For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮಗಳ ಮೇಲೆ ಅಸಮಾಧಾನ: ಕೋರ್ಟ್ ಮೆಟ್ಟಿಲೇರಿದ ಶರ್ಮಿಳಾ ಮಾಂಡ್ರೆ

  |

  ನಟಿ ಶರ್ಮಿಳಾ ಮಾಂಡ್ರೆ ಕೆಲವು ಮಾಧ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಮಾಧ್ಯಮಗಳು ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೆಸರನ್ನು ವಿನಾಕಾರಣ ಎಳೆಯುತ್ತಿವೆ ಎಂದು ಶರ್ಮಿಳಾ ಬೇಸರ ಹೊರಹಾಕಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಹೆಸರು ಸಹ ಪ್ರಕರಣದಲ್ಲಿ ಕೇಳಿಬಂದಿದೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಇದು ಶರ್ಮಿಳಾ ಗೆ ಬೇಸರ ತರಿಸಿದೆ.

  ಕಾರು ಅಪಘಾತ ಪ್ರಕರಣ: ನಟಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್ಕಾರು ಅಪಘಾತ ಪ್ರಕರಣ: ನಟಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್

  ತಮ್ಮ ಹೆಸರನ್ನು ಡ್ರಗ್ಸ್ ಪ್ರಕರಣಕ್ಕೆ ಲಿಂಕ್ ಮಾಡುತ್ತಿರುವುದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಶರ್ಮಿಳಾ ಮಾಂಡ್ರೆ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ, ಪ್ರಕಟಿಸದಂತೆ ತಡೆ ತಂದಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ಹೆಸರು ಲಿಂಕ್ ಮಾಡಲಾಗುತ್ತಿದೆ: ಶರ್ಮಿಳಾ ಅಸಮಾಧಾನ

  ಡ್ರಗ್ಸ್ ಪ್ರಕರಣದಲ್ಲಿ ಹೆಸರು ಲಿಂಕ್ ಮಾಡಲಾಗುತ್ತಿದೆ: ಶರ್ಮಿಳಾ ಅಸಮಾಧಾನ

  ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶರ್ಮಿಳಾ ಮಾಂಡ್ರೆ, 'ಏಪ್ರಿಲ್ 4 ರಂದು ನಡೆದಿದ್ದ ಅಪಘಾತವನ್ನು ಡ್ರಗ್ಸ್ ಪ್ರಕರಣದೊಂದಿಗೆ ಕೆಲವು ಮಾಧ್ಯಮಗಳು ಲಿಂಕ್ ಮಾಡಿ, ಸುಳ್ಳು ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಇದು ಅತ್ಯಂತ ಬೇಸರ ತರಿಸಿದೆ. ' ಎಂದಿದ್ದಾರೆ.

  ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವಂತಿಲ್ಲ: ಶರ್ಮಿಳಾ

  ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವಂತಿಲ್ಲ: ಶರ್ಮಿಳಾ

  'ನಾನು ಮತ್ತು ನನ್ನ ಕುಟುಂಬ ಕೊರೊನಾ ದಿಂದ ಗುಣಮುಖರಾಗಲು ಪ್ರಯತ್ನಿಸುತ್ತಿರುವ ಈ ಕಠಿಣ ಸಮಯದಲ್ಲಿ ಸುಳ್ಳು ಸುದ್ದಿಗಳು ಘಾಸಿ ಉಂಟುಮಾಡಿವೆ. ಈ ಹಿಂದೆ ನಾನು ಮಾಡಿದ್ದ ಮನವಿ ವ್ಯರ್ಥವಾದ ಕಾರಣ ಈಗ ಸಿಟಿ ಸಿವಿಲ್ ಕೋರ್ಟ್‌ ಮೂಲಕ ನನ್ನ ವಿರುದ್ಧ ಯಾವುದೇ ಸುಳ್ಳು ಸುದ್ದಿ ಪ್ರಕಟಿಸದಂತೆ ತಡೆ ತಂದಿದ್ದೇನೆ' ಎಂದಿದ್ದಾರೆ.

  ಆಘಾತ, ನೋವುಗಳ ನಡುವೆ ನನ್ನನ್ನು ಖಿನ್ನತೆ ಆವರಿಸಿತ್ತು: ಶರ್ಮಿಳಾ ಮಾಂಡ್ರೆಆಘಾತ, ನೋವುಗಳ ನಡುವೆ ನನ್ನನ್ನು ಖಿನ್ನತೆ ಆವರಿಸಿತ್ತು: ಶರ್ಮಿಳಾ ಮಾಂಡ್ರೆ

  ಘನ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ: ಶರ್ಮಿಳಾ

  ಘನ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ: ಶರ್ಮಿಳಾ

  'ಘನ ನ್ಯಾಯಾಲವು ಮಧ್ಯಂತರ ಆದೇಶ ಹೊರಡಿಸಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವುದು, ಏಪ್ರಿಲ್ 4 ರಂದು ನಡೆದಿದ್ದ ಅಪಘಾತದ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸದಂತೆ ತಡೆ ನೀಡಿದೆ' ಎಂದು ಟ್ವೀಟ್ ಮಾಡಿದ್ದಾರೆ ಶರ್ಮಿಳಾ ಮಾಂಡ್ರೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ವಕೀಲರಿಗೆ ಧನ್ಯವಾದ ಅರ್ಪಿಸಿದ ಶರ್ಮಿಳಾ

  ವಕೀಲರಿಗೆ ಧನ್ಯವಾದ ಅರ್ಪಿಸಿದ ಶರ್ಮಿಳಾ

  ತಮಗೆ ಕಾನೂನು ಸಹಾಯ ನೀಡಿದ ವಕೀಲಿಕೆ ಸಂಸ್ಥೆಯಾದ ಇಂಡಸ್ ಲಾ ದ ಮುಖ್ಯಸ್ಥ ಲೋಕೇಶ್ ನಿದುಮೂರಿ, ಹಿರಿಯ ನ್ಯಾಯವಾದಿ ಉದಯ್ ಹೊಳ್ಳ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಶರ್ಮಿಳಾ. ತಮ್ಮ ವಿರುದ್ಧ ಯಾವುದೇ ಸುಳ್ಳು ಸುದ್ದಿ ಪ್ರಕಟಿಸದಂತೆ ಮನವಿ ಮಾಡಿದ್ದಾರೆ.

  ಆ ರಾತ್ರಿ ವಾಸ್ತವವಾಗಿ ನಡೆದಿದ್ದು ಏನು? ನಟಿ ಶರ್ಮಿಳಾ ಮಾಂಡ್ರೆ ಹೇಳಿದ ಸಂಗತಿ...ಆ ರಾತ್ರಿ ವಾಸ್ತವವಾಗಿ ನಡೆದಿದ್ದು ಏನು? ನಟಿ ಶರ್ಮಿಳಾ ಮಾಂಡ್ರೆ ಹೇಳಿದ ಸಂಗತಿ...

  English summary
  Sharmiela Mandre upset about some media linking her name in drug case and publishing false news about car accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X