಸಂಭ್ರಮಿಸಿದರು. [ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ್ರು ನಟಿ 'ಜಾಕಿ' ಭಾವನಾ.!]

ಮೊದಲ ಸೆಲ್ಫಿ

ನಿಶ್ಚಿತಾರ್ಥ ಸಮಾರಂಭದಲ್ಲಿ ನಟಿ ಭಾವನಾ ಹಾಗೂ ನವೀನ್ ಕ್ಲಿಕ್ ಮಾಡಿಕೊಂಡ ಮೊದಲ ಸೆಲ್ಫಿ ಇದು.[ನಿರ್ಮಾಪಕ ನವೀನ್ ಜೊತೆ 'ಜಾಕಿ' ಭಾವನಾ ಮದುವೆ ಯಾವಾಗ.? ಎಲ್ಲಿ.?]

ಆಪ್ತರಿಗಷ್ಟೇ ಆಹ್ವಾನ

ನಟಿ ಭಾವನಾ-ನವೀನ್ ನಿಶ್ಚಿತಾರ್ಥ ಸಮಾರಂಭದಲ್ಲಿ ಉಭಯ ಕುಟುಂಬದವರು ಹಾಗೂ ಮಾಲಿವುಡ್ ಚಿತ್ರರಂಗದಿಂದ ಕೆಲವೇ ಕೆಲವು ಮಂದಿ ಮಾತ್ರ ಭಾಗವಹಿಸಿದ್ದರು. ತಮ್ಮ ಆಪ್ತರಿಗಷ್ಟೇ ನಟಿ ಭಾವನಾ ಹಾಗೂ ನವೀನ್ ಆಹ್ವಾನ ನೀಡಿದ್ದರು.['ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?]

ಜೋಡಿ ಹೇಗಿದೆ.?

ಈಗಷ್ಟೇ ಎಂಗೇಜ್ ಆಗಿರುವ ನವ ಜೋಡಿ ಹೇಗಿದೆ.? ಮೇಡ್ ಫಾರ್ ಈಚ್ ಅದರ್ ಅಂತ ಅನ್ಸಲ್ವಾ.?

English summary
Kannada Actress Bhavana got engaged to Kannada Producer Naveen at a private function in Kochi. Take a loot at the Engagement Pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada