Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಶ್-ರಾಧಿಕಾ ಅದ್ಧೂರಿ ಆರತಕ್ಷತೆ: ಅರಮನೆ ಮೈದಾನದ ಒಳಗೊಂದು ಸುತ್ತು
ಡಿಸೆಂಬರ್ 10, ಶನಿವಾರದಂದು ಬೆಂಗಳೂರಿನ ಅರಮನೆ ಮೈದಾನದ 'ತ್ರಿಪುರ ವಾಸಿನಿ'ಯಲ್ಲಿ ನಟ ಯಶ್-ರಾಧಿಕಾ ಪಂಡಿತ್ ವಿವಾಹ ಆರತಕ್ಷತೆ ನಡೆಯಿತು.
ಇಂದ್ರಲೋಕವೇ ಧರೆಗಿಳಿದಷ್ಟು ಅದ್ಧೂರಿಯಾಗಿ, ವೈಭವೋಪೇತವಾಗಿ ನೆರವೇರಿದ ಯಶ್-ರಾಧಿಕಾ ಪಂಡಿತ್ ರಿಸೆಪ್ಷನ್ ನಲ್ಲಿ ಒಂದ್ ರೌಂಡ್ ಹಾಕೊಂಡ್ ಬರೋಣ ಬನ್ನಿ....

ಗಣ್ಯರಿಗೆ ಮಾತ್ರ ಎಂಟ್ರಿ.!
ಡಿಸೆಂಬರ್ 10 ರಂದು ನಡೆದ 'ಯಶೋರಾಧೆ' ರಿಸೆಪ್ಷನ್ ನಲ್ಲಿ ಗಣ್ಯಾತಿಗಣ್ಯರಿಗೆ ಮಾತ್ರ ಆಹ್ವಾನ ಇತ್ತು. ವಿಐಪಿ, ವಿವಿಐಪಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದ 'ತ್ರಿಪುರ ವಾಸಿನಿ'ಯ ಎಂಟ್ರಿ ಗೇಟ್ ನಿಂದ ಗ್ರೀನ್ ಕಾರ್ಪೆಟ್ ಹಾಸಲಾಗಿತ್ತು.[ಚಿತ್ರಗಳು: 'ಯಶೋರಾಧೆ' ಅದ್ಧೂರಿ ರಿಸೆಪ್ಷನ್ ನಲ್ಲಿ ಗಣ್ಯಾತಿಗಣ್ಯರ ದಂಡು]

'ರಾಯಲ್' ವೇದಿಕೆ
ಯಶ್-ರಾಧಿಕಾ ಪಂಡಿತ್ ರಿಸೆಪ್ಷನ್ ಗಾಗಿ 'ತ್ರಿಪುರ ವಾಸಿನಿ'ಯಲ್ಲಿ 'ರಾಯಲ್' ವೇದಿಕೆ ನಿರ್ಮಿಸಲಾಗಿತ್ತು. ಅದರಲ್ಲಿ ಯಶ್-ರಾಧಿಕಾ ರಾಜಾ-ರಾಣಿಯಂತೆ ಮಿಂಚಿದರು. [ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ]

ಅರುಣ್ ಸಾಗರ್ ಕಲಾ ನಿರ್ದೇಶನ
ಕಲಾವಿದ ಅರುಣ್ ಸಾಗರ್ ಸಾರಥ್ಯದಲ್ಲಿ 'ರಾಯಲ್' ಸೆಟ್ ನಿರ್ಮಾಣವಾಗಿತ್ತು. [ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ]

ಗಣ್ಯರಿಗಾಗಿ ವಿಶೇಷ ಔತಣ
ಯಶ್-ರಾಧಿಕಾ ವೆಡ್ಡಿಂಗ್ ರಿಸೆಪ್ಷನ್ ನಲ್ಲಿ ಗಣ್ಯರಿಗಾಗಿ ವಿಶೇಷವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ['ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಅನೀಶ್ ವೈಲಿನ್ ವಾದನ
ಯಶೋರಾಧೆ ವೆಡ್ಡಿಂಗ್ ರಿಸೆಪ್ಷನ್ ನಲ್ಲಿ ಅನೀಶ್ ವೈಲಿನ್ ವಿದ್ಯಾಶಂಕರ್ ರವರ ವೈಲಿನ್ ವಾದನವಿತ್ತು.

ನವ ದಂಪತಿಗೆ ಆಸನ
ವೈಭವ 'ರಾಯಲ್' ವೇದಿಕೆಯಲ್ಲಿ ನವ ದಂಪತಿಗೆ ಮೀಸಲಾಗಿದ್ದ ಆಸನ ಇದು. [ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್]

ಯಶ್-ರಾಧಿಕಾ ಕನಸಂತೆ ವೇದಿಕೆ ನಿರ್ಮಾಣ
ನಟ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಕನಸಿನಂತೆ ಅರುಣ್ ಸಾಗರ್ ಈ ವೈಭವೋಪೇತ ವೇದಿಕೆ ನಿರ್ಮಿಸಿದ್ದರು.

ಸೆರೆಹಿಡಿಯುವ ಕ್ಯಾಮರಾಗಳು ಒಂದೆರಡಲ್ಲ.!
ಯಶ್-ರಾಧಿಕಾ ಪಂಡಿತ್ ಆರತಕ್ಷತೆಯನ್ನ ಸೆರೆ ಹಿಡಿಯಲು ಜಿಮ್ಮಿ ಜಿಬ್ ಕ್ಯಾಮರಾಗಳನ್ನೂ ಉಪಯೋಗಿಸಲಾಗಿತ್ತು.

2,500 ಸೆಲೆಬ್ರಿಟಿಗಳಿಗೆ ಆಸನ ವ್ಯವಸ್ಥೆ
ಆರತಕ್ಷತೆಗೆ ಹಾಜರ್ ಆಗುವ 2,500 ಸೆಲೆಬ್ರಿಟಿಗಳಿಗೆ 'ತ್ರಿಪುರ ವಾಸಿನಿ'ಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು.

ಏರಿಯಲ್ ವ್ಯೂ
ಯಶ್-ರಾಧಿಕಾ ಪಂಡಿತ್ ರಿಸೆಪ್ಷನ್ ವೈಭವದ ಏರಿಯಲ್ ವ್ಯೂ ನೋಡಿ...

ಗಣ್ಯಾತಿಗಣ್ಯರ ದಂಡು
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಗೋಲ್ಡನ್ ಸ್ಟಾರ್ ಗಣೇಶ್, ಮಾಲಾಶ್ರೀ, ರಾಮು, ರಾಕ್ ಲೈನ್ ವೆಂಕಟೇಶ್, ಮಧು ಬಂಗಾರಪ್ಪ ಸೇರಿದಂತೆ ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರು ಯಶ್-ರಾಧಿಕಾ ಪಂಡಿತ್ ರಿಸೆಪ್ಷನ್ ನಲ್ಲಿ ಭಾಗವಹಿಸಿದ್ರು.