Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರಗಳು; ಹುಟ್ಟುಹಬ್ಬದಂದು ಮಗಳನ್ನು ಕಂಡು ಅಪ್ಪಿ ಮುದ್ದಾಡಿದ ಸುದೀಪ್.!
ಅವತ್ತು ಮೇ 11 ನೇ ತಾರೀಖು. ಕಿಚ್ಚ ಸುದೀಪ್ ನಿರ್ಮಾಣದಲ್ಲಿ ತಯಾರಾಗುತ್ತಿರುವ 'ಜಿಗರ್ ಥಂಡ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಬೆಂಗಳೂರಿನ ರಿಟ್ಜ್ ಕಾರ್ಲ್ಟನ್ ಹೊಟೇಲ್ ನಲ್ಲಿ ಆಯೋಜಿಸಲಾಗಿತ್ತು.
ಬಹುಶಃ ಅಂದು ತಮಗೆ ಸರ್ ಪ್ರೈಸ್ ಸಿಗಲಿದೆ ಅಂತ ಸುದೀಪ್ ಅಂದುಕೊಂಡಿರಲೇ ಇಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್, ನಟ ರವಿಶಂಕರ್ ಜೊತೆ ಸಮಾರಂಭಕ್ಕೆ ಆಗಮಿಸಿದ ನಟ ಸುದೀಪ್ ಗೆ ಅಚ್ಚರಿ ಆಗಿದ್ದು ಪುತ್ರಿ ಸಾನ್ವಿ ಹಾಗು ಪತ್ನಿ ಪ್ರಿಯಾ ನೋಡಿದ್ಮೇಲೆ.! [ವೈಯುಕ್ತಿಕ ಜೀವನದ ಬಗ್ಗೆ ಕಿಚ್ಚ ಸುದೀಪ್ ಬಾಯ್ಬಿಟ್ಟ ಸತ್ಯ]
ಸಭಾಂಗಣದಲ್ಲಿ ಪುತ್ರಿಯನ್ನ ನೋಡಿದ ತಕ್ಷಣ ಕಿಚ್ಚ ಸುದೀಪ್ ಅಪ್ಪಿಕೊಂಡು ಮುದ್ದಾಡಿದರು.
ಅಷ್ಟಕ್ಕೂ, 'ಜಿಗರ್ ಥಂಡ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪ್ರಿಯಾ ಹಾಗೂ ಸಾನ್ವಿಗೆ ಆಹ್ವಾನ ನೀಡಿದವರು ನಾಯಕ ನಟ ರಾಹುಲ್. ವರ್ಷದ ಹಿಂದೆ, 'ಜಿಗರ್ ಥಂಡ' ಮುಹೂರ್ತ ನಡೆದದ್ದು ಪ್ರಿಯಾ ಹುಟ್ಟುಹಬ್ಬದಂದು. ನಿಜ ಹೇಳ್ಬೇಕಂದ್ರೆ, ಪ್ರಿಯಾ ಅವರ ಮಾತಿನ ಮೇರೆಗೆ 'ಜಿಗರ್ ಥಂಡ' ಚಿತ್ರಕ್ಕೆ ರಾಹುಲ್ ನಾಯಕನಾಗಲು ಸುದೀಪ್ ಅವಕಾಶ ನೀಡಿದ್ದು. ಆ ಸೆಂಟಿಮೆಂಟ್ ನಿಂದ ಪ್ರಿಯಾರನ್ನ ರಾಹುಲ್ ಇನ್ವೈಟ್ ಮಾಡಿದ್ದರು. ಈ ವಿಚಾರ ಸುದೀಪ್ ಗೆ ಗೊತ್ತಿರಲಿಲ್ಲ.
ಒಂದ್ಕಡೆ, 'ಜಿಗರ್ ಥಂಡ' ಆಡಿಯೋ ಬಿಡುಗಡೆ ಸಮಾರಂಭ. ಇನ್ನೊಂದ್ಕಡೆ ಮಗಳು ಸಾನ್ವಿ ಹುಟ್ಟುಹಬ್ಬ. ಜನ್ಮದಿನದಂದು ಮಗಳನ್ನು ಕಂಡ ಖುಷಿಯಲ್ಲಿ ಅದೇ ವೇದಿಕೆಯಲ್ಲಿ ಸಾನ್ವಿ ಹುಟ್ಟುಹಬ್ಬವನ್ನೂ ಸುದೀಪ್ ಆಚರಿಸಿದರು.
ಸುದೀಪ್ ಹಾಗೂ ಪ್ರಿಯಾ ಬೇರೆ ಬೇರೆ ಆಗಿ ಸುಮಾರು ದಿನಗಳು ಕಳೆದಿವೆ. ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ. ಮನಸ್ತಾಪ ಏನೇ ಇದ್ದರೂ, 'ಜಿಗರ್ ಥಂಡ' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ ಕ್ಯಾಮರಾ ಕಂಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡರು. [ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?]
ಸುದೀಪ್-ಪ್ರಿಯಾ ಒಟ್ಟಾಗಿ ಕಾಣಿಸಿಕೊಂಡಿದ್ದನ್ನ ನೋಡಿ 'ಈ ಜೋಡಿ ಜೊತೆಯಾಗಿ ಹೀಗೆ ಇದ್ರೆ ಎಷ್ಟು ಚೆನ್ನ' ಅಂತ ಎಲ್ಲರೂ ಅಂದುಕೊಂಡಿದ್ದು ಸುಳ್ಳಲ್ಲ.