For Quick Alerts
  ALLOW NOTIFICATIONS  
  For Daily Alerts

  ಚಿತ್ರಪಟ: 'ಮಮ್ಮಿ' ಟ್ರೈಲರ್ ಲಾಂಚ್ ನಲ್ಲಿ ಮಸ್ತ್ ಜೋಕ್ ಮಾಡಿದ ತಾರಾ

  By Suneetha
  |

  ಜೂನ್ 30, ಗುರುವಾರದಂದು ಸಂಜೆ ಬೆಂಗಳೂರಿನ ಮಾಗಡಿ ರೋಡ್ ಬಿನ್ನಿ ಪೇಟೆ ಬಳಿ ಇರುವ 'ಇಟಿಎ' ಮಾಲ್ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ನಲ್ಲಿ ಇಡೀ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಸೇರಿದಂತೆ ಹಲವಾರು ಗಣ್ಯರು ಸೇರಿದ್ದರು.

  ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಅನುರಾಧ, ನಟಿ ಪ್ರಿಯಾಂಕ ಉಪೇಂದ್ರ, ನಿರ್ದೇಶಕ ಮಂಜು ಮಾಂಡವ್ಯ, ಬಾಲನಟಿ ಯುವಿನಾ ಪಾರ್ಥವಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

  ಹೌದು ಗುರುವಾರದಂದು ನಟಿ ಪ್ರಿಯಾಂಕ ಉಪೇಂದ್ರ ಮತ್ತು ಬಾಲನಟಿ ಯುವಿನಾ ಪಾರ್ಥವಿ ಒಂದಾಗಿ ಕಾಣಿಸಿಕೊಂಡಿರುವ 'ಮಮ್ಮಿ-ಸೇವ್ ಮಿ' ಎಂಬ ಹಾರರ್-ಥ್ರಿಲ್ಲರ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು.[ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್]

  ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ ಮತ್ತು ಬಾಲನಟಿ ಯುವಿನಾ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು. ಬಾಲನಟಿ ಯುವಿನಾ ಅವರು ಚಿತ್ರದಲ್ಲಿ ಅದ್ಭುತ ನಟನೆ ತೋರಿದ್ದಾಗಿ ನಟಿ ಪ್ರಿಯಾಂಕ ಅವರು ಪುಟ್ಟ ಯುವಿನಾ ಅವರನ್ನು ಹಾಡಿ ಹೊಗಳಿದರು.

  ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ತಾರಾ ಅವರು, ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. "ಉಪೇಂದ್ರ ಅವರು ನನ್ನ ಗಂಡನ ಸ್ನೇಹಿತ ಮಾತ್ರ ಅಲ್ಲದೇ, ನನ್ನ ಪಾಲಿಗೆ ಅತ್ತೆ ಎಂದಿದ್ದಾರೆ. ಇದ್ಯಾವ ವರಸೆಯಲ್ಲಿ ಅತ್ತೆ ಅಂತ ನೀವು ಯೋಚನೆ ಮಾಡಬಹುದು.

  'ಉಪೇಂದ್ರ ಅವರು ಅತ್ತೆ ಹೇಗೆ ಅಂದರೆ, ವೇಣು ಅವರ ತಾಯಿ, ವೇಣುಗೆ ಜನ್ಮ ನೀಡಿದರೆ, ಉಪೇಂದ್ರ ವೇಣು ಅವರಿಗೆ ಚಿತ್ರರಂಗದಲ್ಲಿ ಜನ್ಮ ನೀಡಿದವರು. ಹಾಗಾಗಿ ವೇಣುಗೆ ಉಪೇಂದ್ರ ಅಮ್ಮ ಆದರೆ ನನಗೆ ಅತ್ತೆ ಅಲ್ಲವೇ' ಅಂತ ತಾರಾ ಅವರು ಹೇಳಿದಾಗ ಇಡೀ ಸಭೆಯಲ್ಲಿ ಎಲ್ಲರೂ ನಕ್ಕರು.

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಛಾಯಾಗ್ರಾಹಕ ವೇಣು ಅವರು ತುಂಬಾ ಸಮಯಗಳಿಂದ ಉತ್ತಮ ಸ್ನೇಹಿತರಾಗಿದ್ದು, 'ಎ' ಚಿತ್ರದ ಮೂಲಕ ವೇಣು ಅವರನ್ನು ಕನ್ನಡ ಚಿತ್ರರಂಗಕ್ಕೆ ಉಪೇಂದ್ರ ಅವರು ಪರಿಚಯಿಸಿದರು. ತದನಂತರ ಹಲವಾರು ಸಿನಿಮಾಗಳಲ್ಲಿ ಒಂದಾಗಿ ಕೆಲಸ ಮಾಡಿ, ಇದೀಗ ಜಿಗರಿ ದೋಸ್ತ್ ಆಗಿದ್ದಾರೆ.

  ಒಂದೇ ದಿನದಲ್ಲಿ ಸುಮಾರು 9,444 ಕ್ಕೂ ಹೆಚ್ಚು ಮಂದಿ ಪ್ರಿಯಾಂಕ ಅವರ ಹಾರರ್-ಥ್ರಿಲ್ಲರ್ 'ಮಮ್ಮಿ-ಸೇವ್ ಮಿ' ಚಿತ್ರದ ಟ್ರೈಲರ್ ವೀಕ್ಷಣೆ ಮಾಡಿದ್ದಾರೆ. ಸದ್ಯದಲ್ಲೇ ನಿಮ್ಮನ್ನು ಬೆಚ್ಚಿ ಬೀಳಿಸಲು ಮಮ್ಮಿ ತೆರೆಗೆ ಅಪ್ಪಳಿಸಲಿದ್ದಾಳೆ.

  English summary
  Kannada Actress Priyanka Upendra, Baby Actress Yuvina Parthavi starrer Kannada Movie 'Mummy-Save Me' theatrical trailer was launched amidst much fan fare in ETA Mall Bengaluru June 30th. Check out the Photo Gallery of the Grand Event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X