»   » 'ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...

'ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...

Posted By:
Subscribe to Filmibeat Kannada

ಟಾಲಿವುಡ್ ನ ಮಾಸ್ ಮಹಾರಾಜ ರವಿತೇಜಾ ಕನ್ನಡದಲ್ಲಿ ಕಮಾಲ್ ಮಾಡುವುದಕ್ಕೆ ಗಾಂಧಿನಗರಕ್ಕೆ ಕಾಲಿಟ್ಟಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ನೃತ್ಯ ಸಂಯೋಜಕ ಎ.ಹರ್ಷ ನಿರ್ದೇಶನದ 'ವಜ್ರಕಾಯ' ಚಿತ್ರದಲ್ಲಿ ರವಿತೇಜಾ ಶಿವಣ್ಣನ ಇಂಟ್ರೊಡಕ್ಷನ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. [ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ ಕನ್ನಡಕ್ಕೆ!]


ಮೊದಲೇ ಶಿವಣ್ಣ ಕುಣಿಯುವುದರಲ್ಲಿ ಎಕ್ಸ್ ಪರ್ಟ್. ಹಾಗೆ ರವಿತೇಜಾ ಕೂಡ ಕಮ್ಮಿಯೇನಲ್ಲ. ಇಬ್ಬರ ಡಾನ್ಸ್ ಜುಗಲ್ಬಂದಿ ಹೇಗಿತ್ತು ಅಂತ 'ವಜ್ರಕಾಯ' ಅಡ್ಡದಿಂದ ಬಂದಿರುವ ಲೇಟೆಸ್ಟ್ ಫೋಟೋಗಳು ಇಲ್ಲಿವೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ ನೋಡಿ....


ಶಿವಣ್ಣನಿಗೆ ರವಿತೇಜಾ ಸಾಥ್

ಅದು ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿಯಿರುವ ಶಂಕರ್ ನಾಗ್ ಮೈದಾನ. ಇಡೀ ಮೈದಾನ ಕೇಸರಿ ಮತ್ತು ಬಿಳಿ ಬಾವುಟಗಳಿಂದ ತುಂಬಿ ತುಳುಕುತಿತ್ತು. ಮಧ್ಯಭಾಗದಲ್ಲಿ ಬೃಹತ್ ಆಂಜಿನೇಯನ ಮೂರ್ತಿ, ಪ್ರಸನ್ನ ವೀರಾಂಜಿನೇಯನ ಆಶೀರ್ವಾದ ಪಡೆದು, ಕೈಲಿ ಗದೆ ಹಿಡಿದು ಟಪ್ಪಾಂಗುಚ್ಚಿ ಸ್ಟೆಪ್ ಹಾಕೋಕೆ ನಿಂತವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಮಾಸ್ ಮಹಾರಾಜ ರವಿತೇಜಾ.


ಶಿವಣ್ಣನ ಹಾಡಿಗೆ ಮೊದಲ ಗೆಸ್ಟ್

ಈಗಾಗಲೇ ನಿಮಗೆ ತಿಳಿದಿರುವ ಹಾಗೆ, 'ವಜ್ರಕಾಯ' ಚಿತ್ರದಲ್ಲಿ ಇದು ಶಿವಣ್ಣನ ಇಂಟ್ರೋಡಕ್ಷನ್ ಸಾಂಗ್. ಹಾಡಲ್ಲಿ ತೆರೆಮೇಲೆ ಮೊದಲ ಸ್ಪೆಷಲ್ ಅಪಿಯರೆನ್ಸ್ ಮಾಡುವುದು ಟಾಲಿವುಡ್ ಹೀರೋ ರವಿತೇಜಾ. ಆದ್ರೆ, ಶೂಟಿಂಗ್ ಸಮಯದಲ್ಲಿ ರವಿತೇಜಾ ಕೊನೆಯದಾಗಿ ಹೆಜ್ಜೆ ಹಾಕಿದರು. [ಈ ವರ್ಷ ನೀವು ನೋಡಲೇಬೇಕಾದ ಬಹುನಿರೀಕ್ಷಿತ ಚಿತ್ರಗಳು]


ಸಂಭಾವನೆ ಇಲ್ಲದೆ ಫ್ರೀ ಕಾಲ್ ಶೀಟ್!

