Just In
Don't Miss!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಗಳು: ಅದ್ಧೂರಿಯಾಗಿ ನಡೆದ ನಟಿ ರೂಪಶ್ರೀ ಮದುವೆ ಸಮಾರಂಭ.!
ಸ್ಯಾಂಡಲ್ ವುಡ್ ನ ನಟಿ ರೂಪಶ್ರೀ ಅವರು ತಾವು ಪ್ರೀತಿಸಿದ ಉದ್ಯಮಿ ನೀರಜ್ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಸಂಕ್ರಾಂತಿ', 'ಜಟಾಯು', 'ಸಿಗರೇಟ್', 'ಚಡ್ಡಿದೋಸ್ತ್' ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರೂಪಶ್ರೀ ಅವರ ಮದುವೆ ನವೆಂಬರ್ 26 ರಂದು ಕೊಲ್ಕತ್ತಾದಲ್ಲಿ ಸದ್ದಿಲ್ಲದೇ ನೆರವೇರಿದೆ.
ಉದ್ಯಮಿ ನೀರಜ್ ಹಾಗೂ ನಟಿ ರೂಪಶ್ರೀ ಅವರು ಪರಸ್ಪರ ಮೆಚ್ಚಿಕೊಂಡಿದ್ದರು, ಇದೀಗ ಎರಡೂ ಮನೆಯಲ್ಲಿ ಒಪ್ಪಿಗೆ ಪಡೆದು ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ್ದಾರೆ.
ಅಂದಹಾಗೆ ವರ ಉದ್ಯಮಿ ನೀರಜ್ ಅವರು ಮೂಲತಃ ಕೊಲ್ಕತ್ತಾದವರಾದ್ದರಿಂದ ಕೊಲ್ಕತ್ತಾದಲ್ಲಿ ಉತ್ತರ ಭಾರತದ ಸಂಪ್ರದಾಯದಂತೆ ಬಂಧು-ಬಾಂಧವರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ನಡೆದಿದೆ.[ಸದ್ದಿಲ್ಲದೇ ಎಂಗೇಜ್ ಆದ ನಟಿ ರೂಪಶ್ರೀ]
ನಟಿ ರೂಪಶ್ರೀ ಮತ್ತು ಉದ್ಯಮಿ ನೀರಜ್ ಅವರ ಮದುವೆಯ ಫೋಟೋ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಮೇ ತಿಂಗಳಲ್ಲಿ ನಿಶ್ಚಿತಾರ್ಥ ಆಗಿತ್ತು
ಕಳೆದ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಟಿ ರೂಪಶ್ರಿ ಅವರ ಮನೆಯಲ್ಲಿ ಈ ಸುಂದರ ಜೋಡಿಯ ನಿಶ್ಚಿತಾರ್ಥ ಸಂಭ್ರಮದಿಂದ ನೆರವೇರಿತ್ತು. ['ಫಿಲ್ಮಿಬೀಟ್ ಕನ್ನಡ' ಜೊತೆ ನವವಧು ರೂಪಶ್ರೀ ಚಿಟ್ ಚಾಟ್]

ಎರಡು ಕುಟುಂಬದ ಸಮ್ಮುಖದಲ್ಲಿ ಮದುವೆ
ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದು, ನಿನ್ನೆ (ನವೆಂಬರ್ 28) ಬೆಂಗಳೂರಿನಲ್ಲಿ ಆರತಕ್ಷತೆ ನೆರವೇರಿದೆ. ಕನ್ನಡ ಚಿತ್ರರಂಗದ ಸ್ನೇಹಿತರಿಗಾಗಿಯೇ ಬೆಂಗಳೂರಿನ ಇಂದಿರಾನಗರದಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು.

ಉತ್ತರ ಭಾರತದ ಮದುವೆ ಸಂಪ್ರದಾಯ
ಕೊಲ್ಕತ್ತಾದಲ್ಲಿ ನಟಿ ರೂಪಶ್ರೀ ಅವರ ಮದುವೆ ಉದ್ಯಮಿ ನೀರಜ್ ಅವರ ಜೊತೆ ಉತ್ತರ ಭಾರತದ ಸಂಪ್ರದಾಯದಂತೆ ಸಂಭ್ರಮದಿಂದ ನೆರವೇರಿದೆ.

ಮದುವಣಗಿತ್ತಿ ರೂಪಶ್ರೀ
ಮದುವೆಯ ಧಿರಿಸಿನಲ್ಲಿ ಮದುವಣಗಿತ್ತಿಯಾಗಿ ಕಂಗೊಳಿಸುತ್ತಿರುವ ನಟಿ ರೂಪಶ್ರೀ. ಲವ್ ಮ್ಯಾರೇಜ್ ನಲ್ಲಿ ನಂಬಿಕೆ ಇಟ್ಟಿರುವ ನಟಿ ರೂಪಶ್ರೀ ಅವರು ತಾವು ಅಂದುಕೊಂಡಂತೆ ಪ್ರೀತಿಸಿದ ನೀರಜ್ ಅವರನ್ನು ಮದುವೆಯಾಗಿದ್ದಾರೆ.

ಗಂಡನೊಂದಿಗೆ ಸೆಲ್ಫಿ
ಮದುವೆಯ ಕಾರ್ಯಕ್ರಮ ಮುಗಿದ ನಂತರ ನಟಿ ರೂಪ ಅವರು ಪತಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.

ಸ್ವೀಟ್ ರಾಜಸ್ತಾನಿ ಫ್ಯಾಮಿಲಿಗೆ ಕಾಲಿಟ್ಟ ರೂಪಶ್ರೀ
ಮೂಲ ರಾಜಸ್ತಾನಿ ಕುಟುಂಬದ ನೀರಜ್ ಅವರದು ಪುಟ್ಟ ಫ್ಯಾಮಿಲಿಯಂತೆ. ತುಂಬಾ ಸಾಫ್ಟ್ ಆಗಿರುವ ನೀರಜ್ ಅವರ ತಾಯಿಗೆ ರೂಪಶ್ರೀ ಅಂದರೆ ತುಂಬಾ ಇಷ್ಟವಂತೆ. ಅಲ್ಲದೇ ನೀರಜ್ ಫ್ಯಾಮಿಲಿಯಲ್ಲೂ ತುಂಬಾ ಲವ್ ಮ್ಯಾರೇಜ್ ಆಗಿರೋದ್ರಿಂದ ಇವರಿಗೆ ಸಮಸ್ಯೆ ಆಗಿಲ್ಲವಂತೆ.

ತಾಯಿಯೊಂದಿಗೆ ನಟಿ ರೂಪಶ್ರೀ
ಮದುವೆಯ ಹಿಂದಿನ ದಿನ ಮೆಹೆಂದಿ ಕಾರ್ಯಕ್ರಮದಲ್ಲಿ ತನ್ನ ಮುದ್ದು ತಾಯಿಯೊಂದಿಗೆ ಫೊಟೋ ಕ್ಕಿಕ್ಕಿಸಿಕೊಂಡ ನಟಿ ರೂಪಶ್ರೀ.

ಮೆಹೆಂದಿ ಹಾಕಿಸಿಕೊಂಡ ಮದುಮಗಳು
ಸಂಭ್ರಮದಿಂದ ಮೆಹೆಂದಿ ಹಾಕಿಸಿಕೊಳ್ಳುತ್ತಿರುವ ಮದುಮಗಳು ನಟಿ ರೂಪಶ್ರೀ. ಲವ್ ಮ್ಯಾರೇಜ್ ಆಗಿರುವುದರಿಂದ ಸಖತ್ ಎಕ್ಸೈಟ್ ಆಗಿದ್ದಾರಂತೆ 'ಸಂಕ್ರಾತಿ' ನಟಿ ರೂಪಶ್ರೀ.

ಮೆಹೆಂದಿಗೆ ಮುನ್ನ ಭಾವಿ ಪತಿಯೊಂದಿಗೆ ಫೋಸ್
ಸಂಭ್ರಮದಿಂದ ಮೆಹೆಂದಿ ಹಾಕಿಸಿಕೊಳ್ಳುತ್ತಿರುವ ಮದುಮಗಳು ನಟಿ ರೂಪಶ್ರೀ. ಲವ್ ಮ್ಯಾರೇಜ್ ಆಗಿರುವುದರಿಂದ ಸಖತ್ ಎಕ್ಸೈಟ್ ಆಗಿದ್ದಾರಂತೆ 'ಸಂಕ್ರಾತಿ' ನಟಿ ರೂಪಶ್ರೀ.

ನಟಿ ನೀತು
ಮದುವೆಯಾದ ನಂತರ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ನೀತುಶ್ರೀ ಮತ್ತು ರೂಪ ಅವರ ಹತ್ತಿರದ ಗೆಳೆಯರು ಭಾಗವಹಿಸಿದ್ದರು.

ಪಾರ್ಟಿಯಲ್ಲಿ ಅತಿಥಿಗಳು
ಮದುವೆಯ ನಂತರ ಬೆಂಗಳೂರಿನಲ್ಲಿ ಅತಿಥಿಗಳೊಂದಿಗೆ ಸಖತ್ ಪಾರ್ಟಿ ಎಂಜಾಯ್ ಮಾಡಿದ ನೂತನ ವಧುವರರು.

ಮದುಮಗಳು ರೂಪ
ಮದುವೆಯಾದ ನಂತರ ಸಂಪ್ರದಾಯಬದ್ಧ ಸೀರೆಯಲ್ಲಿ ಹಣೆಗೆ ಕುಂಕುಮ ಇಟ್ಟು ಕಂಗೊಳಿಸಿದ ನೂತನ ವಧು ನಟಿ ರೂಪಶ್ರೀ.