»   » ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟು!

ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟು!

Posted By:
Subscribe to Filmibeat Kannada
ಶ್ರಿಯಾ ಸರಣ್ ತಮ್ಮ ಮದುವೆಯ ಆರತಕ್ಷತೆಯಲ್ಲಿ ಡಾನ್ಸ್ ಮಾಡಿದ್ದು ಹೀಗೆ | Filmibeat Kannada

ಚಂದನವನದಲ್ಲಿ 'ಚಂದ್ರ' ಚಕೋರಿ ಆಗಿ ಮಿನುಗಿದ, ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ಬಹು ಬೇಡಿಕೆಯ ನಟಿ ಆಗಿ ಮೆರೆದ ನಟಿ ಶ್ರಿಯಾ ಸರಣ್ ಮದುವೆ ಮುಗಿದು ಹೋಗಿದೆ.

ಮಾರ್ಚ್ 17, 18 ಹಾಗೂ 19 ರಂದು ಶ್ರಿಯಾ ಸರಣ್ ಮದುವೆ ನಡೆಯಲಿದೆ ಎಂಬ ಗುಸು ಗುಸು ಮೊದಲು ಕೇಳಿಬಂದಿತ್ತು. ಆದ್ರೆ, ''ಅದೆಲ್ಲ ಬರೀ ಸುಳ್ಳು. ನಾನು ಮದುವೆ ಆಗುತ್ತಿಲ್ಲ'' ಎಂದು ಸ್ಪಷ್ಟನೆ ನೀಡಿದ್ದ ನಟಿ ಶ್ರಿಯಾ ಸರಣ್, ಮಾಧ್ಯಮಗಳಿಗೆ ಗೊತ್ತಾಗದ ಹಾಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರದಿಗಳ ಪ್ರಕಾರ, ಮಾರ್ಚ್ 12 ರಂದೇ ಶ್ರಿಯಾ ಸರಣ್ ವಿವಾಹ ಮಹೋತ್ಸವ ನೆರವೇರಿದೆ. ತಮ್ಮ ದೀರ್ಘ ಕಾಲದ ಗೆಳೆಯ Andrei Koscheev ಕೈ ಹಿಡಿದಿದ್ದಾರೆ ನಟಿ ಶ್ರಿಯಾ ಸರಣ್. ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟಾಗಿದೆ. ಮುಂದೆ ಓದಿರಿ...

ಮೇಡ್ ಫಾರ್ ಈಚ್ ಅದರ್

ಹೊಸ ಜೀವನಕ್ಕೆ ಅಡಿಯಿಟ್ಟಿರುವ ನಟಿ ಶ್ರಿಯಾ ಸರಣ್ ಹಾಗೂ ರಷ್ಯಾದ ಟೆನ್ನಿಸ್ ಪ್ಲೇಯರ್ ಹಾಗೂ ಬಿಸಿನೆಸ್ ಮೆನ್ Andrei Koscheev ನೋಡಿದ್ರೆ ಮೇಡ್ ಫಾರ್ ಈಚ್ ಅದರ್ ಅಂತ ನಿಮಗೆ ಅನ್ಸಲ್ವಾ.?

ನಟಿ ಶ್ರೀಯಾ ಸರಣ್ ಮದುವೆ ಆಗೋಗಿದೆ.!

ಭಾರತೀಯ ಸಂಪ್ರದಾಯಂತೆ ಮದುವೆ

ರಾಜಸ್ಥಾನದ ಉದಯಪುರದಲ್ಲಿ ಮಾರ್ಚ್ 12 ರಂದು ದಾಂಪತ್ಯ ಜೀವನಕ್ಕೆ ಶ್ರಿಯಾ ಹಾಗೂ Andrei ಕಾಲಿಟ್ಟಿದ್ದಾರೆ ಎಂದು ವರದಿ ಆಗಿದೆ. ಭಾರತೀಯ ಸಂಪ್ರದಾಯದಂತೆ ಶ್ರಿಯಾ-Andrei ಮದುವೆ ನಡೆದಿದೆ.

ಆಪ್ತರಿಗೆ ಮಾತ್ರ ಆಹ್ವಾನ

ಶ್ರಿಯಾ-Andrei ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕುಟುಂಬಸ್ಥರು ಹಾಗೂ ಹಿರಿಯರ ಸಮ್ಮುಖದಲ್ಲಿ ನವ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದೆ. ಶ್ರಿಯಾ-Andrei ಮದುವೆಯ ಫೋಟೋ ಹಾಗೂ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕನ್ನಡಿಗರಿಗೂ ಶ್ರಿಯಾ ಪರಿಚಿತ

'ಇಷ್ಟಂ', 'ಸಂತೋಷಂ', 'ನುವ್ವೆ ನುವ್ವೆ', 'ಟ್ಯಾಗೋರ್' ಮುಂತಾದ ತೆಲುಗಿನ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಶ್ರಿಯಾ, ತಮಿಳಿನ 'ಶಿವಾಜಿ', 'ಕಂದಸ್ವಾಮಿ' ಚಿತ್ರಗಳಲ್ಲಿ ನಟಿಸುವ ಮೂಲಕ ಕಾಲಿವುಡ್ ನಲ್ಲೂ ಜನಪ್ರಿಯತೆ ಪಡೆದರು. 'ಆವಾರಾಪನ್', 'ಮಿಷನ್ ಇಸ್ತಾನ್ ಬುಲ್' ಸಿನಿಮಾಗಳಿಂದಾಗಿ ಬಾಲಿವುಡ್ ನಲ್ಲೂ ಬಹು ಬೇಡಿಕೆ ಕಂಡುಕೊಂಡರು ಶ್ರಿಯಾ. ಪುನೀತ್ ರಾಜ್ ಕುಮಾರ್ ಅಭಿನಯದ 'ಅರಸು' ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋದ ಶ್ರಿಯಾ, ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ ಆಗಿ ಮಿಂಚಿದರು. ಹೀಗಾಗಿ ಕನ್ನಡಿಗರಿಗೂ ಶ್ರಿಯಾ ಪರಿಚಯ ಇದೆ.

English summary
Kannada Actress Shriya Saran got married to her Russian Boyfriend Andrei Koscheev. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X