»   » ನಂಗ್ಯಾಕೋ ಡೌಟು! ಅಂಬಿ ಎಂ.ಪಿನಾ? ಎಂ.ಎಲ್.ಎನಾ?

ನಂಗ್ಯಾಕೋ ಡೌಟು! ಅಂಬಿ ಎಂ.ಪಿನಾ? ಎಂ.ಎಲ್.ಎನಾ?

By: ಹರಾ
Subscribe to Filmibeat Kannada

ಅಂಬರೀಶ್ ಯಾರು..? ಈ ಪ್ರಶ್ನೆಗೆ ಸಿನಿ ಪ್ರೇಮಿಗಳು ಥಟ್ ಅಂತ ಕೊಡುವ ಉತ್ತರ 'ರೆಬೆಲ್ ಸ್ಟಾರ್' ಅಂತ. ಇನ್ನೂ ಕೆಲವರು 'ಕನ್ನಡದ ಕರ್ಣ', 'ಮಂಡ್ಯದ ಗಂಡು', 'ಮಂಡ್ಯದ ಚಂದಮಾಮ' ಅಂತೆಲ್ಲಾ ಪ್ರೀತಿಯಿಂದ ಕರೆಯುತ್ತಾರೆ.

ಅಂಬರೀಶ್ ಬರೀ ನಟ ಮಾತ್ರ ಅಲ್ಲ, ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ರಾಜಕೀಯ ರಂಗದಲ್ಲೂ ಅಂಬಿ ಫೇಮಸ್. ಸದ್ಯಕ್ಕೆ ಅಂಬರೀಶ್ ಕರ್ನಾಟಕ ರಾಜ್ಯದ 'ವಸತಿ ಸಚಿವ' ಅಂತ ನಿಮ್ಗೆ ಗೊತ್ತಲ್ವಾ.

Is Rebel Star Ambareesh MLA or MP?

ಹೀಗಂತ ಅಂದುಕೊಂಡು ಯಾರಾದರೂ ಜೆ.ಪಿ.ನಗರದಲ್ಲಿರುವ ಅಂಬಿ ನಿವಾಸಕ್ಕೆ ಹೋದರೆ, ಒಮ್ಮೆ ಕನ್ಫ್ಯೂಸ್ ಆಗುವುದು ಸಹಜ. ಯಾಕಂದ್ರೆ, ಅಂಬಿ ಮನೆಯ ಗೇಟ್ ನಲ್ಲಿ ಹಾಕಿರುವ ನಾಮ ಫಲಕದಲ್ಲಿ 'ಲೋಕಸಭಾ ಸದಸ್ಯರು' ಅಂತಿದೆ.

1998 ರಿಂದ 2008 ರವರೆಗೂ ಲೋಕಸಭಾ ಸದ್ಯಸರಾಗಿದ್ದ ಅಂಬರೀಶ್, ಕಾವೇರಿ ವಿವಾದದಿಂದ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಹಾಗೆ, ಅಂಬರೀಶ್ ಎಂ.ಪಿ.ಗದ್ದುಗೆಯಿಂದ ಕೆಳಗಿಳಿದು ಸುಮಾರು 6 ವರ್ಷಗಳೇ ಉರುಳಿವೆ.

Is Rebel Star Ambareesh MLA or MP?2

ಆದರೂ, ಅವರ ಮನೆ ಮುಂದೆ ಈಗಲೂ 'ಲೋಕಸಭಾ ಸದಸ್ಯರು' ಅಂತ ಬೋರ್ಡ್ ಇದೆ. ರಾಜಕೀಯ ಒತ್ತಡದ ನಡುವೆ 'ವಿಧಾನಸಭಾ ಸದಸ್ಯರು', 'ಕರ್ನಾಟಕ ರಾಜ್ಯದ ವಸತಿ ಸಚಿವರು' ಅನ್ನುವ ನಾಮಫಲಕವನ್ನ ಅಂಬಿ ಹಾಕಿಸುವುದನ್ನೇ ಮರೆತು ಬಿಟ್ಟಿರಬೇಕು.

ಹಾಗೆ ನೋಡಿದರೆ, 'ಲೋಕಸಭಾ ಸದ್ಯಸರು' ಅಂತ ಅಚ್ಚಾಗಿರುವ ನಾಮ ಫಲಕ ಕಲ್ಲಿನದ್ದು. ಅದು ಸಿಮೆಂಟಿನಲ್ಲಿ ಭದ್ರವಾಗಿ ಅಚ್ಚಾಗಿರುವ ಕಾರಣ ಅದಕ್ಕೆ ರಿಪೇರಿ ಕೆಲಸ ತುಂಬಾ ಇದೆ. ಇದಕ್ಕೋ ಏನೋ, ''ಯಾರು ನೋಡ್ತಾರೆ'' ಅಂತ ಅಂಬಿ, ತಮ್ಮ ಸ್ಟೈಲ್ ನಲ್ಲಿ ಸುಮ್ಮನಾಗಿರಬೇಕು.

ಆದ್ರೆ, ಅಂಬಿ ಮನೆಗೆ ಎಳ್ಳು ಬೀರೋಕೆ ಅಂತ ಹೋದ ಹೆಣ್ಮಕ್ಕಳು ಮಾತ್ರ ಈ ಬೋರ್ಡ್ ನ ಕಂಡು, ತಲೆ ಕೆರೆದುಕೊಂಡು, ಕಕ್ಕಾಬಿಕ್ಕಿಯಾಗಿದ್ದಾರೆ. ಅಂಬಿ ಎಂ.ಪಿ.ನಾ...ಇಲ್ಲಾ ಎಂ.ಎಲ್.ಎ ನಾ..? ಅಂತ ಗೆಳತಿಯರಿಗೆ ಫೋನ್ ಮಾಡಿ ಡೌಟ್ ಕ್ಲಿಯರ್ ಮಾಡಿಕೊಂಡಿದ್ದಾರೆ. ಹೀಗೆ ಇನ್ನೊಬ್ಬರಿಗೆ ಇಂತಹ ಕನ್ಫ್ಯೂಷನ್ ಆಗದಿರಲಿ ಅಂತ ನಾವು ವಿವರ ನೀಡಿ ವರದಿ ಮಾಡಿದ್ದೀವಿ ಅಷ್ಟೆ. (ಫಿಲ್ಮಿಬೀಟ್ ಕನ್ನಡ)

Read more about: ambareesh, ಅಂಬರೀಶ್
English summary
At present, Rebel Star Ambareesh is MLA of Mandya District and Minister in Karnataka Government in the Ministry of Housing. But the Name Plate in front of his house mentions 'Member of Parliament'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada