»   » ಧೋನಿ ಬಾಯ್ಸ್ ಪರ ಬಿಗ್ ಬಿ, ಅನುಷ್ಕಾ ಬ್ಯಾಟಿಂಗ್

ಧೋನಿ ಬಾಯ್ಸ್ ಪರ ಬಿಗ್ ಬಿ, ಅನುಷ್ಕಾ ಬ್ಯಾಟಿಂಗ್

Posted By:
Subscribe to Filmibeat Kannada

ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ವರ್ಲ್ಡ್ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಆಸೀಸ್ ಪರಾಕ್ರಮಕ್ಕೆ ಟೀಮ್ ಇಂಡಿಯಾ ತಲೆ ಬಾಗಿದೆ. ಆ ಮೂಲಕ ಮತ್ತೆ ಚಾಂಪಿಯನ್ ಆಗುವ ಟೀಮ್ ಇಂಡಿಯಾ ಕನಸು ಭಗ್ನವಾಗಿದೆ. ಸಕಲ ಭಾರತೀಯರ ಕನಸು ನುಚ್ಚು ನೂರಾಗಿದೆ.

ಬೃಹತ್ ಮೊತ್ತವನ್ನ ಬೆನ್ನಟ್ಟಿದ ಭಾರತ ಸೆಮಿಫೈನಲ್ ಸಮರವನ್ನ ಸಮರ್ಪಕವಾಗಿ ಎದುರಿಸಲಿಲ್ಲ. 95 ರನ್ ಗಳ ಭಾರಿ ಅಂತರದ ಹೀನಾಯ ಸೋಲು ಕಂಡಿರುವ ಭಾರತ ತಂಡದ ಕಳಪೆ ಪ್ರದರ್ಶನದ ವಿರುದ್ಧ ಹಲವೆಡೆ ಪ್ರತಿಭಟನೆ ಕೂಡ ನಡೆಯುತ್ತಿದೆ.

ಆದ್ರೆ, ನಮ್ಮ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಸ್ಟಾರ್ಸ್ ಈ ಬಗ್ಗೆ ಏನಂತಾರೆ? ಎಲ್ಲಾ ಕೆಲಸವನ್ನ ಬಿಟ್ಟು ಟಿವಿ ಮುಂದೆ ಹಾಜರಾಗಿದ್ದ ತಾರೆಯರು, ಮ್ಯಾಚ್ ನಿಂದ ನಿರಾಶೆಗೊಂಡು ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಯಾರ್ಯಾರು ಏನು ಹೇಳಿದ್ದಾರೆ ಅಂತ ಸ್ಲೈಡ್ ಗಳಲ್ಲಿ ನೋಡಿ...

ಅಮಿತಾಬ್ ಬಚ್ಚನ್

''ನಾವು ಸೋತಿದ್ದೇವೆ. ಅದಕ್ಕೆ....ಇಡೀ ಜಗತ್ತಿನಲ್ಲಿ ಸೋಲದೇ ಇರುವ ಒಂದು ತಂಡವನ್ನ ತೋರಿಸಿ.'' - ಅಮಿತಾಬ್ ಬಚ್ಚನ್ [ಟೀಕೆ ಮಾಡೋದು ಬಿಡಿ, ಧೋನಿ ಪಡೆಗೆ ಬೆನ್ನು ತಟ್ಟಿ]

ಅನುಷ್ಕಾ ಶರ್ಮಾ

'' ನಿಮ್ಮ ಪ್ರದರ್ಶನವನ್ನ ಅಮಿತಾಬ್ ಬಚ್ಚನ್ ಹೊಗಳಿದಾಗ'' - ಅನುಷ್ಕಾ ಶರ್ಮಾ [ಕೊಹ್ಲಿ- ಅನುಷ್ಕಾ ತೆಗಳುವುದನ್ನು ನಿಲ್ಲಿಸ್ರಪ್ಪ ಸಾಕು!]

ಶಾರುಖ್ ಖಾನ್

''ಕೆಲವೊಂದನ್ನ ಗೆಲ್ಲುತ್ತೇವೆ. ಕೆಲವೊಂದನ್ನ ಸೋಲುತ್ತೇವೆ. ಆದ್ರೆ, ನಮ್ಮ ಪ್ರೀತಿಗೆ ಪಾತ್ರರಾದವರು ಸದಾ ನಮಗೆ ಹೆಮ್ಮೆ ತರುತ್ತಾರೆ. ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಒಳ್ಳೆ ಪರ್ಫಾಮೆನ್ಸ್ ನೀಡಿದೆ.'' - ಶಾರುಖ್ ಖಾನ್

ಅರ್ಜುನ್ ರಾಂಪಾಲ್

''ಮೆನ್ ಇನ್ ಬ್ಲೂ ತಂಡಕ್ಕೆ ನೋವಿನ ದಿನ. ಆದ್ರೂ ಇಡೀ ಟೂರ್ನಮೆಂಟ್ ನಲ್ಲಿ ಚಾಂಪಿಯನ್ಸ್ ತರಹ ಪ್ರದರ್ಶನ ನೀಡಿರುವುದು ನಮ್ಮ ಹೆಮ್ಮೆ'' - ಅರ್ಜುನ್ ರಾಂಪಾಲ್

ರಾಗಿಣಿ ದ್ವಿವೇದಿ

''ನಾವು ಗೆಲ್ಲಲ್ಲಿಲ್ಲ. ಆದ್ರೆ, ಟೀಮ್ ಇಂಡಿಯಾ ಆಟವನ್ನ ಚೆನ್ನಾಗಿ ಆಡಿದೆ. ಈ ಬಾರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಒಳ್ಳೆ ಪಂದ್ಯಗಳನ್ನ ನೀಡಿದೆ'' - ರಾಗಿಣಿ ದ್ವಿವೇದಿ.

ಸುಮಲತಾ ಅಂಬರೀಷ್

''ಇವಾಗ ಮುಗೀತು. ಇಂದು ಆಸೀಸ್ ಉತ್ತಮ ಆಟವಾಡಿದ್ರು. ಮುಂದೆ ನಾನು ಕಿವೀಸ್ ಪರ.'' - ಸುಮಲತಾ ಅಂಬರೀಷ್

ಸಂಜನಾ ಗಲ್ರಾನಿ

''ನಾವು ಚಾಂಪಿಯನ್ ಟೀಮ್. ಭಾರತ ತಂಡ ಅತ್ತ್ಯುತ್ತಮ ಪ್ರದರ್ಶನ ನೀಡಿದೆ. ನಾವು ನಿಜವಾದ ಸಾಧಕರು. ಈ ಬಾರಿ ಅದೃಷ್ಟ ನಮ್ಮ ಪರ ಇರ್ಲಿಲ್ಲ. 2019ರಲ್ಲಿ ಗೆಲುವು ಸಾಧಿಸೋಣ'' - ಸಂಜನಾ ಗಲ್ರಾನಿ

ಹರ್ಷಿಕಾ ಪೂಣಚ್ಚ

''ಮುಗೀತು. ನಾವು ಸೋತ್ವಿ'' - ಹರ್ಷಿಕಾ ಪೂಣಚ್ಚ [ಭಾರತ ಸೋತಿದಕ್ಕೆ ಟ್ವಿಟ್ಟರ್ ನಲ್ಲಿ ಪಟಾಕಿ ಹಚ್ಚಿದ ವರ್ಮಾ]

ರಘು ದೀಕ್ಷಿತ್

''ಟೀಮ್ ಆಗಿ ನಾವು ಒಳ್ಳೆ ಆಟವಾಡಿದ್ದೇವೆ. ನಾವು ವರ್ಲ್ಡ್ ಕಪ್ ಬಿಟ್ಟು ಬಂದಿರಬಹುದು. ಆದ್ರೆ, ಘನತೆಯಿಂದ ವಾಪಸ್ಸಾಗುತ್ತಿದ್ದೇವೆ'' - ರಘು ದೀಕ್ಷಿತ್.

ಪ್ರಿಯಾಮಣಿ

''ವಾಪಸ್ ಕೊಟ್ಟು ಬಿಟ್ವಿ'' - ಪ್ರಿಯಾಮಣಿ

English summary
Current Champions Team India has lost to Australia in ICC World Cup Semi-Final Match. Bollywood and Sandalwood Celebrities have taken their twitter account to react on India's defeat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada