»   » ಪಾಕೆಟ್ ಮನಿಗಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಈ ನಟಿಯ ಸಂಭಾವನೆ ಈಗ 2.5 ಕೋಟಿ!

ಪಾಕೆಟ್ ಮನಿಗಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಈ ನಟಿಯ ಸಂಭಾವನೆ ಈಗ 2.5 ಕೋಟಿ!

Posted By:
Subscribe to Filmibeat Kannada
Rakul Preet Singh reveals interesting facts about her career

ಇದಕ್ಕೆ ಅದೃಷ್ಟ ಎನ್ನಬೇಕೋ.. ಪರಿಶ್ರಮ ಎನ್ನಬೇಕೋ.. ನೀವೇ ನಿರ್ಧರಿಸಿ. ಆದರೆ ಆ ನಟಿ ಮಾತ್ರ ನೋಡ ನೋಡುತ್ತಲೆ ನಂ.1 ಸ್ಥಾನಕ್ಕೇರಿದರು. ಪಾಕೆಟ್ ಮನಿಗಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ಹುಡುಗಿ ಇಂದು ಟಾಲಿವುಡ್ ಸಿನಿಮಾ ಸಾಮ್ರಾಜ್ಯದ ರಾಣಿಯಾಗಿದ್ದಾರೆ.

ಮುದ್ದು ಮುಖದ ಚೆಲುವೆ ರಕುಲ್ ಪ್ರೀತ್ ಸಿಂಗ್ ಸದ್ಯ ಸೌತ್ ಸಿನಿಮಾರಂಗದ ಸ್ಟಾರ್ ನಟಿ. ಟಾಲಿವುಡ್ ನಲ್ಲಿ ಬಹುಪಾಲು ಎಲ್ಲ ನಟರ ಜೊತೆ ತೆರೆ ಹಂಚಿಕೊಂಡಿರುವ ಖ್ಯಾತಿ ಈ ನಟಿಗಿದೆ. ಸದ್ಯ ಇವರ 'ಸ್ಪೈಡರ್' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ.

'ಸ್ಪೈಡರ್' ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಕುಲ್ ಕನ್ನಡ ಸಿನಿಮಾರಂಗದ ಬಗ್ಗೆ ಮತ್ತು ತಮ್ಮ ಕೆರಿಯರ್ ಬಗ್ಗೆ ಅನೇಕ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

'ಗಿಲ್ಲಿ' ಸಿನಿಮಾ

ಜಗ್ಗೇಶ್ ಪುತ್ರ ಗುರು ನಟನೆಯ 'ಗಿಲ್ಲಿ' ಚಿತ್ರದ ಮೂಲಕ ರಕುಲ್ ಪ್ರೀತ್ ಸಿಂಗ್ ಮೊದಲ ಬಾರಿಗೆ ಪರದೆ ಮೇಲೆ ಕಾಣಿಸಿಕೊಂಡಿದ್ದರು. 2009ರಲ್ಲಿ ರಿಲೀಸ್ ಆದ ಈ ಚಿತ್ರವನ್ನು ರಾಘವ ಲೋಕಿ ನಿರ್ದೇಶನ ಮಾಡಿದ್ದರು.

ಪಿಯುಸಿ ಓದುತ್ತಿದ್ದರು

'ಗಿಲ್ಲಿ' ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದಾಗ ಅಂತರ್ಜಾಲದ ಮೂಲಕ ರಕುಲ್ ಅವರನ್ನು ಚಿತ್ರತಂಡ ಸಂಪರ್ಕ ಮಾಡಿದೆ. ಆಗಿನ್ನೂ ದೆಹಲಿಯ ಕಾಲೇಜಿನಲ್ಲಿ ರಕುಲ್ ಪಿಯುಸಿ ಓದುತ್ತಿದ್ದರಂತೆ.

ಪಾಕೆಟ್ ಮನಿಗಾಗಿ..

''ಆಗ ನನಗೆ 17 ವರ್ಷ. ಸಿನಿಮಾದಲ್ಲಿ ನಟಿಸಿದರೆ ಹಣ ಸಿಗುತ್ತದೆ ಎಂದು ಮೊದಲ ಚಿತ್ರಕ್ಕೆ ಸಹಿ ಹಾಕಿದೆ. ಪಾಕೆಟ್ ಮನಿಗೆ ಅಂತ ಸಿನಿಮಾರಂಗಕ್ಕೆ ಕಾಲಿಟ್ಟೆ. ಆದರೆ ಈಗ ಇದು ನನ್ನ ಜಗತ್ತು ಮತ್ತು ನಾನು ಇಲ್ಲಿನವಳೇ ಎನ್ನುವುದು ನನಗೆ ತಿಳಿದಿದೆ'' ಎಂದು ರಕುಲ್ ಹಳೇ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಮಾಡಲಿಂಗ್ ನಲ್ಲಿ ಮಿಂಚಿದ್ದರು

''ಕನ್ನಡ ಚಿತ್ರದಿಂದ ನಾನು ನನ್ನ ವೃತ್ತಿ ಬದುಕನ್ನು ಪ್ರಾರಂಭ ಮಾಡಿದೆ ಎನ್ನುವುದನ್ನು ನಾನು ಮರೆಯಲಾರೆ. 'ಗಿಲ್ಲಿ' ನನ್ನ ಮೊದಲ ಸಿನಿಮಾ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ನನಗೆ ಈ ಚಿತ್ರದ ಆಫರ್ ಬಂದಿತ್ತು'' - ರಕುಲ್ ಪ್ರೀತ್ ಸಿಂಗ್, ನಟಿ.

ಕನ್ನಡದ 'ಗಿಲ್ಲಿ' ಬೆಡಗಿಯ ಬ್ಯಾಗ್ ನಲ್ಲಿ ಬುಲೆಟ್ ಪತ್ತೆ

ಸ್ಟಾರ್ ನಟಿ

ಈ ರೀತಿ ಆಕಸ್ಮಿಕವಾಗಿ ಬಣ್ಣ ಹಚ್ಚಿದ ರಕುಲ್ ಇಂದು ಸೌತ್ ಸಿನಿ ದುನಿಯಾದ ಟಾಪ್ ನಟಿಯಲ್ಲಿ ಒಬ್ಬರು. ತೆಲುಗಿನಲ್ಲಿ ಜೂನಿಯರ್ ಎನ್.ಟಿ.ಆರ್, ಮಹೇಶ್ ಬಾಬು, ರವಿತೇಜ, ಅಲ್ಲು ಅರ್ಜುನ್ ಸೇರಿದಂತೆ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ರಕುಲ್ ಮಿಂಚಿದ್ದಾರೆ.

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು

2.5 ಕೋಟಿ ಸಂಭಾವನೆ

ಆಗ ಪಾಕೆಟ್ ಮನಿಗಾಗಿ ಸಿನಿಮಾ ಮಾಡಿದ್ದ ರಕುಲ್ ಸಂಭಾವನೆ ಈಗ ಒಂದು ಚಿತ್ರಕ್ಕೆ 2.5 ಕೋಟಿ ಆಗಿದೆ. ತೆಲುಗು ನಟಿಯರಾದ ಅನುಷ್ಕಾ ಶೆಟ್ಟಿ, ಸಮಂತಾ, ಕಾಜಲ್, ನಯನ ತಾರ ಸಂಭಾವನೆಗೆ ರಕುಲ್ ಪೈಪೋಟಿ ನೀಡುತ್ತಿದ್ದಾರೆ.

English summary
Tollywood actress Rakul Preet Singh reveals interesting facts about her career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X