For Quick Alerts
  ALLOW NOTIFICATIONS  
  For Daily Alerts

  'ಕಬಾಲಿ' ರಜನಿಯ ಹುಚ್ಚು ಅಭಿಮಾನಿಗಳ 10 ಮುಖಗಳು!

  By Harshitha
  |

  ರಜನಿ ಅಂದ್ರೇನೇ ಮ್ಯಾಜಿಕ್. ರಜನಿಕಾಂತ್ ಚಿತ್ರಗಳು ತೆರೆಗೆ ಬರುತ್ತಿವೆ ಅಂದ್ರೆ ಸಾಕು, ಬಾಕ್ಸ್ ಆಫೀಸ್ ಕೂಡ ಅಲುಗಾಡುತ್ತೆ. ರಜನಿ ಅಭಿಮಾನಿಗಳಿಗೆ ಹಾರ್ಟ್ ಬೀಟ್ ರೇಸ್ ಆಗುತ್ತೆ. ಎಲ್ಲೆಡೆ ಕುತೂಹಲ ಗರಿಗೆದರಿ ನಿಲ್ಲುತ್ತೆ. ಎಲ್ಲಾ ಥಿಯೇಟರ್ ಗಳು ತುಂಬಿ ತುಳುಕುತ್ತೆ. ಹಳೇ ರೆಕಾರ್ಡ್ ಗಳೆಲ್ಲಾ ಉಡೀಸ್ ಆಗುತ್ತೆ. ಅಷ್ಟಿಲ್ದೇ ರಜನಿಕಾಂತ್ ಗೆ 'ಗಾಡ್ ಆಫ್ ಸೌತ್ ಸಿನಿಮಾ' ಅಂತಾರಾ.?

  ರಜನಿ ಸಿನಿಮಾ ಇವತ್ತು ರಿಲೀಸ್ ಆಗುತ್ತೆ ಅಂದ್ರೆ ಅಲ್ಲಿಗೆ ಬಾಕಿ ಎಲ್ಲವೂ ಇಂದು ಸ್ತಬ್ಧ ಅಂತಲೇ ಅರ್ಥ. ಎಂತಹ ಕೆಲಸನೇ ಇದ್ದರೂ, ಅವತ್ತಿಗೆ ರಜನಿನೇ ಫಸ್ಟ್ ಪ್ರಿಫರೆನ್ಸ್. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ಹಣ್ಣು ಹಣ್ಣು ಮುದುಕಿಯರವರೆಗೂ ಎಲ್ಲರಿಗೂ 'ತಲೈವಾ'ನದ್ದೇ ಜಪ. [ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!]

  ಬರೀ ತಮಿಳುನಾಡಲ್ಲಿ ಮಾತ್ರ ಹೀಗೆ ಎನ್ನುವ ಹಾಗಿಲ್ಲ. ವಿಶ್ವದಾದ್ಯಂತ ರಜನಿ ಸಿನಿಮಾ ಎಲ್ಲೆಲ್ಲಿ ರಿಲೀಸ್ ಆಗುತ್ತೋ, ಎಲ್ಲಾ ಕಡೆಯಲ್ಲೂ ಇದೇ ಸೀನ್. ನಿಮ್ಮ ಬೆಂಗಳೂರಿನಲ್ಲೂ ಸೇಮ್ ಸಿಚ್ಯುಯೇಷನ್. [ಸಲ್ಮಾನ್ ಖಾನ್ ಗೂ ರಜನಿಕಾಂತ್ ಗೂ ಇರುವ ವ್ಯತ್ಯಾಸ ಇಷ್ಟೆ.!]

  ನಾಳೆ (ಜುಲೈ 22) 'ಕಬಾಲಿ' ರಿಲೀಸ್ ಆಗುತ್ತಿರುವುದರಿಂದ ಬೆಂಗಳೂರಿನ ಮೂಲೆ ಮೂಲೆಯಲ್ಲೂ ಸಂಭ್ರಮಾಚರಣೆ ಮುಗಿಲು ಮುಟ್ಟಿರುವ ಬಗ್ಗೆ ಫೋಟೋ ಸಮೇತ ನಿಮಗೆ ವರದಿ ತಲುಪಿಸ್ತಾಯಿದ್ದೀವಿ. ಓದಿರಿ.....

  ನಟರಾಜ ಚಿತ್ರಮಂದಿರ

  ನಟರಾಜ ಚಿತ್ರಮಂದಿರ

  ಬೆಂಗಳೂರಿನ ನಟರಾಜ ಚಿತ್ರಮಂದಿರದ ಮುಂದೆ ಒಂದಲ್ಲ, ಎರಡಲ್ಲ ರಜನಿಕಾಂತ್ ರವರ ಮೂರು ಕಟೌಟ್ ನಿಲ್ಲಿಸಲಾಗಿದೆ. [ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

  ಊರ್ವಶಿ ಚಿತ್ರಮಂದಿರ

  ಊರ್ವಶಿ ಚಿತ್ರಮಂದಿರ

  ಬೆಂಗಳೂರಿನ ಲಾಲ್ ಬಾಗ್ ಬಳಿ ಇರುವ ಊರ್ವಶಿ ಚಿತ್ರಮಂದಿರದಲ್ಲಿ ರಜನಿಕಾಂತ್ ಕಟೌಟ್ ಮತ್ತು ಪೋಸ್ಟರ್ ಗಳಿಂದ 'ಕೋಟೆ' ನಿರ್ಮಿಸಲಾಗಿದೆ. [ರಜನಿ ಭಕ್ತರಿಗೆ 'ಕಬಾಲಿ' ಕ್ಲೈಮ್ಯಾಕ್ಸ್ 'ಖುಷಿ' ಕೊಡಲ್ಲ.?]

  ಎಲ್ಲಿ ನೋಡಿದ್ರೂ ರಜನಿ ಮಯ.!

  ಎಲ್ಲಿ ನೋಡಿದ್ರೂ ರಜನಿ ಮಯ.!

  ಬೆಂಗಳೂರಿನ ಯಾವ ಥಿಯೇಟರ್ ಮುಂದೆ ನೋಡಿದ್ರೂ, ಸಾಲು ಸಾಲು ರಜನಿ ಪೋಸ್ಟರ್ ಗಳೇ ಕಣ್ಣಿಗೆ ರಾಚುತ್ತೆ. ['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

  ಕಾರ್ ಮೇಲೂ ರಜನಿ.!

  ಕಾರ್ ಮೇಲೂ ರಜನಿ.!

  ಲಕ್ಷಾಂತರ ರೂಪಾಯಿ ಕೊಟ್ಟು ಕೊಂಡುಕೊಂಡಿರುವ ಕಾರ್ ಮೇಲೂ ರಜನಿ ರಾರಾಜಿಸುತ್ತಿರುವ ಪರಿ ನೋಡಿ.

  ಅಭಿಮಾನಿಗಳ ಸಂಭ್ರಮ ನೋಡಿ...

  ಅಭಿಮಾನಿಗಳ ಸಂಭ್ರಮ ನೋಡಿ...

  'ಕಬಾಲಿ' ಚಿತ್ರ ಬಿಡುಗಡೆ ನಾಳೆ ಇದ್ದರೂ, ಇಂದೇ ಸಂಭ್ರಮಾಚರಣೆ ಶುರುವಾಗಿದೆ. [ಇದಕ್ಕೆ ಖುಷಿ ಪಡಬೇಕೋ, ತಲೆ ಚಚ್ಚಿಕೊಳ್ಳಬೇಕೋ, ನೀವೇ ನಿರ್ಧರಿಸಿ.!]

  ದಾರಿ ಉದ್ದಕ್ಕೂ 'ಕಬಾಲಿ'

  ದಾರಿ ಉದ್ದಕ್ಕೂ 'ಕಬಾಲಿ'

  ಕನ್ನಡದ ಯಾವುದೇ ಚಿತ್ರ ತೆರೆಕಂಡರೂ, ಇಷ್ಟೊಂದು ಪೋಸ್ಟರ್ ಗಳು ಕಾಣುತ್ತೋ, ಇಲ್ವೋ. ಆದ್ರೆ, 'ಕಬಾಲಿ' ಮತ್ತು ರಜನಿಕಾಂತ್ ಪೋಸ್ಟರ್ ಗಳು ಗಲ್ಲಿ ಗಲ್ಲಿಯಲ್ಲೂ ಹಾಕಲಾಗಿದೆ. [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

  ಬೈಕ್ ಮೇಲೂ ರಜನಿ.!

  ಬೈಕ್ ಮೇಲೂ ರಜನಿ.!

  ಬೈಕ್ ಮತ್ತು ಬಟ್ಟೆ ಮೇಲೂ ರಜನಿ ಭಾವಚಿತ್ರ ಅಂಟಿಸಿಕೊಂಡಿರುವ ಅಪ್ಪಟ ಅಭಿಮಾನಿ ಇವರು.

  'ಕಬಾಲಿ' ಕಾರ್

  'ಕಬಾಲಿ' ಕಾರ್

  ಸುಜುಕಿ ಸ್ವಿಫ್ಟ್ ನವರ 'ಕಬಾಲಿ' ಕಾರ್ ಇಲ್ಲಿದೆ ನೋಡಿ.

  ನಾಳೆ ಹಾಲಿನ ಅಭಿಷೇಕ ಇದೆ.!

  ನಾಳೆ ಹಾಲಿನ ಅಭಿಷೇಕ ಇದೆ.!

  ಚಿತ್ರಮಂದಿಗಳ ಮುಂದೆ ನಿಲ್ಲಿಸಿರುವ ರಜನಿಕಾಂತ್ ರವರ ಬೃಹತ್ ಕಟೌಟ್ ಗಳಿಗೆ ನಾಳೆ ಹಾಲಿನ ಅಭಿಷೇಕ ಮಾಡಲಾಗುವುದು.

  ಹೂವಿನ ಅಲಂಕಾರ

  ಹೂವಿನ ಅಲಂಕಾರ

  ಹಾಲಿನ ಅಭಿಷೇಕ ಮುಗಿದ ನಂತರ ಹೂವಿನ ಅಲಂಕಾರ ಕೂಡ ಮಾಡಲಾಗುತ್ತೆ. ರಜನಿ ಅಪ್ಪಟ ಅಭಿಮಾನಿಗಳಿಗೆ ನಾಳೆ ಅಕ್ಷರಶಃ ಪೊಂಗಲ್ ಹಬ್ಬ.

  English summary
  Silicon City Bengaluru has geared up for Super Star Rajinikanth starrer Tamil Movie 'Kabali' release. Here is a photo collection of fans craze in Bengaluru. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X