»   » ಚಿತ್ರಪಟ: ಮುಂಬೈನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ರಜನಿಯ 'ಕಾಲ ಕರಿಕಾಲನ್' ಚಿತ್ರೀಕರಣ

ಚಿತ್ರಪಟ: ಮುಂಬೈನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ರಜನಿಯ 'ಕಾಲ ಕರಿಕಾಲನ್' ಚಿತ್ರೀಕರಣ

Posted By:
Subscribe to Filmibeat Kannada

'2.0' ಚಿತ್ರ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಸೂಪರ್ ಸ್ಟಾರ್ ರಜನಿಕಾಂತ್ ಬಿಡುವು ಮಾಡಿಕೊಳ್ಳದೇ, ತಮ್ಮ ಮುಂದಿನ ಚಿತ್ರದ ಶೂಟಿಂಗ್ ಗೆ ಚಾಲನೆ ಕೊಟ್ಟಿದ್ದಾರೆ.

ಮೇ ತಿಂಗಳಿನಲ್ಲಿ ಮುಹೂರ್ತ ಮುಗಿಸಿದ 'ಕಾಲ ಕರಿಕಾಲನ್' ಚಿತ್ರದ ಚಿತ್ರೀಕರಣ ಸದ್ಯ ಮುಂಬೈನಲ್ಲಿ ಬಿರುಸಿನಿಂದ ಸಾಗುತ್ತಿದೆ. ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿ ಅಭಿನಯದ 'ಕಾಲ ಕರಿಕಾಲನ್' ಚಿತ್ರೀಕರಣದ ಅಡ್ಡದಿಂದ ಲೀಕ್ ಆಗಿರುವ ಕೆಲ ಫೋಟೋಗಳು ಇಲ್ಲಿವೆ. ನೋಡಿ...[ರಜನಿ 164ನೇ ಚಿತ್ರದ ಫಸ್ಟ್ ಲುಕ್: ಮತ್ತೆ 'ಡಾನ್' ಆದ ತಲೈವಾ.]

ಮುಂಬೈ ಬೀದಿಗಳಲ್ಲಿ 'ಕಾಲ ಕರಿಕಾಲನ್' ಚಿತ್ರೀಕರಣ

ಮುಂಬೈನ ಬೀದಿ ಬೀದಿಗಳಲ್ಲಿ 'ಕಾಲ ಕರಿಕಾಲನ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬಿಳಿ ಗಡ್ಡ ಬಿಟ್ಟು, ಕಪ್ಪು ದಿರಿಸು ತೊಟ್ಟು, ಹಸಿರು ಬಣ್ಣದ ಬೈಕ್ ನ ಹಿಂಬದಿಯಲ್ಲಿ ರಜನಿಕಾಂತ್ ಕೂತು ಸವಾರಿ ಮಾಡುತ್ತಿರುವ ದೃಶ್ಯ ಕ್ಯಾಮರಾ ಕಂಗಳಲ್ಲಿ ಸೆರೆ ಆಗಿದೆ.

ಮತ್ತೊಂದು ಗ್ಯಾಂಗ್ ಸ್ಟರ್ ಸಿನಿಮಾ.?

'ಕಾಲ ಕರಿಕಾಲನ್' ಚಿತ್ರದ ಮೇಕಿಂಗ್ ಸ್ಟಿಲ್ಸ್ ಗಳನ್ನು ನೋಡುತ್ತಿದ್ದರೆ, ಇದು ಮತ್ತೊಂದು ಗ್ಯಾಂಗ್ ಸ್ಟರ್ ಸಿನಿಮಾ ಅಂತ ಅನಿಸೋದು ಸಹಜ. ಆದ್ರೆ, ಚಿತ್ರಕಥೆ ಹಾಗೂ ರಜನಿಕಾಂತ್ ಪಾತ್ರದ ಬಗ್ಗೆ ಚಿತ್ರತಂಡ ಇನ್ನೂ ಬಾಯ್ಬಿಟ್ಟಿಲ್ಲ.

'ಕಬಾಲಿ' ಕಾಂಬಿನೇಷನ್

'ಕಬಾಲಿ' ಚಿತ್ರದ ನಂತರ ನಿರ್ದೇಶಕ ಪಾ.ರಂಜಿತ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಒಂದಾಗಿರುವ ಸಿನಿಮಾ 'ಕಾಲ ಕರಿಕಾಲನ್'. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಈ ಚಿತ್ರಕ್ಕೆ ರಜನಿಕಾಂತ್ ಅಳಿಯ ಧನುಷ್ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ.

ರಜನಿಗೆ ಹುಮಾ ಖುರೇಶಿ ನಾಯಕಿ

'ಕಾಲ ಕರಿಕಾಲನ್' ಚಿತ್ರದಲ್ಲಿ ರಜನಿಕಾಂತ್ ಗೆ ಬಾಲಿವುಡ್ ಬೆಡಗಿ ಹುಮಾ ಖುರೇಶಿ ನಾಯಕಿಯಾಗಿದ್ದಾರೆ.

ಚಿತ್ರೀಕರಣದಲ್ಲಿ ಬಿಜಿ

ಮೊದಲ ಶೆಡ್ಯೂಲ್ ನ ಮುಂಬೈನಲ್ಲಿ ಪ್ಲಾನ್ ಮಾಡಿರುವ ಚಿತ್ರತಂಡ ಸದ್ಯ ಚಿತ್ರೀಕರಣದಲ್ಲಿ ಬಿಜಿಯಾಗಿದೆ.

English summary
Super Star Rajinikanth has kick started 'Kaala Karikalan' in Mumbai and he was seen shooting on the streets of the city. Take a look at the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada