»   »  'ಲೀಡರ್' ಚಿತ್ರದಲ್ಲೂ ಶಿವರಾಜ್ ಕುಮಾರ್ 'ಲಾಂಗ್' ಬಿಟ್ಟಿಲ್ಲ.!

'ಲೀಡರ್' ಚಿತ್ರದಲ್ಲೂ ಶಿವರಾಜ್ ಕುಮಾರ್ 'ಲಾಂಗ್' ಬಿಟ್ಟಿಲ್ಲ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಶಿವರಾಜ್ ಕುಮಾರ್ ಅಂದ್ರೇನೇ ಒಂಥರಾ ಖದರ್. ಮನ ಮೆಚ್ಚಿನ ಹುಡುಗನಾಗಿ ಶಿವಣ್ಣ ಕೈಯಲ್ಲಿ ರೋಸ್ ಹಿಡಿಯೋಕೂ ಸೈ... ತಂಟೆಗೆ ಬಂದೋರ ತಲೆ ತೆಗಿಯೋಕೆ ಕೈಯಲ್ಲಿ ಲಾಂಗು ಹಿಡಿಯೋಕೂ ಸೈ. ಕೈಯಲ್ಲಿ ಲಾಂಗ್ ಹಿಡಿದು, ಕಿಲ್ಲಿಂಗ್ ಲುಕ್ ನಲ್ಲಿ ಶಿವಣ್ಣ ನಡೆದು ಬರ್ತಿದ್ರೆ ಎದುರಿಗಿದ್ದೋರು ಅಲ್ಲೇ ಖಲ್ಲಾಸ್.!

ಇಂತಹ 'ಮಾಸ್ ಅಪೀಲ್' ಇರುವ ಶಿವಣ್ಣ 'ಲೀಡರ್' ಚಿತ್ರವನ್ನ ಒಪ್ಪಿಕೊಂಡಿದ್ದಾರೆ ಎಂದಾಕ್ಷಣ ಅಭಿಮಾನಿಗಳು ಹೊಸದನ್ನ ನಿರೀಕ್ಷಿಸಲು ಆರಂಭಿಸಿದ್ರು.

'ಲೀಡರ್' ಎಂಬ ಶೀರ್ಷಿಕೆ ಕೇಳಿದ ಕೂಡಲೆ ಅಣ್ಣಾವ್ರ ಮಗನನ್ನ 'ಜನನಾಯಕ'ನಾಗಿ ಊಹಿಸಿಕೊಳ್ಳಲು ಸಿನಿ ಪ್ರಿಯರು ಶುರು ಮಾಡಿದರು. 'ಲೀಡರ್' ಸಿನಿಮಾ ಸಮಾಜಮುಖಿ ಕಥಾಹಂದರ ಹೊಂದಿರಬಹುದು ಎಂಬ ಲೆಕ್ಕಾಚಾರ 'ಶಿವ'ಭಕ್ತರ ವಲಯದಲ್ಲಿ ಸ್ಟಾರ್ಟ್ ಆಯ್ತು. ಅಂಥವರೆಲ್ಲರಿಗೂ ಫೋಟೋ ಸಮೇತ ಹೊಸ ಅಪ್ ಡೇಟ್ಸ್ ಕೊಡ್ತಿದ್ದೀವಿ, ಓದಿ....

'ಲೀಡರ್' ಚಿತ್ರದಲ್ಲೂ ಶಿವರಾಜ್ ಕುಮಾರ್ 'ಲಾಂಗ್' ಹಿಡಿದಿದ್ದಾರೆ.!

''ಲೀಡರ್' ಚಿತ್ರದಲ್ಲಿ ರೌಡಿಸಂ ಕಥಾಹಂದರ ಇಲ್ಲ... ಶಿವಣ್ಣ ಇಲ್ಲಿ ಲಾಂಗ್ ಹಿಡಿಯಲ್ಲ'' ಅಂತ ನೀವು ಊಹಿಸಿದ್ರೆ, ಮೊದಲು 'ಲೀಡರ್' ಚಿತ್ರತಂಡದಿಂದ ಹೊರಬಿದ್ದಿರುವ ಲೇಟೆಸ್ಟ್ ಫೋಟೋ ನೋಡಿ....

ಶಿವಣ್ಣ ಕೈಯಲ್ಲಿ ಲಾಂಗ್.!

ತಮ್ಮ ಎಂದಿನ ಸಿಗ್ನೇಚರ್ ಸ್ಟೈಲ್ ನಲ್ಲಿಯೇ, 'ಲೀಡರ್' ಚಿತ್ರದಲ್ಲೂ ಶಿವರಾಜ್ ಕುಮಾರ್ 'ಲಾಂಗ್' ಹಿಡಿದಿದ್ದಾರೆ. ಅದಕ್ಕೆ ಈ ಫೋಟೋ ಸಾಕ್ಷಿ.

ಶಿವಣ್ಣ ಜೊತೆಗೆ 'ಲೂಸ್ ಮಾದ' ಕೈಯಲ್ಲೂ ಲಾಂಗ್.!

ಶಿವಣ್ಣ ಜೊತೆಗೆ 'ಲೂಸ್ ಮಾದ' ಯೋಗಿ ಕೂಡ ಲಾಂಗ್ ಹಿಡಿದಿದ್ದಾರೆ. ['ಲೀಡರ್' ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್]

ಹಾಗಾದ್ರೆ, 'ಲೀಡರ್' ಚಿತ್ರದ ಕಥೆ ಏನು.?

ಶಿವಣ್ಣ ಮತ್ತು ಯೋಗಿ... ಕೈಯಲ್ಲಿ ಲಾಂಗ್ ಹಿಡಿದಿದ್ದಾರೆ ಎಂದಾಕ್ಷಣ 'ಲೀಡರ್' ಚಿತ್ರ ಕೂಡ ರೌಡಿಸಂ ಎಳೆ ಹೊಂದಿದೆ ಅಂತ ಈಗಲೇ ಹೇಳಲು ಅಸಾಧ್ಯ. ಯಾಕಂದ್ರೆ, 'ಲೀಡರ್' ಚಿತ್ರತಂಡ ಇದುವರೆಗೂ ಕಥಾಹಂದರದ ಬಗ್ಗೆ ತುಟಿ ಬಿಚ್ಚಿಲ್ಲ. [ಒಂದ್ಕಾಲದಲ್ಲಿ ಜಗ್ಗೇಶ್ ಅವರನ್ನು ಸ್ವಂತ ತಮ್ಮನಂತೆ ಕಂಡಿದ್ದ ಶಿವಣ್ಣ]

ಡಿಫರೆಂಟ್ ಲುಕ್ ನಲ್ಲಿ ಶಿವಣ್ಣ

'ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಫೋಟೋಗಿಂತ ಉತ್ತಮ ಉದಾಹರಣೆ ಬೇಕಾ.?

'ಲೀಡರ್' ಚಿತ್ರದಲ್ಲಿದೆ ಕಲಾವಿದರ ದಂಡು

'ಲೀಡರ್' ಚಿತ್ರದಲ್ಲಿ ಶಿವಣ್ಣನ ಜೊತೆ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತ, ಯೋಗಿ, ಪ್ರಕಾಶ್ ಬೆಳವಾಡಿ, ಆಶಿಕಾ, ಪುಟಾಣಿ ಪರಿಣಿತ ಅಭಿನಯಿಸುತ್ತಿದ್ದಾರೆ.

ಮೊದಲ ಹಂತದ ಚಿತ್ರೀಕರಣ ಪೂರ್ಣ

ಸತತ 20 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಮೊದಲನೇ ಹಂತದ ಚಿತ್ರೀಕರಣ ಮುಗಿಸಿರುವ 'ಲೀಡರ್' ಚಿತ್ರತಂಡ ಡಿಸೆಂಬರ್ 2 ರಿಂದ ದ್ವಿತೀಯ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ.

'ರೋಸ್' ಖ್ಯಾತಿಯ ನಿರ್ದೇಶಕ

ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಿಸುತ್ತಿರುವ 'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

English summary
Kannada Actor Shiva Rajkumar starrer 'Leader' completes First Schedule shooting and is gearing up for Second Schedule. Check out the exclusive pics of 'Leader'

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X