For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಕೆಲವು ನಟ ನಟಿಯರು, ಸಂಗೀತ ನಿರ್ದೇಶಕರಿಗೆ ಡ್ರಗ್ ಮಾಫಿಯಾದ ಜೊತೆ ನಂಟಿದೆ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇತ್ತೀಚಿಗೆ ನಿಧನರಾದ ಸ್ಯಾಂಡಲ್ ವುಡ್ ಯುವ ನಟನ ಸಾವಿನ ಬಗ್ಗೆ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

  ಡ್ರಗ್ಸ್ ಬಗ್ಗೆ ಕೇಳಿದ್ದಕ್ಕೆ ರಚಿತಾ ರಾಮ್ ಫುಲ್ ಗರಂ | Filmibeat Kannada

  ಟಿವಿ 9 ಕನ್ನಡ ವಾಹಿನಿ ಜೊತೆ ಮಾತನಾಡಿರುವ ಇಂದ್ರಜಿತ್ ಲಂಕೇಶ್, ಕನ್ನಡದ ಯುವ ನಟನ ಸಾವಿಗೆ ಕಾರಣವೇನು? ಎಂದು ಕೇಳಿದ್ದಾರೆ. ನಟನ ಹೆಸರು ಹೇಳಲು ಇಷ್ಟಪಡದ ಇಂದ್ರಜಿತ್ ಲಂಕೇಶ್, ಇತ್ತೀಚಿಗೆ ನಿಧನರಾದ 35 ವರ್ಷ ವಯಸ್ಸಿನ ನಟನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಸ್ಯಾಂಡಲ್‌ವುಡ್‌ ಡ್ರಗ್ ನಂಟು ಇದೆ, ರಕ್ಷಣೆ ಕೊಟ್ಟರೆ ವಿವರ ಕೊಡ್ತೀನಿ: ಇಂದ್ರಜಿತ್ ಲಂಕೇಶ್

   ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ?

  ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ?

  ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಾರೆ ಎಂದರೆ ಏನು ಕಾರಣ?, ಆ ನಟನ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ಮಾಡಿಸಿಲ್ಲ? ಪರೀಕ್ಷೆ ಮಾಡಿಸಿದ್ದರೆ ಎಲ್ಲಾ ಬಯಲಾಗುತ್ತಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಪೊಲೀಸರಿಗೆ ರಾಜಕೀಯ ಒತ್ತಡವಿತ್ತು. ಯಾವ ರಾಜಕೀಯ ವ್ಯಕ್ತಿ ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಿದೆ" ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

   ಅನೇಕ ನಟ-ನಟಿಯರ ಮನೆಗೆ ಡ್ರಗ್ ಹೋಗುತ್ತಿದೆ

  ಅನೇಕ ನಟ-ನಟಿಯರ ಮನೆಗೆ ಡ್ರಗ್ ಹೋಗುತ್ತಿದೆ

  ಸ್ಯಾಂಡಲ್ ವುಡ್ ನಲ್ಲಿ ಹಲವು ನಟ-ನಟಿಯರು ಡ್ರಗ್ ವ್ಯಸನಕ್ಕೆ ಒಳಗಾಗಿದ್ದಾರೆ. ಅನೇಕ ನಟರ ಮನೆಯ ಎಸ್ಟೇಟ್ ಗಳಿಗೆ ಡ್ರಗ್ ಹೋಗುತ್ತಿದೆ. ಕೊರೊನಾ ಲಾಡ್ ಡೌನ್ ಸಮಯದಲ್ಲಿಯೂ ಇಷ್ಟು ದೊಡ್ಡ ಮಟ್ಟದ ದಂಧೆ ನಡೆಯಲು ಹೇಗೆ ಸಾಧ್ಯ? ಎಂದು ಇಂದ್ರಜಿತ್ ಪ್ರಶ್ನಿಸಿದ್ದಾರೆ.

  ಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆ

   ತನಿಖೆ ಮಾಡಿದರೆ ಎಲ್ಲಾ ಬಯಲಾಗುತ್ತೆ

  ತನಿಖೆ ಮಾಡಿದರೆ ಎಲ್ಲಾ ಬಯಲಾಗುತ್ತೆ

  ಈ ಹಿಂದೆಯೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ದಂಧೆಯ ಬಗ್ಗೆ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ತನಿಖೆ ಯಾಕೆ ನಡೆಸಲಿಲ್ಲ? ಒಂದು ವೇಳೆ ತನಿಖೆ ನಡೆಸಿದ್ದರೆ ಎಲ್ಲಾ ಮಾಹಿತಿ ಹೊರಬರುತ್ತಿತ್ತು. ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿತ್ತು. ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ನನ್ನ ಬಳಿ ಸಂಪೂರ್ಣ ಮಾಹಿತಿ ಇದೆ, ಸಂಬಂಧ ಪಟ್ಟ ಇಲಾಖೆಯವರು, ಪೊಲೀಸರು ಕೇಳಿದರೆ ಕೊಡುತ್ತೇನೆ. ಆದರೆ ನನಗೆ ರಕ್ಷಣೆ ಬೇಕು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

   ಮೂವರು ಆರೋಪಿಗಳ ಬಂಧನ

  ಮೂವರು ಆರೋಪಿಗಳ ಬಂಧನ

  ಇತ್ತೀಚಿಗೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದ ಐಶಾರಾಮಿ ಹೋಟೆಲ್ ಅಪಾರ್ಟ್ ಮೆಂಟ್‌ ಮೇಲೆ ದಾಳಿ ಮಾಡಿ, ಡ್ರಗ್ಸ್ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಒಬ್ಬ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರು ಕನ್ನಡದ ನಟ-ನಟಿಯರು, ಸಂಗೀತ ನಿರ್ದೇಶಕರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

  English summary
  Indrajith Lankesh reveals Drug link in Sandalwood. He Has questioned about death of Sandalwood Yang Actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X