For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಸಿನಿಮಾದಲ್ಲಿ ಅಂಬರೀಶ್, ಶ್ರೀನಾಥ್ ಹೀಗೆ ಕಾಣ್ತಾರೆ ನೋಡಿ...

  By Harshitha
  |
  Kurukshetra : Ambareesh and srinath different look in kurukshetra Movie

  'ಕುರುಕ್ಷೇತ್ರ' ಸಿನಿಮಾದಲ್ಲಿ 'ದುರ್ಯೋಧನ' ಪಾತ್ರ ನಿರ್ವಹಿಸುತ್ತಿರುವ ನಟ ದರ್ಶನ್ ರವರ ಲುಕ್ ಈಗಾಗಲೇ ಬಹಿರಂಗ ಆಗಿದೆ. 'ದುರ್ಯೋಧನ'ನಾಗಿ ದರ್ಶನ್ ಹೇಗೆ ಕಾಣಿಸಿಕೊಳ್ತಾರೆ ಎಂಬ ಕುತೂಹಲಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ.

  ಆದ್ರೆ, 'ಕುರುಕ್ಷೇತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟ ಅಂಬರೀಶ್ ಹೇಗೆ ಕಾಣಿಸಿಕೊಳ್ಳಬಹುದು, ಉಳಿದ ನಟರ ಲುಕ್ ಹೇಗಿರಬಹುದು ಎಂಬ ಕೌತುಕ ಸಹಜವಾಗಿ ಅನೇಕರಲ್ಲಿ ಇರಬಹುದು.

  ಅಂಥವರಿಗಾಗಿ 'ಕುರುಕ್ಷೇತ್ರ' ಅಂಗಳದಿಂದ ನಾವು ಕೆಲ ಫೋಟೋಗಳನ್ನು ಹೊತ್ತು ತಂದಿದ್ದೇವೆ. ಭೀಷ್ಮ ಪಿತಾಮಹ ಹಾಗೂ ಧೃತರಾಷ್ಟ್ರ ಹೇಗ್ ಕಾಣ್ತಾರೆ ಅಂತ ನೀವೇ ನೋಡ್ಕೊಂಡ್ ಬನ್ನಿ...

  'ಭೀಷ್ಮ' ಅಂಬರೀಶ್

  'ಭೀಷ್ಮ' ಅಂಬರೀಶ್

  'ಕುರುಕ್ಷೇತ್ರ' ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ 'ಭೀಷ್ಮ' ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. 'ಭೀಷ್ಮ'ನಾಗಿ ಅಂಬಿ ಹೀಗೆ ಕಾಣ್ತಾರೆ ನೋಡಿ...

  ಪ್ರಣಯರಾಜ ಶ್ರೀನಾಥ್

  ಪ್ರಣಯರಾಜ ಶ್ರೀನಾಥ್

  'ಕುರುಕ್ಷೇತ್ರ' ಸಿನಿಮಾದಲ್ಲಿ ನಟ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಹಾಸನದ ಮೇಲೆ ಆಸೀನರಾಗಿರುವ ಶ್ರೀನಾಥ್ ರವರ ದರ್ಬಾರ್ ಹೀಗಿದೆ ನೋಡಿ....

  ಹೈದರಾಬಾದ್ ನಲ್ಲಿ ಚಿತ್ರೀಕರಣ

  ಹೈದರಾಬಾದ್ ನಲ್ಲಿ ಚಿತ್ರೀಕರಣ

  ಕಳೆದ ತಿಂಗಳಿನಿಂದ ಸತತವಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಒಂದು ಹಾಡು ಹಾಗೂ ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

  ದೊಡ್ಡ ತಾರಾಬಳಗ

  ದೊಡ್ಡ ತಾರಾಬಳಗ

  ದರ್ಶನ್, ಹರಿಪ್ರಿಯಾ, ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ರವಿಚೇತನ್, ಅಂಬರೀಶ್, ಶಶಿಕುಮಾರ್, ಶ್ರೀನಾಥ್, ಲಕ್ಷ್ಮಿ, ಸ್ನೇಹ, ನಿಖಿಲ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿ ಇದೆ. ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Take a look at Kannada Actor Ambareesh and Srinath's look in Darshan starrer Kannada Movie 'Kurukshetra'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X