twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದಲ್ಲಿ 'ಕೆಜಿಎಫ್ 2' ಹಿಂದಿಕ್ಕಲು 'ಕಾಂತಾರ'ಗೆ ಬೇಕಿರೋದು ₹2.10 ಕೋಟಿ ಅಷ್ಟೇನಾ? ಏನಿದೆ ರಿಪೋರ್ಟ್?

    |

    'ಕಾಂತಾರ' ವಿಶ್ವದಾದ್ಯಂತ ಈ ಮಟ್ಟಿಗೆ ಸೌಂಡ್ ಮಾಡಬಹುದು ಅಂತ ಯಾರೂ ಊಹಿಸಿರಲಿಲ್ಲ. ಆ ಮಟ್ಟಿಗೆ ರಿಷಬ್ ಶೆಟ್ಟಿ ಸಿನಿಮಾ ಸದ್ದು ಮಾಡಿದೆ. ಸೆಪ್ಟೆಂಬರ್ 30 ರಂದು ತೆರೆಕಂಡಿದ್ದ ಈ ಸಿನಿಮಾದ ಆರ್ಭಟ ಥಿಯೇಟರ್‌ನಲ್ಲಿ ಇನ್ನೂ ನಿಂತಿಲ್ಲ.

    ವೀಕೆಂಡ್‌ನಲ್ಲಿ ಕರ್ನಾಟಕದಲ್ಲಿ 'ಕಾಂತಾರ' ಕೆಲಕ್ಷನ್ ಸಖತ್ತಾಗಿದೆ. ಅದೆಷ್ಟೇ ಹೊಸ ಸಿನಿಮಾಗಳು ಬಂದರೂ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಜಗ್ಗೋ ಮಾತೇ ಇಲ್ಲ. ಹೀಗಾಗಿ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಕಾಂತಾರ ಎಷ್ಟು ಗಳಿಸಿರಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ.

    ಸಪ್ತಮಿ ಗೌಡಗೆ ಫುಲ್ ಡಿಮ್ಯಾಂಡ್: 'ಕಾಳಿ' ಬಳಿಕ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್?ಸಪ್ತಮಿ ಗೌಡಗೆ ಫುಲ್ ಡಿಮ್ಯಾಂಡ್: 'ಕಾಳಿ' ಬಳಿಕ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್?

    ಇದೂವರೆಗೂ 'ಕಾಂತಾರ' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಎರಡನೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿದ್ದು,'ಕೆಜಿಎಫ್ 2' ಮೊದಲ ಸ್ಥಾನದಲ್ಲಿದೆ. ಆದ್ರೀಗ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಅನ್ನು ಹಿಂದಿಕ್ಕಿ ನಂ 1 ಸ್ಥಾನಕ್ಕೆ ಏರಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಹಾಗಿದ್ರೆ, ಟ್ರೇಡ್ ಅನಲಿಸ್ಟ್‌ಗಳ ಆ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

    'ಕೆಜಿಎಫ್ 2' ಹಿಂದಿಕ್ಕುತ್ತಾ 'ಕಾಂತಾರ'

    'ಕೆಜಿಎಫ್ 2' ಹಿಂದಿಕ್ಕುತ್ತಾ 'ಕಾಂತಾರ'

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ' ದೇಶದೆಲ್ಲೆಡೆ ಸದ್ದು ಮಾಡುತ್ತಿರೋದು ಹೊಸ ವಿಷಯವೇನಲ್ಲ. 'ಕಾಂತಾರ' ಸಿನಿಮಾದ ಹಿಂದಿ ಹಾಗೂ ತೆಲುಗು ಅವತರಣಿಕೆಯ ಅಬ್ಬರ ಇನ್ನೂ ನಿಂತಿಲ್ಲ. ಇನ್ನು ಕರ್ನಾಟಕದಲ್ಲೂ ವೀಕೆಂಡ್‌ನಲ್ಲಿ ಕಲೆಕ್ಷನ್ ಜೋರಾಗೇ ಆಗುತ್ತಿದೆ. ಈ ಮಧ್ಯೆ ಈ ಸಿನಿಮಾ 'ಕೆಜಿಎಫ್ 2' ಕಲೆಕ್ಷನ್ ಅನ್ನು ಕೆಲವೇ ದಿನಗಳಲ್ಲಿ ಹಿಂದಿಕ್ಕಲಿದೆ ಅನ್ನೋ ಚರ್ಚೆ ಶುರುವಾಗಿದೆ. ಹಾಗೇನಾದರೂ ಆದರೆ, 'ಕಾಂತಾರ' ಕರ್ನಾಟಕದಲ್ಲಿ ಅತೀ ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ನಂ 1 ಸ್ಥಾನಕ್ಕೇರಲಿದೆ.

    ಎರಡೂ ಸಿನಿಮಾ ಕಲೆಕ್ಷನ್ ಎಷ್ಟು?

    ಎರಡೂ ಸಿನಿಮಾ ಕಲೆಕ್ಷನ್ ಎಷ್ಟು?

    ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಇನ್ನೂ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ಗಳಲ್ಲಿ ಈ ಸಿನಿಮಾದ ಶೇ. 60 ರಿಂದ 70ರಷ್ಟು ಕಲೆಕ್ಷನ್ ಮಾಡುತ್ತಿದೆ. ಯಶ್ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಹವಾ ಸೃಷ್ಟಿಸಿತ್ತು. ಅದರಲ್ಲೂ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹಿಂದೆಷ್ಟು ಗಳಿಸಿದಷ್ಟು ಕಲೆಕ್ಷನ್ ಮಾಡಿತ್ತು. ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಕರ್ನಾಟಕದಲ್ಲಿ 'ಕೆಜಿಎಫ್ 2' ಲೈಫ್ ಟೈಮ್ ಕಲೆಕ್ಷನ್ 155 ಕೋಟಿ ರೂಪಾಯಿ. ಸದ್ಯ 'ಕಾಂತಾರ' ಕರ್ನಾಟಕದಲ್ಲಿ 152.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಾಗುತ್ತಿದೆ. ಹೀಗಾಗಿ ಇನ್ನು 2.10 ಕೋಟಿ ರೂಪಾಯಿ ಗಳಿಸಿದರೆ, ಕರ್ನಾಟಕದಲ್ಲಿ 'ಕೆಜಿಎಫ್ 2' ಮಾಡಿದ್ದ ದಾಖಲೆಯನ್ನು ಉಡಾಯಿಸೋದು ಗ್ಯಾರಂಟಿ.

    'ಕಾಂತಾರ'1 ಕೋಟಿ ಜನರಿಂದ ವೀಕ್ಷಣೆ

    'ಕಾಂತಾರ'1 ಕೋಟಿ ಜನರಿಂದ ವೀಕ್ಷಣೆ

    ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ' ಸಿನಿಮಾವನ್ನು ಸುಮಾರು 1 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಈ ಲೆಕ್ಕವನ್ನು ಅಧಿಕೃತವಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಸಿನಿಮಾ ನೋಡಿದವರ ಸಂಖ್ಯೆಯ ವಿಚಾರದಲ್ಲಿ 'ಕಾಂತಾರ' ಈಗಾಗಲೇ 'ಕೆಜಿಎಫ್ 2' ಹಾಗೂ 'ಕೆಜಿಎಫ್ 1' ಸಿನಿಮಾವನ್ನೇ ಹಿಂದಿಕ್ಕಿದೆ. ಇನ್ನು ಬಾಕ್ಸಾಫೀಸ್‌ನಲ್ಲೂ ಹಿಂದಕ್ಕೆ ಹಾಕಲು ಹೆಚ್ಚು ದಿನ ಹಿಡಿಯೋದಿಲ್ಲ ಅನ್ನೋ ಮಾತು ಟ್ರೇಡ್ ಎಕ್ಸ್‌ಪರ್ಟ್ಸ್ ಮಾತಾಡುತ್ತಿದ್ದಾರೆ.

    'ಕೆಜಿಎಫ್ 2' ವಿಶ್ವ ದಾಖಲೆ ಹಿಂದಿಕ್ಕಲು ಅಸಾಧ್ಯ!

    'ಕೆಜಿಎಫ್ 2' ವಿಶ್ವ ದಾಖಲೆ ಹಿಂದಿಕ್ಕಲು ಅಸಾಧ್ಯ!

    'ಕಾಂತಾರ' ಕರ್ನಾಟಕದಲ್ಲಿ 'ಕೆಜಿಎಫ್ 2' ದಾಖಲೆಯನ್ನು ಹಿಂದಿಕ್ಕಿದ್ರೂ, ವಿಶ್ವ ಮಟ್ಟದಲ್ಲಿ 'ಕೆಜಿಎಫ್ 2' ಗಳಿಸಿದ ಗಳಿಕೆಯನ್ನು ಹಿಂದಿಕ್ಕಲು ಸಾಧ್ಯವಿಲ್ಲ. 'ಕೆಜಿಎಫ್ 2' ವಿಶ್ವದಾದ್ಯಂತ 1250 ಕೋಟಿ ರೂ. ಗಳಿಸಿದ್ರೆ, ಇದರಲ್ಲಿ ಹಿಂದಿ ಬೆಲ್ಟ್‌ ಕಲೆಕ್ಷನ್ 450 ಕೋಟಿ ರೂ. ಇದೆ. ಆದರೆ, 'ಕಾಂತಾರ' ಹಿಂದಿ ಬೆಲ್ಟ್‌ನಲ್ಲಿ 71 ಕೋಟಿ ರೂ.ಗಳಿಸಿದೆ. ಹೀಗಾಗಿ ಕರ್ನಾಟಕದಲ್ಲಿ 'ಕೆಜಿಎಫ್ 2' ದಾಖಲೆಯನ್ನು ಉಡೀಸ್ ಮಾಡಬಹುದು.

    English summary
    Is Rishab Shetty's Kantara Inches Away From Beating KGF 2 In Karnataka Box Office, Know More.
    Sunday, November 13, 2022, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X