ಅಚ್ಚರಿ ವಿಷಯ ಅಂದ್ರೆ, ಟಾಲಿವುಡ್ ನಲ್ಲಿ ಬಹುಬೇಡಿಕೆ ಇರುವ ರವಿತೇಜಾ, ಕನ್ನಡದಲ್ಲಿ ಸ್ಟೆಪ್ ಹಾಕುವುದಕ್ಕೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲವಂತೆ. ಶಿವಣ್ಣನ ಮೇಲಿನ ಅಭಿಮಾನದಿಂದ 'ಕಿಕ್-2' ಸಿನಿಮಾದಲ್ಲಿ ಬಿಜಿಯಿದ್ದರೂ, ಒಂದು ದಿನ ಬಿಡುವು ಮಾಡಿಕೊಂಡು ಡಾನ್ಸಿಂಗ್ ಸೆನ್ಸೇಷನ್ ಜೊತೆ ಡಾನ್ಸ್ ಮಾಡಿದ್ದಾರೆ.


ಇದು ಮೊದಲ ಸಿನಿಮಾ ಅಲ್ಲ.!

ರವಿತೇಜಾಗಿದು ಮೊದಲ ಕನ್ನಡ ಸಿನಿಮಾ ಅಲ್ಲ. ಈಗಾಗಲೇ 'ವಂದೇಮಾತರಂ' ಅನ್ನುವ ಕನ್ನಡ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ರವಿತೇಜಾ ಕಾಣಿಸಿಕೊಂಡಿದ್ದರು.


ಇದೇ ಹಾಡಲ್ಲಿ 'ರಸಿಕ' ರವಿಚಂದ್ರನ್

'ವಜ್ರಕಾಯ' ಚಿತ್ರದ ಈ ಹಾಡಲ್ಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಹೆಜ್ಜೆ ಹಾಕಿದ್ದಾರೆ. ಹಾಗೆ ನೋಡಿದ್ರೆ, ಹಾಡಿನ ಶೂಟಿಂಗ್ ನಲ್ಲಿ ಮೊದಲು ಭಾಗವಹಿಸಿದವರು ರವಿಮಾಮ. ಶಿವಣ್ಣನ ಸ್ನೇಹಕ್ಕಾಗಿ 'ಕನಸುಗಾರ' ಕೂಡ 'ವಜ್ರಕಾಯ' ಚಿತ್ರದಲ್ಲಿ ಜೊತೆಯಾಗಿದ್ದಾರೆ. [ಶಿವಣ್ಣ-ಕ್ರೇಜಿಸ್ಟಾರ್ ಮತ್ತೆ ಒಂದಾಗೋ ಸಿನಿಮಾ ಬರ್ತಿದೆ]


ಹಾಡಲ್ಲಿದ್ದಾರೆ ಶಿವಕಾರ್ತಿಕೇಯನ್, ದಿಲೀಪ್ ಕುಮಾರ್!

ಇನ್ನು ಇದೇ ಹಾಡಲ್ಲಿ ಯುವ ನಟರಾಗಿರುವ ಕಾಲಿವುಡ್ ನ ಶಿವಕಾರ್ತಿಕೇಯನ್ ಮತ್ತು ಮಾಲಿವುಡ್ ನ ದಿಲೀಪ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. [ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್]


ಹರ್ಷ ಗರಡಿಯಲ್ಲಿ ಮಾಸ್ ಸಾಂಗ್

ನಿರ್ದೇಶನದ ಜೊತೆ ನೃತ್ಯ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಹರ್ಷ, ದಕ್ಷಿಣ ಭಾರತದ ನಾಲ್ಕು ಪ್ರಖ್ಯಾತ ತಾರೆಗಳನ್ನ ಶಿವಣ್ಣನ ಜೊತೆ 'ವಜ್ರಕಾಯ' ಚಿತ್ರದಲ್ಲಿ ಒಟ್ಟಾಗಿಸಿದ್ದಾರೆ. ಅಂಜಿನೇಯನ ಗುಣಗಾನ ಮಾಡುವ ಈ ಹಾಡಲ್ಲಿ ಎಲ್ಲಾ ಸ್ಟಾರ್ ಗಳೂ ಗದೆ ಹಿಡಿದುಕೊಂಡು ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ದಾರೆ. ಅರ್ಜುನ್ ಜನ್ಯ ಮಸ್ತ್ ಮಸ್ತ್ ಸಂಗೀತ ಚಿತ್ರಕ್ಕಿದೆ. ನಾಲ್ಕು ದಿನಗಳ ಕಾಲ ಇದ್ದ ಈ ಹಾಡಿನ ಶೂಟಿಂಗ್ ನಿನ್ನೆ ಮುಕ್ತಾಯವಾಗಿದೆ.


English summary
Tollywood Mass Maharaja Ravi Teja has made Re-Entry into Sandalwood through Shivarajkumar starrer Vajrakaya. Check out Ravi Teja and Shivarajkumar's Dance Masti in Pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada