»   » ಚಿತ್ರಗಳಲ್ಲಿ ಸಿನಿಬ್ರಹ್ಮ 'ಕೆಬಿ' ಸಾರ್ ಗೆ ರಜನಿ ನಮನ

ಚಿತ್ರಗಳಲ್ಲಿ ಸಿನಿಬ್ರಹ್ಮ 'ಕೆಬಿ' ಸಾರ್ ಗೆ ರಜನಿ ನಮನ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತೀಯ ಚಲನಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಕೆ ಬಾಲಚಂದರ್ ಅವರ ಅಗಲಿಕೆಯ ನೋವಿನಲ್ಲಿ ಸಿನಿಪ್ರಿಯರು ಮುಳುಗಿದ್ದಾರೆ. ತಮಿಳುನಾಡಿನ ಚಿತ್ರರಂಗದ ರಜನಿಕಾಂತ್, ಕಮಲ್ ಹಾಸನ್, ರಾಜಕೀಯ ಮುಖಂಡರಾದ ಕರುಣಾನಿಧಿ, ಜಯಲಲಿತಾ, ವಿಜಯಕಾಂತ್ ಸೇರಿದಂತೆ ಹಲವಾರು ಗಣ್ಯರು ಕೆಬಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಬುಧವಾರ ಸಂಜೆ ಬೇಸಂತ್ ನಗರದ ಶವಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಸಿನಿಬ್ರಹ್ಮ ಕೆಬಿ ಅವರಿಗೆ ನಮನ ಸಲ್ಲಿಸುವ ಚಿತ್ರಗಳು ಇಲ್ಲಿವೆ.

ಚಿತ್ರರಂಗದಲ್ಲಿ ಇಂದು ಬೆಳಗುತ್ತಿರುವ ಹಲವಾರು ತಾರೆಗಳನ್ನು ಸೃಷ್ಟಿಸಿದ 'ಸಿನಿಬ್ರಹ್ಮ'. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ನೂರಕ್ಕೂ ಅಧಿಕ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಲ್ಲದೆ ಚಿತ್ರಕಥೆ ನಿರೂಪಣೆಗೆ ಹೊಸ ಭಾಷ್ಯ ಬರೆದವರು. [ಸಿನಿಮಾ ರಂಗದಲ್ಲಿ 40 ವರ್ಷ ಉಳಿಯುವುದು ತಮಾಷೆಯಾ?]

ಮಹಿಳಾ ಪ್ರಧಾನ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ನು ಕಮಲ್ ಹಾಸನ್(ಅರಂಗೇತ್ರಂ), ರಜನಿಕಾಂತ್(ಅಪೂರ್ವ ರಾಗಂಗಳ್), ಸರಿತಾ ಮತ್ತು ಪ್ರಕಾಶ್ ರಾಜ್(ಡ್ಯೂಯೆಟ್) ಸೇರಿದಂತೆ 65ಕ್ಕೂ ಹೆಚ್ಚು ನಟರು ಮತ್ತು ತಂತ್ರಜ್ಞರನ್ನು ತಮಿಳು ಚಿತ್ರೋದ್ಯಮಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅವರದು.

ಬಾಲಚಂದರ್ ಅವರು ಪರಿಚಯಿಸಿದ ತಾರೆಗಳು
  

ಬಾಲಚಂದರ್ ಅವರು ಪರಿಚಯಿಸಿದ ತಾರೆಗಳು

ಕಮಲ ಹಾಸನ್, ರಜನೀಕಾಂತ್, ಪ್ರಕಾಶ್ ರಾಜ್, ವಿವೇಕ್, ರಮೇಶ್ ಅರವಿಂದ್,ಸುಂದರ್ ರಾಜ್, ಜೈ ಜಗದೀಶ್, ಶ್ರುತಿ, ಅವಿನಾಶ್, ಶ್ರೀಧರ್, ವಿಜಯಲಕ್ಷ್ಮಿ, ಜಯಂತಿ, ಜಯಪ್ರದಾ, ಸರಿತಾ, ಸುಜಾತಾ, ಗೀತಾ, ವಿಮಲಾ ರಾಮನ್, ಪ್ರಮೀಳಾ ಜೋಷಾಯ್, ರಾಮಕೃಷ್ಣ ಮಾಳವಿಕಾ ಅವಿನಾಶ್ ಸೇರಿದಂತೆ ಸುಮಾರು 60ಕ್ಕೂ ಅಧಿಕ ಕಲಾವಿದರನ್ನು ತಮಿಳು ಚಿತ್ರರಂಗ ಹಾಗೂ ಕಿರುತೆರೆಗೆ ಪರಿಚಯಿಸಿ ಒಂದು ನೆಲೆಕಟ್ಟಿಕೊಟ್ಟವರು.

ನೂರು ಚಿತ್ರಗಳನ್ನು ನೀಡಿದ ನಿರ್ದೇಶಕ
  

ನೂರು ಚಿತ್ರಗಳನ್ನು ನೀಡಿದ ನಿರ್ದೇಶಕ

ಬಾಲಚಂದರ್ ಅವರ ಚಿತ್ರಗಳ ಪೈಕಿ ಯಾವುದು ಶ್ರೇಷ್ಠ ಎಂದು ಆಯ್ಕೆ ಮಾಡುವುದು ಸುಲಭದ ಮಾತಲ್ಲ. ಪ್ರತಿಯೊಂದು ಚಿತ್ರಕ್ಕೂ ಅದರದ್ದೇ ಆದ ಗುಣವಿದೆ. ಆ ಕಾಲಘಟ್ಟಕ್ಕೆ ತಕ್ಕ ಕಥೆ, ಚಿತ್ರಣ ಹಾಗೂ ಪಾತ್ರವರ್ಗವಿದೆ.

‘ವರುಮೆಯಿನ್ ನಿರಂ ಸಿವಪ್ಪ', ‘ತಣ್ಣೀರ್ ತಣ್ಣೀರ್', ‘ಮರೋಚರಿತ್ರ', ‘ಏಕ್ ದೂಜೆ ಕೆ ಲಿಯೆ', ‘ಇಳಮೈ ಊಂಜಲಾಡುಗಿರದು', ‘ಪುನ್ನಗೈ ಮನ್ನಣ್',  ಬೆಂಕಿಯಲ್ಲಿ ಅರಳಿದ ಹೂವು, ತಪ್ಪಿದ ತಾಳ ಇವು ಕೆ.ಬಾಲಚಂದರ್ ನಿರ್ದೇಶನದ ಪ್ರಮುಖ ಚಿತ್ರಗಳಾಗಿವೆ. ರಹಸ್ಯಂ, ಮರ್ಮದೇಶಂ ಎಂಬ ಥ್ರಿಲ್ಲರ್ ಟಿವಿ ಸೀರಿಯಲ್ ನೀಡಿದರು.

ಅಭಿಮಾನಿಗಳ ಶ್ರೀರಕ್ಷೆಯಲ್ಲಿ ಬಾಳಿದ ಕೆಬಿ ಸಾರ್
  

ಅಭಿಮಾನಿಗಳ ಶ್ರೀರಕ್ಷೆಯಲ್ಲಿ ಬಾಳಿದ ಕೆಬಿ ಸಾರ್

45 ವರ್ಷಗಳ ಚಿತ್ರರಂಗದಲ್ಲಿ ಅನೇಕ ಪ್ರತಿಭೆಗಳನ್ನು ಬೆಳೆಸಿ ಅನೇಕರ ಪ್ರೀತಿ ವಿಶ್ವಾಸ ಪಡೆದುಕೊಂಡ ಚಿತ್ರಕರ್ಮಿ ಕೆಬಿ ಸಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ, 9 ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸಂದಿದೆ. ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣಾಗಾರರಾಗಿ ಅವಿರತವಾಗಿ ದುಡಿದ 'ಕೆಬಿ' ಅವರು ಚಿರನಿದ್ರೆಗೆ ಜಾರಿದ್ದಾರೆ. ಪತ್ನಿ ರಾಜಂ, ಪುತ್ರರಾದ ಪ್ರಸನ್ನ, ಕೈಲಾಸಂ, ಪುತ್ರಿ ಪುಷ್ಪ ಅವರನ್ನು ಅಗಲಿದ್ದಾರೆ.

ರಜನಿಕಾಂತ್ ಅವರಿಂದ ಅಂತಿಮ ನಮನ
  

ರಜನಿಕಾಂತ್ ಅವರಿಂದ ಅಂತಿಮ ನಮನ

ಸಿನಿಪ್ರಿಯರನ್ನು ಅಗಲಿದ ಕಲಾಚೇತನ ಕೆಬಿ ಸಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಶಿಷ್ಯ ರಜನಿಕಾಂತ್

ನಟ ಶರತ್ ಕುಮಾರ್ ಆಗಮನ
  

ನಟ ಶರತ್ ಕುಮಾರ್ ಆಗಮನ

ನಟ ಶರತ್ ಕುಮಾರ್ ಅವರು ಕೆ ಬಾಲಚಂದರ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ.

ಅನೇಕ ಗಣ್ಯರಿಂದ ಕೆಬಿ ಸಾರ್ ಗೆ ನಮನ
  

ಅನೇಕ ಗಣ್ಯರಿಂದ ಕೆಬಿ ಸಾರ್ ಗೆ ನಮನ

ಅನೇಕ ಕ್ಷೇತ್ರದ ಗಣ್ಯರಿಂದ ಕೆಬಿ ಸಾರ್ ಗೆ ನಮನ ಸಲ್ಲಿಕೆಯಾಗುತ್ತಿದೆ

ರಾಜಕೀಯ ಮುಖಂಡ ವೈಕೋ
  

ರಾಜಕೀಯ ಮುಖಂಡ ವೈಕೋ

ರಾಜಕೀಯ ಮುಖಂಡ ವೈಕೋ ಸೇರಿದಂತೆ ವಿಜಯ್ ಕಾಂತ್, ಕರುಣಾನಿಧಿ, ಜಯಲಲಿತಾ ಹೀಗೆ ವಿವಿಧ ರಾಜಕೀಯ ಮುಖಂಡರು ಬಾಲಚಂದರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

English summary
Celebrities pay condolences 'Iyakunar Imayam' K Balachander Death. K B was popularly called as "Iyakumar Sigaram" as he penned more than 100 movies in his career. He was sustained by his kith and kin, wife Rajam and his 2 sons and 1 daughter, Prasanna, Kailasam and Pushpa respectively.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada