»   » ಖ್ಯಾತ ನಿರ್ದೇಶಕ ಬಾಲು ಮಹೇಂದ್ರನ್ ವಿಧಿವಶ

ಖ್ಯಾತ ನಿರ್ದೇಶಕ ಬಾಲು ಮಹೇಂದ್ರನ್ ವಿಧಿವಶ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡ ಚಿತ್ರ ರಂಗದ ಮೂಲಕ ನಿರ್ದೇಶಕರಾಗಿ ವೃತ್ತಿ ಆರಂಭಿಸಿದ್ದ ಭಾರತದ ಖ್ಯಾತ ನಿರ್ದೇಶಕ ಬಾಲು ಮಹೇಂದ್ರನ್ ಅವರು ಚೆನ್ನೈನ ಖಾಸಗಿ ಆಸ್ಪತ್ರ್ತೆಯಲ್ಲಿ ಗುರುವಾರ(ಫೆ.13) ಕೊನೆಯುಸಿರೆಳಿದಿದ್ದಾರೆ. ಪತ್ನಿ ಅಹಿಲೇಶ್ವರಿ ಮಹೇಂದ್ರನ್ ಅವರನ್ನು ಅಗಲಿದ್ದಾರೆ.

ಬಾಲನಾಥನ್ ಬೆಂಜಮೀನ್ ಮಹೇಂದ್ರನ್ ಅವರು ಹುಟ್ಟಿದ್ದು ಬೆಳೆದಿದ್ದು ಶ್ರೀಲಂಕಾದಲ್ಲಿ ಚಿತ್ರರಂಗದಲ್ಲಿ ವೃತಿ ಆರಂಭಿಸಿದ್ದು ಕನ್ನಡ ಚಿತ್ರರಂಗದ ಮೂಲಕ. ಕೋಕಿಲ ಅವರ ಮೊದಲ ಚಿತ್ರ. ಆದರೆ, ತಮಿಳು ಚಿತ್ರರಂಗದಲ್ಲಿ ಬಾಲು ಮಹೇಂದ್ರನ್ ಅವರ ಬಹುಮುಖ ಪ್ರತಿಭೆ ಅನಾವರಣಗೊಂಡಿತು.

ಐದು ರಾಷ್ಟ್ರಪ್ರಶಸ್ತಿ, ಒಂದು ಕರ್ನಾಟಕ ರಾಜ್ಯ ಪ್ರಶಸ್ತಿ ಮೂರು ಫಿಲಂಫೇರ್ ಪ್ರಶಸ್ತಿ, ಎರಡು ಕೇರಳ ರಾಜ್ಯ ಪ್ರಶಸ್ತಿ, ಎರಡು ಆಂಧ್ರಪ್ರದೇಶದ ನಂದಿ ಪ್ರಶಸ್ತಿ ಗಳಿಸಿದ್ದ ಬಾಲು ಹಲವು ಯುವ ನಿರ್ದೇಶಕರಿಗೆ ಗುರುವಾಗಿದ್ದರು.

ಚಿತ್ರಕಥೆ ಬರಹಗಾರ, ಚಿತ್ರ ನಿರ್ಮಾಣ, ಸಂಕಲನ, ಛಾಯಾಗ್ರಾಹಕ, ನಿರ್ದೇಶಕರಾಗಿ ಬಾಲು ಮಹೇಂದ್ರನ್ ಯಶಸ್ವಿಯಾದರು.ಮೊದಲ ಚಿತ್ರ ಕೋಕಿಲ(ಮೋಹನ್ ನಾಯಕ ನಟ) ಕ್ಕೆ ಶ್ರೇಷ್ಠ ಛಾಯಾಗ್ರಹಕ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದರು.

Indian filmmaker Balu Mahendran passes away

ಮೂನ್ ಡ್ರಾಂ ಪಿರೈ, ಹಿಂದಿಯಲ್ಲಿ ಸದ್ಮಾ, ಸಂಧ್ಯಾ ರಾಗಂ, ಸತಿ ಲೀಲಾವತಿ ಇವರ ಶ್ರೇಷ್ಠ ಚಿತ್ರಗಳು, ಥಲೈಮುರೈಗಲ್ (2013) ಇವರ ಕೊನೆ ಚಿತ್ರವಾಗಿತ್ತು. ಮಣಿರತ್ನಂ ಅವರ ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಬಾಲು ಮಹೇಂದ್ರನ್ ಅವರೇ ಛಾಯಾಗ್ರಾಹಕರಾಗಿದ್ದರು. ಬಾಲು ಮಹೇಂದ್ರ ಮಣಿರತ್ನಂ ಇಬ್ಬರು ಕನ್ನಡದಲ್ಲೇ ತಮ್ಮ ವೃತ್ತಿ ಆರಂಭಿಸಿದ್ದು ವಿಶೇಷ.

1971 ರಲ್ಲಿ ಮಲೆಯಾಳಂ ಚಿತ್ರ ನೆಲ್ಲು ಮೂಲಕ ಕ್ಯಾಮೆರಾಮನ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಾಲು ಅವರಿಗೆ ಛಾಯಾಗ್ರಹಣ ಕಲೆ ಜನ್ಮಜಾತವಾಗಿ ಬಂದಿದ್ದು ಎನ್ನುವವರಿದ್ದಾರೆ. 1977ರಲ್ಲಿ ಕನ್ನಡದಲ್ಲಿ ಕೋಕಿಲ ಚಿತ್ರ ನಿರ್ದೇಶಿಸುವ ಮೂಲಕ ಛಾಯಾಗ್ರಾಹಕ ವೃತ್ತಿಯಿಂದ ನಿರ್ದೇಶಕರಾಗಿ ಬಡ್ತಿ ಹೊಂದಿದ್ದರು. ಇದೇ ಚಿತ್ರದಲ್ಲಿ ಅಭಿನಯಿಸಿದ ಮೋಹನ್ ಅವರು ಮುಂದೇ ಕೋಕಿಲ ಮೋಹನ್ ಎಂಬ ಹೆಸರಿನಲ್ಲೇ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಈ ಚಿತ್ರ ಎಕ್ ಔರ್ ಪ್ರೇಮ್ ಕಹಾನಿ ಹೆಸರಿನಲ್ಲಿ ಹಿಂದಿಯಲ್ಲೂ ನಿರ್ಮಿಸಿದರು.

ಕಮಲ್ ಹಾಸನ್, ಶ್ರೀದೇವಿ ಅಭಿನಯದ ಮೂನ್ ಡ್ರಾಮ್ ಪಿರೈ(ಹಿಂದಿಯಲ್ಲಿ ಸದ್ಮಾ) ,ಅಮೋಲ್ ಪಾಲೇಕರ್ ಓಲಂಗಲ್, ಮಮ್ಮೂಟಿ ಹಾಗೂ ಶೋಭನಾ ಅಭಿನಯದ ಯಾತ್ರಾ ಚಿತ್ರಗಳನ್ನು ಚಿತ್ರಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. ಕೋಕಿಲ, ಚಟ್ಟಕ್ಕಾರಿ, ಪ್ರಯಾಣಂ, ಶಂಕರಾಭರಣಂ, ಪಲ್ಲವಿ ಅನುಪಲ್ಲವಿ, ರಾಗಂ ಮುಂತಾದ ಚಿತ್ರಗಳಲ್ಲಿನ ಅವರ ಛಾಯಾಗ್ರಹಣ ಮೆಚ್ಚುಗೆ ಪಡೆದಿದೆ. ಸಂತೋಷ್ ಶೀವನ್, ರವಿ ಕೆ ಚಂದ್ರನ್, ನಟರಾಜನ್ ಸುಬ್ರಮಣ್ಯಯನ್, ಕೆ.ವಿ ಆನಂದ್ ಅವರಿಗೆ ಬಾಲು ಮಹೇಂದ್ರ ಅವರು ಸ್ಫೂರ್ತಿಯಾಗಿದ್ದಾರೆ.

English summary
Indian filmmaker, screenwriter, editor and cinematographer Balu Mahendran. Born and brought up in Sri Lanka passed away today at a private hospital in Chennai. He started his film career as director through Kokila, a Kannada film.
Please Wait while comments are loading...