»   » ಪ್ರಿಯಾಂಕಾ ಉಪೇಂದ್ರ-ಅನಸೂಯ: ಅತ್ತೆ-ಸೊಸೆ ಅಂದ್ರೆ ಹೀಗಿರ್ಬೇಕು.!

ಪ್ರಿಯಾಂಕಾ ಉಪೇಂದ್ರ-ಅನಸೂಯ: ಅತ್ತೆ-ಸೊಸೆ ಅಂದ್ರೆ ಹೀಗಿರ್ಬೇಕು.!

Posted By:
Subscribe to Filmibeat Kannada

ಅತ್ತೆ-ಸೊಸೆ ಅಂದ್ರೆ... ಹಾವು ಮುಂಗುಸಿ ಇದ್ದ ಹಾಗೆ... ಎಣ್ಣೆ ಸೀಗೆಕಾಯಿ ಇದ್ದ ಹಾಗೆ... ಒಬ್ಬರನ್ನ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ. ಆಗಾಗ ಕಿತ್ತಾಡೋದಷ್ಟೇ ಕೆಲಸ. ಅನೇಕ ಮನೆಗಳಲ್ಲಿ ಅತ್ತೆ-ಸೊಸೆ ಜಗಳ ಡೈಲಿ ಸೀರಿಯಲ್ ಇದ್ಹಂಗೆ.! ಇಬ್ಬರು ಒಂದಾಗಲ್ಲ... ಕಥೆ ಮುಗಿಯಲ್ಲ.!

ಹೀಗೆ ಪ್ರತಿನಿತ್ಯ ವಾಕ್ಸಮರ ನಡೆಸುವ ಅತ್ತೆ-ಸೊಸೆಯರು ಒಮ್ಮೆ ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಅತ್ತೆ ಕಡೆ ತಿರುಗಿ ನೋಡಿ... ಅವರಿಬ್ಬರ ಆತ್ಮೀಯತೆ ನೋಡಿ ಅತ್ತೆ-ಸೊಸೆಯರು ಮಾತ್ರ ಅಲ್ಲ... ತಾಯಿ-ಮಕ್ಕಳೇ ನಾಚಿಕೊಳ್ಳಬೇಕು.!

ಅತ್ತೆಗೆ ಸರ್ಪ್ರೈಸ್ ಕೊಟ್ಟ ಸೊಸೆ

ಅತ್ತೆ ಜೊತೆ ವಾಗ್ವಾದ ನಡೆಸುವ ಸೊಸೆಯಂದಿರು ಇರುವ ಈಗಿನ ಕಾಲದಲ್ಲಿ, ಅತ್ತೆ (ಉಪೇಂದ್ರ ತಾಯಿ) ಅನಸೂಯ ರವರಿಗೆ ಸೊಸೆ ಪ್ರಿಯಾಂಕಾ ಮೊನ್ನೆಯಷ್ಟೇ ಬಿಗ್ ಸರ್ಪೈಸ್ ನೀಡಿದ್ದರು.[ಯಶ್, ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು ಗೊತ್ತಾ?]

ಅತ್ತೆ ಹುಟ್ಟುಹಬ್ಬ ಇತ್ತು

ಮೇ 21 ರಂದು ಉಪೇಂದ್ರ ರವರ ತಾಯಿ ಅನಸೂಯ ರವರ ಹುಟ್ಟುಹಬ್ಬವಿತ್ತು. ಅತ್ತೆಯ ಜನ್ಮದಿನವನ್ನ ಸೊಸೆ ಪ್ರಿಯಾಂಕಾ ಇಡೀ ಕುಟುಂಬದ ಜೊತೆ ಸ್ಪೆಷಲ್ ಆಗಿ ಆಚರಿಸಿದ್ದಾರೆ.[ಚಿತ್ರಗಳು: ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಪಾರ್ಟಿಯಲ್ಲಿ ಸ್ಟಾರ್ಸ್ ಮೋಜು-ಮಸ್ತಿ]

ಕೇಕ್ ಕತ್ತರಿಸಿ ಸಂಭ್ರಮ

ಅತ್ತೆಯ ಹುಟ್ಟುಹಬ್ಬಕ್ಕಾಗಿ ಸೊಸೆ ಪ್ರಿಯಾಂಕಾ ಉಪೇಂದ್ರ ಎರಡು ಸ್ಪೆಷಲ್ ಕೇಕ್ ಆರ್ಡರ್ ಮಾಡಿ ತರಿಸಿದ್ದರು.

ಸಂಭ್ರಮಿಸಿದ ಉಪ್ಪಿ ತಂದೆ-ತಾಯಿ

ಕೇಕ್ ಕತ್ತರಿಸಿ ಉಪೇಂದ್ರ ತಾಯಿ ಅನಸೂಯ ಹಾಗೂ ತಂದೆ ಮಂಜುನಾಥ ರಾವ್ ಸಂಭ್ರಮಿಸಿದರು.

ಇಡೀ ಕುಟುಂಬವೇ ಸಾಕ್ಷಿ ಇತ್ತು

ಉಪೇಂದ್ರ ರವರ ತಾಯಿಯ ಬರ್ತಡೇ ಸೆಲೆಬ್ರೇಷನ್ ನಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು. ಆ ಸಂಭ್ರಮದಲ್ಲಿ ತೆಗೆದ ಸೆಲ್ಫಿ ಇದು.

ಉಪ್ಪಿ ಸಂಸಾರ ಆನಂದ ಸಾಗರ

ಮಕ್ಕಳು-ಮೊಮ್ಮಕ್ಕಳ ಜೊತೆ ಅಜ್ಜಿ-ತಾತ ಇರುವ ಉಪೇಂದ್ರ ರವರ ತುಂಬು ಕುಟುಂಬದ ಫೋಟೋ ಇದು.

ಮೊಮ್ಮಕ್ಕಳೊಂದಿಗೆ ಅಜ್ಜಿ

ಉಪೇಂದ್ರ ರವರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯರೊಂದಿಗೆ ಅಜ್ಜಿ ಅನಸೂಯ.

ಅತ್ತೆ-ಸೊಸೆ ಹೋಳಿ ಸಂಭ್ರಮ

ಹೋಳಿ ಹಬ್ಬವನ್ನೂ ಅತ್ತೆ-ಸೊಸೆ ಎಷ್ಟು ಸಂಭ್ರಮದಿಂದ ಆಚರಿಸಿದ್ದಾರೆ ಎನ್ನುವುದಕ್ಕೆ ಪುರಾವೆ ಇಲ್ಲಿದೆ ನೋಡಿ....

ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಅತ್ತೆ ಅನಸೂಯ

ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಅತ್ತೆ ಅನಸೂಯ ನಡುವಿನ ಬಾಂಧವ್ಯ ಎಷ್ಟು ಚೆನ್ನಾಗಿದೆ ಅನ್ನೋದಕ್ಕೆ ಈ ಒಂದು ಫೋಟೋ ಸಾಕ್ಷಿ.

ಇದಕ್ಕಿಂತ ಖುಷಿ ಬೇಕಾ.?

ಕೋಟ್ಯಾಂತರ ಜನರ ಪ್ರೀತಿ ಗಳಿಸಿರುವ ಮಗ, ಪ್ರೀತಿಸುವ ಸೊಸೆ, ಮುದ್ದಾದ ಮೊಮ್ಮಕ್ಕಳು ಇರುವಾಗ ಉಪೇಂದ್ರ ರವರ ತಂದೆ-ತಾಯಿಗೆ ಅದುವೇ ಸ್ವರ್ಗ.!

English summary
Kannada Actress Priyanka Upendra celebrated her mother-in-law's birthday on May 21st. Take a look at the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada