»   » ಏನು... ಆಂಕರ್ ಕಮ್ ನಟಿ ಅನುಶ್ರೀ ಮದುವೆ ಆಗೋಯ್ತಾ.!?

ಏನು... ಆಂಕರ್ ಕಮ್ ನಟಿ ಅನುಶ್ರೀ ಮದುವೆ ಆಗೋಯ್ತಾ.!?

Posted By:
Subscribe to Filmibeat Kannada

ಚಿಕ್ಕಣ್ಣ ಜೊತೆ ಅನುಶ್ರೀಗೆ ಲವ್ ಆಗಿದೆ ಅಂತ ಯಾರು ಗುಸು ಗುಸು ಹಬ್ಬಿಸಿದ್ರೋ, ಗೊತ್ತಿಲ್ಲ. ಇಡೀ ಗಾಂಧಿನಗರದಲ್ಲಿ ಅನುಶ್ರೀ ಲವ್ ಸ್ಟೋರಿ ಗಿರಕಿ ಹೊಡೆದ್ಮೇಲೆ, ''ಚಿಕ್ಕಣ್ಣ ಜೊತೆ ನಂಗೆ ಲವ್ ಆಗಿಲ್ಲ. ಚಿಕ್ಕಣ್ಣ ಫೋನ್ ನಂಬರ್ ಕೂಡ ನನ್ನ ಹತ್ತಿರ ಇಲ್ಲ. ಅಷ್ಟಕ್ಕೂ ನಾನು ಈಗಲೇ ಮದುವೆ ಆಗಲ್ಲ'' ಅಂತ ಅನುಶ್ರೀ ಹೇಳಿದ್ದರು.

ಈಗ ನೋಡಿದ್ರೆ... ರೇಶ್ಮೆ ಸೀರೆ ಉಟ್ಟು, ಅಡಿಯಿಂದ ಮುಡಿವರೆಗೆ ಸಿಂಗರಿಸಿಕೊಂಡು ಮದುವಣಗಿತ್ತಿಯಾಗಿ ನಟಿ ಅನುಶ್ರೀ ಹಸೆಮಣೆ ಏರಿದ್ದಾರೆ.![ಅನುಶ್ರೀ-ಚಿಕ್ಕಣ್ಣ ಬಗ್ಗೆ ಹಬ್ಬಿರುವ 'ಮದುವೆ' ಗಾಸಿಪ್ ನಿಜವೇ.?]

ಏನು..! ಸದ್ದಿಲ್ಲದೇ ನಟಿ ಅನುಶ್ರೀ ಮದುವೆ ಆಗೋದ್ರಾ.?! ಅಂತ ಕಣ್ಣು ಬಾಯಿ ಬಿಡುವ ಮೊದಲು ಪೂರ ಮ್ಯಾಟರ್ ಓದ್ಕೊಂಡ್ಬಿಡಿ....

ಮದುಮಗಳಾಗಿ ನಟಿ ಅನುಶ್ರೀ

ಮದುವಣಗಿತ್ತಿಯಾಗಿ ನಟಿ ಅನುಶ್ರೀ ಹೇಗೆ ಮಿರ ಮಿರ ಮಿಂಚ್ತಿದ್ದಾರೆ ಅಂತ ನೀವೇ ಸ್ವಲ್ಪ ನೋಡಿ....

ತಾಳಿ ಕಟ್ಟಿಸಿಕೊಂಡ ಅನುಶ್ರೀ

ಉಡುಪಿಯ ಮಣಿಪಾಲದಲ್ಲಿ ಇರುವ ಆರ್.ಎಸ್.ಬಿ ಸಭಾ ಭವನದಲ್ಲಿ ಅನುಶ್ರೀ ಮದುವೆ ನಡೆಯಿತು. ಆದ್ರೆ, ಅದು ಸಿನಿಮಾಗಾಗಿ ಮಾತ್ರ ನಡೆದ ವಿವಾಹ ಅನ್ನೋದು ನಿಮಗೆ ಗೊತ್ತಿರಲಿ.[ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?]

ಯಾವ ಸಿನಿಮಾ.?

ಕೋಸ್ಟಲ್ ವುಡ್ ನ 'ಕೋರಿ ರೊಟ್ಟಿ' ಎಂಬ ಹೈ ಬಜೆಟ್ ಚಿತ್ರದಲ್ಲಿ ಆಂಕರ್ ಅನುಶ್ರೀ ನಟಿಸುತ್ತಿದ್ದಾರೆ. 'ಕೋರಿ ರೊಟ್ಟಿ' ಚಿತ್ರದಲ್ಲಿ ಬರುವ ಮದುವೆ ಸನ್ನಿವೇಶದ ಚಿತ್ರೀಕರಣವಿದು ಅಷ್ಟೇ.

'ಕೋರಿ ರೊಟ್ಟಿ' ಕುರಿತು...

ಉಡುಪಿಯ ರಜನೀಶ್ ನಾಯಕನಾಗಿ ನಟಿಸಿ, ನಿರ್ದೇಶನ ಮಾಡುತ್ತಿರುವ ಚಿತ್ರ ಇದು. ದುಬೈ ಉದ್ಯಮಿಗಳು 'ಕೋರಿ ರೊಟ್ಟಿ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರದಲ್ಲಿ ನವೀನ್ ಪಡೀಲ್, ಅರವಿಂದ್ ಬೋಳಾರ್, ಇಳಾ ವಿಟ್ಲ ಅಭಿನಯಿಸುತ್ತಿದ್ದಾರೆ.

ನಟಿ ಅನುಶ್ರೀ ಏನಂದರು.?

ಮದುವೆ ಸನ್ನಿವೇಶದ ಶೂಟಿಂಗ್ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ ಅನುಶ್ರೀ, ''ರೀಲ್ ಮದುವೆ ಆಯ್ತು. ರಿಯಲ್ಲಾಗಿ ಮದುವೆ ಸದ್ಯಕ್ಕಿಲ್ಲ. ಒಳ್ಳೆ ಹುಡುಗ ಸಿಕ್ಕರೆ ಆಗುತ್ತೇನೆ'' ಎಂದರು.

English summary
Anchor Anushree is playing lead in Tulu Movie 'Kori Rotti'. Check out Anushree marriage sequence shooting pics here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada