For Quick Alerts
  ALLOW NOTIFICATIONS  
  For Daily Alerts

  ಸುದೀಪ್-ಕುಮಾರಸ್ವಾಮಿ ಭೇಟಿ ಹಿಂದಿರುವ 3 ಕಾರಣ !

  By Pavithra
  |
  ಎಚ್ ಡಿ ಕುಮಾರಸ್ವಾಮಿ ಮನೆಗೆ ಸುದೀಪ್ ಹೋಗಿದ್ಯಾಕೆ? | Oneindia Kannada

  ಚುನಾವಣೆ ಹತ್ತಿರವಾಗುತ್ತಿದ್ದ ಹಾಗೆ ಸ್ಟಾರ್ ಗಳು ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗಳ ಜೊತೆ ಕಾಣಿಸಿಕೊಂಡರೆ ಈ ಸ್ಟಾರ್ ಇದೇ ಪಕ್ಷಕ್ಕೆ ಸೇರುತ್ತಾರೆ ಎಂದು ಅಂದಾಜು ಮಾಡಿ ಬಿಡುತ್ತಾರೆ. ಅಥವಾ ರಾಜಕೀಯ ಪ್ರಚಾರದಲ್ಲಿ ಕಲಾವಿದರು ಭಾಗಿ ಆಗುವುದು ಸಾಮಾನ್ಯ ಹಾಗಾಗಿ ಭೇಟಿ ಮಾಡಿರುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತವೆ.

  ನಟ ಕಿಚ್ಚ ಸುದೀಪ್ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಖುದ್ದು ಕಿಚ್ಚ ಸುದೀಪ್, ಎರಡು ಗಂಟೆಗಳ ಕಾಲ ಹೆಚ್ ಡಿ ಕೆ ಮನೆಯಲ್ಲೇ ಕಳೆದಿದ್ದಾರೆ. ಈ ಹಿಂದೆ. ಕುಮಾರಸ್ವಾಮಿ, ಸುದೀಪ್ ಅವರ ಮನೆಗೆ ಹೋಗಿ ಬಂದಿದ್ದರು. ಕಿಚ್ಚನ ಕೈ ರುಚಿಯನ್ನೂ ಸವಿದಿದ್ದರು.

  'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿದ ರವಿಶಂಕರ್ ಮಗ'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿದ ರವಿಶಂಕರ್ ಮಗ

  ಕೆಲವೇ ದಿನಗಳ ಅಂತರದಲ್ಲಿ ಸುದೀಪ್., ಕುಮಾರಸ್ವಾಮಿ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೀರ್ಘ ಚರ್ಚೆಗಳನ್ನೂ ಮಾಡಿದ್ದಾರೆ. ಮೇಲು ನೋಟಕ್ಕೆ ರಾಜಕೀಯದ ಬಗ್ಗೆ ಮಾತುಕತೆ ಎಂದು ಎನ್ನಿಸಿದರೂ ಭೇಟಿಯ ಅಸಲಿ ಕಾರಣ ಬೇರೆಯೇ ಇದೆ ಎನ್ನುತ್ತಿವೆ ಮೂಲಗಳು. ಹಾಗಾದರೆ ಸುದೀಪ್ ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದು ಯಾಕೆ? ಅದಕ್ಕೆ ಮೂರು ಕಾರಣ ಇಲ್ಲಿದೆ ಮುಂದೆ ಓದಿ

  ಕುಮಾರಸ್ವಾಮಿ ಮನೆಯಲ್ಲಿ ಸುದೀಪ್

  ಕುಮಾರಸ್ವಾಮಿ ಮನೆಯಲ್ಲಿ ಸುದೀಪ್

  ಕಿಚ್ಚ ಸುದೀಪ್ ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಮಂದಿ ಎಲ್ಲರೂ ಜೊತೆಯಲ್ಲೇ ಕುಳಿತು ಬೆಳಗಿನ ತಿಂಡಿ ಮಾಡಿದ್ದಾರೆ. ಅದಾದ ನಂತರ ಸುಮಾರು ಎರಡು ಗಂಟೆಗಳ ಕಾಲ ಸುದೀಪ್ ಹಾಗೂ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.

  ಭೇಟಿಯ ಕಾರಣ ಇದು

  ಭೇಟಿಯ ಕಾರಣ ಇದು

  ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟ ಹಾಗೂ ರಾಜಕೀಯ ವ್ಯಕ್ತಿ ಭೇಟಿ ಮಾಡಿದ್ದಾರೆ ಎಂದ ತಕ್ಷಣ ಅದು ರಾಜಕೀಯ ಪಕ್ಷಕ್ಕೆ ಸೇರಿದ್ದು ಎನ್ನುವುದು ಸಾಮಾನ್ಯ ಜನರು ಹಾಗೂ ಅಭಿಮಾನಿಗಳ ಊಹೆ. ಅದೇ ರೀತಿಯಲ್ಲಿ ಇದು ರಾಜಕೀಯ ವಿಚಾರಕ್ಕೆ ಸಂಬಂಧ ಪಟ್ಟದ್ದು ಇರಬಹುದು.

  ಸಿನಿಮಾ ವಿಚಾರದ ಭೇಟಿ

  ಸಿನಿಮಾ ವಿಚಾರದ ಭೇಟಿ

  ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಾಯಕ ನಟ. ಸುದೀಪ್ ಸಾಕಷ್ಟು ದಿನಗಳಿಂದ ಚಿತ್ರರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವವರು, ಇನ್ನೂ ಕುಮಾರಸ್ವಾಮಿ ಚಂದನವನಕ್ಕೆ ಅದ್ಬುತ ಚಿತ್ರಗಳನ್ನ ನೀಡಿದ್ದಾರೆ. ಹಾಗಾಗಿ ಸಿನಿಮಾ ಬಗೆಗಿನ ಚರ್ಚೆಯೂ ಈ ಭೇಟಿಯ ಕಾರಣ ಆಗಿರಬಹುದು.

  ಸಾಮಾನ್ಯವಾದ ಭೇಟಿ

  ಸಾಮಾನ್ಯವಾದ ಭೇಟಿ

  ಸಿನಿಮಾರಂಗದಲ್ಲಿ ಅಥವಾ ರಾಜಕೀಯರಂಗದಲ್ಲಿ ಗುರುತಿಸಿಕೊಂಡವರು ಪರಸ್ಪರ ಭೇಟಿ ಆಗಲೇ ಬಾರದು ಎನ್ನುವ ಆಗಿಲ್ಲ. ಅದಷ್ಟೇ ಅಲ್ಲದೆ ಕುಮಾರಸ್ವಾಮಿ ಕುಟುಂಬಸ್ಥರು ಚಿತ್ರರಂಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅದಷ್ಟೇ ಅಲ್ಲದೆ ಸುದೀಪ್ ತಂದೆ ಹಾಗೂ ಕುಮಾರಸ್ವಾಮಿ ಅವರು ಮೊದಲಿನಿಂದ ಸ್ನೇಹಿತರು ಹಾಗಾಗಿ ಸುದೀಪ್ ಹೆಚ್ ಡಿ ಕೆ ಮನೆಗೆ ಭೇಟಿಕೊಟ್ಟು ಬಂದಿದ್ದಾರೆ.

  ಟ್ರೋಲ್ ಪೇಜ್ ಗಳ ವಿರುದ್ಧ ರಾಜವಂಶ ಮತ್ತು ಸುದೀಪ್ ಫ್ಯಾನ್ಸ್ ಗರಂಟ್ರೋಲ್ ಪೇಜ್ ಗಳ ವಿರುದ್ಧ ರಾಜವಂಶ ಮತ್ತು ಸುದೀಪ್ ಫ್ಯಾನ್ಸ್ ಗರಂ

  English summary
  Kannada Actor Kiccha Sudeep visited EX CM HD Kumaraswamy's house and had breakfast. Check out the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X