»   » ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!

ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹಾಗೂ ನಟಿ ಪ್ರಿಯಾಮಣಿ ಅವರು ಕಾಣಿಸಿಕೊಂಡಿರುವ 'ದನ ಕಾಯೋನು' ಚಿತ್ರದ ಶೂಟಿಂಗ್ ಬೇರೆ ಬೇರೆ ಕಡೆ ಭರದಿಂದ ಸಾಗಿದೆ.

ಇದೀಗ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಇಡೀ ದನ ಕಾಯೋ ಚಿತ್ರತಂಡ ಇತ್ತೀಚೆಗೆ ಬೆಂಗಳೂರು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಚಿತ್ರೀಕರಣ ನಡೆಸಿತು.[ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು']

ಇನ್ನು ಇಲ್ಲಿನ ಸರ್ಕಾರಿ ಕಾಲೇಜು ಮೈದಾನವನ್ನು ಪೊಲೀಸ್ ಕವಾಯತ್ತು ಮೈದಾನವಾಗಿಸಿಕೊಂಡ ಚಿತ್ರತಂಡ, ಕಾಲೇಜಿನ ಪ್ರೌಢಶಾಲಾ ವಿಭಾಗದ ನಾಮ ಫಲಕವನ್ನು ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆ, ಪುಂಗಳಿ, ಲಕ್ಷ್ಮಣ ನಗರ ಜಿಲ್ಲೆ ಎಂಬುದಾಗಿ ಬದಲಿಸಿಕೊಂಡಿತ್ತು. ಕಾಲೇಜು ವಿಭಾಗವನ್ನು ಪೊಲೀಸ್ ಆಡಳಿತ ವಿಭಾಗ ಕಚೇರಿಯನ್ನಾಗಿ ಬಳಸಿಕೊಂಡರು.

ಪೊಲೀಸ್ ಇಲಾಖೆ ಸಿಬ್ಬಂದಿ ಆಯ್ಕೆ ಸಂದರ್ಭದಲ್ಲಿ ನಡೆಸುವ ದೈಹಿಕ ಆಟೋಟ ಸ್ಪರ್ಧೆಯಂತಹ ಸನ್ನಿವೇಶದ ಶೂಟಿಂಗ್ ನಲ್ಲಿ ನಟಿ ಪ್ರಿಯಾಮಣಿ ಅವರು ಇತರೇ ಹತ್ತಾರು ಸಹ ಕಲಾವಿದೆಯರೊಂದಿಗೆ ಪಾಲ್ಗೊಂಡರು. ಚಿತ್ರದ ಸಹ ನಿರ್ದೇಶಕ ಚಂದ್ರಶೇಖರ್ ಅವರ ನೇತೃತ್ವದಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಯಿತು.[''ಥೂ....'ದನ ಕಾಯೋ' ದುನಿಯಾ ವಿಜಿನ ತಂದು'']

ಇನ್ನು ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ 'ದನ ಕಾಯೋನು' ಚಿತ್ರತಂಡ ಮಾಡಿದ ಮೋಜು ಮಸ್ತಿ ಹಾಗೂ ಚಿತ್ರದ ಶೂಟಿಂಗ್ ಸ್ಟಿಲ್ ಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಹುಡುಗಿಯರ ಲೆಗ್ಗಿಂಗ್ಸ್ ಧರಿಸಿದ ವಿಜಿ

ಭಟ್ಟರ ದನ ಕಾಯಲು ನಟ ದುನಿಯಾ ವಿಜಿ ಅವರು ಹುಡುಗಿಯರು ಧರಿಸುವ ಲೆಗ್ಗಿಂಗ್ಸ್ ಧರಿಸಿದ್ದಾರೆ. ಯೋಗರಾಜ ಭಟ್ಟರ ಆತ್ಮೀಯನಾಗಿರುವ ವಿಜಿ ಅವರು ಭಟ್ಟರ ಆದೇಶದ ಮೇರೆಗೆ ಲೆಗ್ಗಿಂಗ್ಸ್ ಧರಿಸಿದ್ದಾರೆ. ವಸ್ತ್ರ ವಿನ್ಯಾಸಕಿ ಪವಿತ್ರ ಅವರು ವಿಜಯ್ ಅವರಿಗೆ ವಿಶೇಷವಾಗಿ ಈ ವಿಭಿನ್ನ ಬಟ್ಟೆಯನ್ನು ಡಿಸೈನ್ ಮಾಡಿದ್ದಾರೆ. ಹಳ್ಳಿಯ ಹುಡುಗನಾಗಿ ವಿದೇಶಿ ಬಟ್ಟೆಗಳ ಮೋಹ ಹೊಂದಿರುವ ವಿಜಿ ಅವರಿಗೆ ಈ ಥರದ ಕಾಸ್ಟ್ಯೂಮ್ ರೆಡಿ ಮಾಡಲಾಗಿದೆ.

ಗೋಡೆ ಏರಿದ ವಿಜಿ

'ದನ ಕಾಯೋನು' ಚಿತ್ರದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ದೃಶ್ಯವೊಂದರ ಶೂಟಿಂಗ್ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಅವರು ಗೋಡೆ ಏರಿ ಕುಳಿತಿರುವ ದೃಶ್ಯ.

ಶಾಟ್ ವಿವರಿಸುತ್ತಿರುವ ಭಟ್ರು

ಶೂಟಿಂಗ್ ಸ್ಟಾಟ್ ನಲ್ಲಿ ನಟಿ ಪ್ರಿಯಾಮಣಿ, ನಟ ದುನಿಯಾ ವಿಜಿ, ರಂಗಾಯಣ ರಘು ಹಾಗೂ ಬೀರಾದಾರ್ ಅವರಿಗೆ ಚಿತ್ರದ ಶಾಟ್ ಬಗ್ಗೆ ವಿವರಿಸುತ್ತಿರುವ ನಿರ್ದೇಶಕ ಯೋಗರಾಜ್ ಭಟ್.

ಬೀರಾದಾರ್ ಗೆ ಆಕ್ಷನ್-ಕಟ್ ಹೇಳಿದ ಭಟ್ರು

ಕಾರಿನಲ್ಲಿ ಕುಳಿತಿರುವ ದೃಶ್ಯವೊಂದರ ಶೂಟಿಂಗ್ ಸಂದರ್ಭದಲ್ಲಿ ನಟ ಬೀರಾದಾರ್ ಅವರಿಗೆ ರೋಲ್-ಕ್ಯಾಮರ-ಆಕ್ಷನ್ ಎಂದ ನಿರ್ದೇಶಕ ಯೋಗರಾಜ್ ಭಟ್ರು.

ಚಡ್ಡಿದೋಸ್ತ್ ಗಳಿಬ್ಬರ ಮಸ್ತಿ

ಶೂಟಿಂಗ್ ಸ್ಪಾಟ್ ನಲ್ಲಿ ನಟ ದುನಿಯಾ ವಿಜಿ ಹಾಗೂ ಬಹುಮುಖ ಪ್ರತಿಭೆ ರಂಗಾಯಣ ರಘು ಅವರು ಮಸ್ತಿ ಮಾಡಿ ಸಂಭ್ರಮಿಸಿದರು. ರಂಗಾಯಣ ರಘು ಅವರು ಮಾಡಿದ ಯಾವುದೋ ಜೋಕ್ ಗೆ ದುನಿಯಾ ವಿಜಿ ಅವರು ಬಾಯ್ ಬಿಟ್ಟು ನಕ್ಕ ಪರಿ ಇದು.

ದನದ ಕೊಟ್ಟಿಗೆಯಲ್ಲಿ ಪ್ರಿಯಾಮಣಿ

ದನದ ಕೊಟ್ಟಿಗೆಯ ದೃಶ್ಯವೊಂದರ ಶೂಟಿಂಗ್ ಗಾಗಿ ದನಗಳೊಂದಿಗೆ ದನದ ಕೊಟ್ಟಿಗೆಯಲ್ಲಿ ಬೀಡು ಬಿಟ್ಟ ನಟಿ ಪ್ರಿಯಾಮಣಿ. ಗ್ಲಾಮರ್ ಬೆಡಗಿಯಾದ ಪ್ರಿಯಾಮಣಿ ಅವರು ಗ್ಲಾಮರ್ ಲೆಸ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶೂಟಿಂಗ್ ಸ್ಪಾಟ್ ನಲ್ಲಿ ಜನಜಾತ್ರೆ

ಗ್ರಾಮೀಣ ಪ್ರದೇಶದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಭಟ್ರ 'ದನ ಕಾಯೋನು' ಚಿತ್ರೀಕರಣ ನೋಡಲು ಜನ ಸಾಗರ ಹರಿದುಬಂದಿತ್ತು. ಅದರಲ್ಲೂ ಹಳ್ಳಿಯ ಜನ ತಮ್ಮ ತಮ್ಮ ಮನೆಯ ಮಾಡಿನ ಮೇಲೇರಿ ಶೂಟಿಂಗ್ ವೀಕ್ಷಿಸಿದರು.

ಪೋಸ್ ಕೊಟ್ಟ ಪ್ರಿಯಾಮಣಿ

ಶೂಟಿಂಗ್ ಮಧ್ಯದಲ್ಲಿ ಕೊಂಚ ಬಿಡುವು ಸಿಕ್ಕಾಗ ನಟಿ ಪ್ರಿಯಾಮಣಿ ಹಾಗೂ ನಟ ರಂಗಾಯಣ ರಘು ಅವರು ಪಕ್ಕಾ ದನ ಕಾಯುವವರಂತೆ ಕ್ಯಾಮರಕ್ಕೆ ಫೋಸ್ ಕೊಟ್ಟರು.

English summary
Director Yogaraj Bhat, Duniya Vijay, Priyamani and the entire cast and crew of Dana Kayonu are bending backwards to bring the characters of the new film to life. Considering that the film is set in a village, Vijay has attempted to do something different. The Actor's pics from the sets of 'Dana Kayonu' is here. Check out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada