For Quick Alerts
  ALLOW NOTIFICATIONS  
  For Daily Alerts

  ಕೊನೆ ಕ್ಷಣದಲ್ಲಿ 'ರೇಮೊ' ಟೈಟಲ್ ತೆಗೆದು 'ರಮ್ಯಾ' ಅಂತಿಟ್ರಾ ಪವನ್ ಒಡೆಯರ್: ವೈರಲ್ ವಿಡಿಯೋ ಗುಟ್ಟೇನು?

  |

  ಪವನ್ ಒಡೆಯರ್ ನಿರ್ದೇಶನದ ಪಕ್ಕಾ ಮ್ಯೂಸಿಕಲ್ ಸಿನಿಮಾ 'ರೇಮೊ'. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟಿಸಿದ್ದಾರೆ. ಈ ಸಿನಿಮಾ ನಾಳೆ (ನವೆಂಬರ್ 25) ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

  ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಪವನ್ ಒಡೆಯರ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪವನ್ ಒಡೆಯರ್ ನಾಯಕನಿಗಾಗಿ 'ರೇಮೊ' ಟೈಟಲ್ ಬದಲಾವಣೆ ಮಾಡಲು ಮುಂದಾಗಿದ್ದಾರೆ ಅನ್ನೋದಿದೆ. ಅಸಲಿಗೆ ಈ ವಿಡಿಯೋ ಮ್ಯಾಟರ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ರೇವಂತ್- ಮೋಹನಾ ಪ್ರೀತಿ ಹಾಡು ಇತ್ಯಾದಿ: 'ಗೂಗ್ಲಿ' ಫ್ಲೇವರ್ 'ರೇಮೊ' ಟ್ರೈಲರ್ ಸೂಪರ್!ರೇವಂತ್- ಮೋಹನಾ ಪ್ರೀತಿ ಹಾಡು ಇತ್ಯಾದಿ: 'ಗೂಗ್ಲಿ' ಫ್ಲೇವರ್ 'ರೇಮೊ' ಟ್ರೈಲರ್ ಸೂಪರ್!

  'ರೇಮೊ' ಮ್ಯೂಸಿಕಲ್ ಕ್ರೇಜ್

  'ರೇಮೊ' ಮ್ಯೂಸಿಕಲ್ ಕ್ರೇಜ್

  'ರೇಮೊ' ಸಿನಿಮಾದಲ್ಲಿ ಇಶಾನ್ ಹಾಗೂ ಆಶಿಕಾ ರಂಗನಾಥ್ ಜೋಡಿ ಕ್ಯೂಟ್ ಆಗಿ ಕಾಣಿಸುತ್ತಿದೆ. ಅಲ್ಲದೆ ಸಿನಿಮಾ ಹಾಡುಗಳು ಹಾಗೂ ಟ್ರೈಲರ್ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿವೆ. ಸದ್ಯ ಸಿನಿಪ್ರಿಯರಲ್ಲಿ 'ರೇಮೊ' ಸಿನಿಮಾದ ಟೈಟಲ್ ರಿಜಿಸ್ಟರ್ ಆಗಿರುವಾಗಲೇ ಹೊಸದೊಂದು ಟೈಟಲ್ ಇಡುವ ಆಲೋಚನೆಯನ್ನು ನಿರ್ದೇಶಕ ಪವನ್ ಒಡೆಯರ್ ಮಾಡಿರೋ ವಿಷಯ ವೈರಲ್ ಆಗುತ್ತಿದೆ. ಅಸಲಿಗೆ ಪ್ರೇಕ್ಷಕರನ್ನು ದಂಗಾಗಿಸಿದ ವಿಡಿಯೋದ ಅಸಲಿ ಮ್ಯಾಟರ್ ಇಲ್ಲಿದೆ.

  ಬಿಟೌನ್‌ನಲ್ಲಿ ಮೊದಲ ಹೆಜ್ಜೆ: ಖುಷಿ ಹಂಚಿಕೊಂಡ ಪವನ್‌ ಒಡೆಯರ್‌ಬಿಟೌನ್‌ನಲ್ಲಿ ಮೊದಲ ಹೆಜ್ಜೆ: ಖುಷಿ ಹಂಚಿಕೊಂಡ ಪವನ್‌ ಒಡೆಯರ್‌

  'ರೇಮೊ' ಟೈಟಲ್ ರಮ್ಯಾ ಅಂತಾಗುತ್ತಿತಾ?

  'ರೇಮೊ' ಟೈಟಲ್ ರಮ್ಯಾ ಅಂತಾಗುತ್ತಿತಾ?

  ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿತ್ತು. ಪವನ್ ಒಡೆಯರ್ ಹಾಗೂ ನಾಯಕ ಇಶಾನ್ ಮಾತಾಡಿರೋ ವಿಡಿಯೋ ಅದು. ಇದರಲ್ಲಿ, ಪವನ್ ಒಡೆಯರ್, ರಮ್ಯಾ ಅಭಿನಯಿಸಲು ಅವಕಾಶ ಸಿಕ್ಕರೆ ಏನು ಮಾಡುತ್ತೀರಾ? ಎಂದು ಕೇಳುತ್ತಾರೆ. ಆಗ ಇಶಾನ್ ಜೋಷ್‌ನಲ್ಲಿ ನಟಿಸಲು ಓಕೆ ಎನ್ನುತ್ತಾರೆ. ಆಗ ಅವರನ್ನು ಭೇಟಿ ಮಾಡುವುದು ಹೇಗೆ ಎಂದಾಗ, ಪವನ್ ಅವರಿಗೋಸ್ಕರ್ ಸಿನಿಮಾ ಟೈಟಲ್ 'ರೇಮೊ' ಬದಲು 'ರಮ್ಯಾ' ಬದಲಾಯಿಸೋಣ ಎನ್ನುತ್ತಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಇದು ರಿಯಲ್ ವೀಡಿಯೋ ಅಲ್ಲ

  ಇದು ರಿಯಲ್ ವೀಡಿಯೋ ಅಲ್ಲ

  ಸಿನಿಮಾ ಮಂದಿ ಪ್ರಚಾರಕ್ಕೆ ಅಂತ ಏನೇನೋ ಗಿಮಿಕ್ಕುಗಳನ್ನು ಮಾಡುತ್ತಲೇ ಇರುತ್ತಾರೆ. ಅದೇ ಸಿನಿಮಾ ನಾಳೆ (ನವೆಂಬರ್ 25) ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ವಿಡಿಯೋವನ್ನು ವೈರಲ್ ಮಾಡಲಾಗಿದೆ. ಅಸಲಿಗೆ ಈ ವಿಡಿಯೋದಲ್ಲಿ ಇರುವುದೆಲ್ಲ ನಿಜವಲ್ಲ. ಇದು ಸಿನಿಮಾ ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಅಷ್ಟೇ. ಈ ವಿಡಿಯೋ ನೋಡಿ ಸಿನಿಪ್ರಿಯರ ಒಂದು ಕ್ಷಣ ಶಾಕ್ ಆಗಿದ್ದರು.

  ಗೋವಾದಲ್ಲಿ 'ರೇಮೊ' ಪ್ರೀಮಿಯರ್

  ಗೋವಾದಲ್ಲಿ 'ರೇಮೊ' ಪ್ರೀಮಿಯರ್

  ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ಜೋಡಿಯ 'ರೆಮೋ' ನಾಳೆ (ನವೆಂಬರ್ 25) ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಇದೇ ವೇಳೆ ನಾಯಕ ನಟ ಇಶಾನ್, ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಗೋವಾಗೆ ತೆರಳಿದ್ದಾರೆ. ಪ್ರತಿಷ್ಠಿತ 53ನೇ 'ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ' ಗೋವಾದಲ್ಲಿ ನಡೆಯುತ್ತಿದೆ. ಬೇರೆ ಬೇರೆ ದೇಶದ ವಿವಿಧ ಕೆಟಗರಿಯ ಆಯ್ದ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಪ್ರಪಂಚದ ಬೇರೆ ಬೇರೆ ಭಾಷೆಯ ಹೆಸರಾಂತ ನಿರ್ದೇಶಕರು, ತಂತ್ರಜ್ಞರು, ಬರಹಗಾರರು ಈ ಫಿಲ್ಮಂ ಫೆಸ್ಟ್ ನಲ್ಲಿ ಭಾಗಿಯಾಗಿರುತ್ತಾರೆ. ಇಂತಹ ದೊಡ್ಡ ವೇದಿಕೆಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ರೆಮೋ' ಸಿನಿಮಾ ಸೆಲೆಕ್ಟ್ ಆಗಿದ್ದು ಇಂದು ಸಂಜೆ ಸ್ಕ್ರೀನಿಂಗ್ ಆಗುತ್ತಿದೆ.

  English summary
  Is Director Pavan Wadeyar Tried To Change Raymo Title To Ramya Video Goes Viral, Know More.
  Thursday, November 24, 2022, 22:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X