»   » ಕಿಚ್ಚನ ಸ್ಫೂರ್ತಿಯಿಂದ ತಯಾರಾಗುತ್ತಿದ್ದಾರೆ ಪೈಲ್ವಾನ್ ಗಳು

ಕಿಚ್ಚನ ಸ್ಫೂರ್ತಿಯಿಂದ ತಯಾರಾಗುತ್ತಿದ್ದಾರೆ ಪೈಲ್ವಾನ್ ಗಳು

Posted By:
Subscribe to Filmibeat Kannada
ಕಿಚ್ಚ ಸುದೀಪ್ ನೋಡಿ ಹುಚ್ಚೆದ್ದು ವರ್ಕ್ ಔಟ್ ಮಾಡ್ತಿದ್ದಾರೆ ಅಭಿಮಾನಿಗಳು| Filmibeat Kannada

ಕಿಚ್ಚ ಸುದೀಪ್ ಸದ್ಯ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಅಭಿನಯ ಚಕ್ರವರ್ತಿಯ ಕೋಟಿಗೊಬ್ಬ ಸಿನಿಮಾ ಶೂಟಿಂಗ್ ಸದ್ದಿಲ್ಲದೆ ಶುರುವಾಗಿದೆ. ಅದರ ಜೊತೆಯಲ್ಲಿ 'ದಿ ವಿಲನ್' ಚಿತ್ರೀಕರಣ ಕೊನೆಯಹಂತ ತಲುಪಿದೆ.

ಇತ್ತ ಪೈಲ್ವಾನ್ ಸಿನಿಮಾಗಾಗಿ ಸಕಲ ತಯಾರಿಗಳು ನಡೆಯುತ್ತಿದೆ. ಸುದೀಪ್ ಅಭಿನಯದ ಯಾವುದೇ ಸಿನಿಮಾಗಳ ಚಿತ್ರೀಕರಣ ಶುರುವಾಯ್ತು ಎಂದರೆ ಸಾಕು ಅಂದಿನಿಂದಲೇ ಕ್ರೇಜ್ ಕೂಡ ಶುರುವಾಗುತ್ತೆ. ಅದರಂತೆಯೇ ಪೈಲ್ವಾನ್ ಸಿನಿಮಾದ ಕ್ರೇಜ್ ಆರಂಭವಾಗಿದೆ. ಪೋಸ್ಟರ್ ಬಿಡುಗಡೆ ಮಾಡಿದಾಗ ಮಕ್ಕಳಿಂದ ಯುವಕರವರೆಗೂ ಎಲ್ಲರೂ ಅದೇ ಸ್ಟೈಲ್ ಕಾಪಿ ಮಾಡಿ ಫೋಟೋಗಳನ್ನ ತೆಗೆಸಿಕೊಂಡಿದ್ದರು.

ತುಳು ಭಾಷೆ ಕಲಿಯಲು ಮುಂದಾದ ಸುದೀಪ್

ಆದರೆ ಈಗ ಅಭಿಮಾನಿಗಳು ಇನ್ನು ಒಂದು ಹೆಜ್ಜೆ ಮುಂದು ಹೋಗಿದ್ದಾರೆ. ಇನ್ನೇನು ಶುರುವಾಗುವ ಪೈಲ್ವಾನ್ ಸಿನಿಮಾದಲ್ಲಿ ಕಿಚ್ಚನನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ವರ್ಕ್ ಔಟ್ ಆರಂಭಿಸಿದ್ದಾರೆ. ಹಾಗಾದರೆ ಯಾರೆಲ್ಲಾ ಕಿಚ್ಚನಂತೆ ವರ್ಕ್ ಔಟ್ ಪ್ರಾರಂಭ ಮಾಡಿದ್ದಾರೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕಿಚ್ಚನ ಸ್ಫೂರ್ತಿಯಿಂದ ಪೈಲ್ವಾನ್

ಕಿಚ್ಚನ ಸ್ಫೂರ್ತಿಯಿಂದ ಪೈಲ್ವಾನ್ ನಂತಾಗಲೂ ಸುದೀಪ್ ಅಭಿಮಾನಿಗಳು ಸಿದ್ದರಾಗಿದ್ದಾರೆ. ಹೌದು ಪೈಲ್ವಾನ್ ಸಿನಿಮಾಗಾಗಿ ಸುದೀಪ್ ಜಿಮ್ ನಲ್ಲಿ ಬೆವರಿಳಿಸಲು ಶುರು ಮಾಡಿದ್ದೇ ಮಾಡಿದ್ದು ಅವರ ಅಭಿಮಾನಿಗಳು ಕೂಡ ಈಗ ಅದೇ ದಾರಿ ಹಿಡಿದಿದ್ದಾರೆ.

ತೂಕ ಇಳಿಸಿಕೊಂಡ ಅಭಿಮಾನಿಗಳು

ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷರಾದ ಜಗದೀಶ್ ಮೊದಲಿಗರು. ಸುದೀಪ್ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ನಾಲ್ಕು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಅಭಿಮಾನಿಗಳು ಶುರು ಮಾಡಿದ್ರು ವರ್ಕ್ ಔಟ್

ಸುದೀಪ್ ಅವರು ಮಾಡುವ ಎಲ್ಲಾ ಕೆಲಸಗಳನ್ನ ಸ್ಫೂರ್ತಿಯನ್ನಾಗಿ ತೆಗೆದುಕೊಳ್ಳುವ ಅಭಿಮಾನಿಗಳು ಈಗ ಜಿಮ್ ನಲ್ಲಿ ದೇಹ ದಂಡಿಸಲು ಮುಂದಾಗಿದ್ದಾರೆ. ಸಾಕಷ್ಟು ಜನರು ಜಿಮ್ ಹೋಗಲು ಆರಂಭಿಸಿದ್ದು ತಮ್ಮ ದೇಹವನ್ನ ಫಿಟ್ ಆಗಿ ಇಟ್ಟುಕೊಳ್ಳಲು ಆರಂಭಿಸಿದ್ದಾರೆ.

ಖುಷಿ ಪಟ್ಟ ಕಿಚ್ಚ

ಕಿಚ್ಚ ಸುದೀಪ್ ಅಭಿಮಾನಿಗಳು ಜಿಮ್ ನಲ್ಲಿ ನೀರಿಳಿಸುತ್ತಿರುವ ವಿಚಾರ ಅವರ ಗಮನಕ್ಕೂ ಬಂದಿದೆ. ಒಳ್ಳೆ ಕೆಲಸಕ್ಕೆ ಎಂದಿಗೂ ಸೈ ಎನ್ನುವ ಸುದೀಪ್ ಇದನ್ನ ಕೇಳಿ ಖುಷಿ ಆಗಿದ್ದಾರಂತೆ. ಇನ್ನು ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ ಪೈಲ್ವಾನ್ ಸಿನಿಮಾ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

ಸುದೀಪ್ ಎರಡನೇ ಟ್ವೀಟ್: ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಚ್ಚ

English summary
Kannada Actor Kiccha Sudeep have started to work out in gym for Kannada Movie 'Phailwan'. Inspired by Kiccha Sudeep, fans have also hit the gym.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X