For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಚಿತ್ರಗಳನ್ನ ವಿಶ್ವಮಟ್ಟದಲ್ಲಿ ಗುರುತಿಸುವುದೇ 'ಇಂಡಿವುಡ್' ಉದ್ದೇಶ

  By Bharath Kumar
  |

  ಭಾರತೀಯ ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಿರುವ 'ಇಂಡಿವುಡ್ ಟ್ಯಾಲೆಂಟ್ ಹಂಟ್' ನಾಲ್ಕನೇ ಆವೃತ್ತಿ ಡಿಸೆಂಬರ್ ನಲ್ಲಿ ಆರಂಭವಾಗುತ್ತಿದೆ. ನಾಲ್ಕು ದಿನಗಳ ಈ ಕಿರುಚಿತ್ರೋತ್ಸವ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದ್ದು, ಡಿಸೆಂಬರ್ 1 ರಿಂದ 4ರ ವರೆಗೂ ಜರುಗಲಿದೆ.

  ಈ ಚಿತ್ರೋತ್ಸವದಲ್ಲಿ ಸುಮಾರು 15 ಸಾವಿರಕ್ಕಿಂತ ಹೆಚ್ಚು ಸೆಲೆಬ್ರಿಟಿಗಳು, 100 ದೇಶಗಳ ಸುಮಾರು 5 ಸಾವಿರ ಉದ್ಯಮಿಗಳುಗಳು ಭಾಗವಹಿಸಲಿದ್ದಾರೆ. ಹೈದ್ರಾಬಾದ್ ನಲ್ಲಿ ಮುಖ್ಯ ಕಛೇರಿ ಹೊಂದಿರುವ ಇಂಡಿವುಡ್ ಟ್ಯಾಲೆಂಟ್ ಹಂಟ್ ವಿವಿಧ ಕಲಾತ್ಮಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಹುಡುಕಲು ಪ್ರಮುಖ ರಾಷ್ಟ್ರೀಯ ಮಟ್ಟದ ವೇದಿಕೆಯಾಗಿದೆ. ಈ ವಿಶೇಷ ಸಂಸ್ಥೆಗೆ ಭಾರತದ ಎಲ್ಲ ಚಿತ್ರರಂಗಗಳು ಸಹಕಾರ ನೀಡುತ್ತಿದೆ.

  'ಇಂಡಿವುಡ್ ಫಿಲ್ಮ್ ಕಾರ್ನಿವಲ್' ನಾಲ್ಕನೇ ಆವೃತ್ತಿ (ಐ.ಎಫ್.ಸಿ 2018) 10 ಶತಕೋಟಿ ಯುಎಸ್ಡಿ ಪ್ರಾಜೆಕ್ಟ್ ಆಗಿದ್ದು, ಭಾರತೀಯ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ ಹೊಂದಿದೆ. ಐ.ಎಫ್.ಸಿ 2018 ರಲ್ಲಿ ಚಿತ್ರ ತಯಾರಿಕೆ, ಕೌಶಲ್ಯ ಅಭಿವೃದ್ಧಿ, ಪೂರ್ವ ನಿರ್ಮಾಣ, ಉತ್ಪಾದನೆ, ತಾಂತ್ರಿಕ ಬೆಂಬಲ, ನಿರ್ಮಾಣ, ವಿತರಣೆ, ಮಾರುಕಟ್ಟೆ ಹೀಗೆ ಇಡೀ ಚಿತ್ರರಂಗದ ಕೌಶಲ್ಯಗಳನ್ನ ಕಲಿಯುವ ವೇದಿಕೆಯಾಗಿದೆ.

  ಇಂಡಿವುಡ್ ಪ್ರಾಜೆಕ್ಟ್ ನ ಸಂಸ್ಥಾಪಕ ನಿರ್ದೇಶಕ ಸೋಹನ್ ರಾಯ್, ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ಭಾರತೀಯ ಸಿನಿಮಾಗಳು ಹಾಗೂ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕು' ಎಂಬ ಅಭಿಲಾಷೆ ಹೊಂದಿದ್ದಾರೆ.

  ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರಗಳನ್ನ ಉತ್ತೇಜಿಸುವ ಪ್ರಯತ್ನ ಮತ್ತು ಜಾಗತಿಕ ಗುರುತಿಸುವ ಪ್ರಯತ್ನ ಇದರಿಂದ ಆಗುತ್ತಿದೆ. ಹಾಗಾಗಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ನಟಿ, ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಮತ್ತು ಅತ್ಯುತ್ತಮ ಮಕ್ಕಳ ಕಲಾವಿದ ಸೇರಿದಂತೆ 26 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

  ವಿಶ್ವ ಸಿನಿಮಾದ 1,000 ಸದಸ್ಯರು ಎಂಟ್ರಿಗಳನ್ನ ಆಯ್ಕೆ ಮಾಡುತ್ತಾರೆ. ಈ ಸದಸ್ಯರಲ್ಲಿ ಆಶಿಶ್ ಕುಲಕರ್ಣಿ, ಬಿ. ಲೆನಿನ್, ಮಧು ಅಂಬಾತ್ ಮತ್ತು ರವಿ ವರ್ಮನ್ ಸೇರಿದಂತೆ ಹಲವರು ಇದ್ದಾರೆ. ನಂತರ ಖ್ಯಾತ ಚಲನಚಿತ್ರ ನಿರ್ಮಾಪಕ, ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕ ಗೌತಮ್ ಘೋಸ್ ನೇತೃತ್ವದ ತೀರ್ಪುಗಾರರ ಸಮಿತಿಯು ವಿಜೇತರನ್ನು ಘೋಷಿಸುತ್ತದೆ.

  English summary
  Indywood Film Carnival, the much anticipated entertainment fiesta of the year, will be held at HITEX convention centre from December 1st to 5th 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X