ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ: ಗಮನಿಸಬೇಕಾದ ಅಂಶಗಳು

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಐಟಿ ಅಧಿಕಾರಿಗಳು ರಶ್ಮಿಕಾ ಅವರ ವಿರಾಜಪೇಟೆ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 10ಕ್ಕು ಹೆಚ್ಚು ಅಧಿಕಾರಿಗಳು ಮನೆ ಮೇಲೆ ರೈಡ್ ಮಾಡಿದ್ದು, ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ.

ಮುಂಜಾನೆಯಿಂದ ಐಟಿ ಅಧಿಕಾರಿಗಳು ಮನೆ ಶೋಧ ಮಾಡುತ್ತಿದ್ದು, ರಶ್ಮಿಕಾ ಮನೆಯಲ್ಲಿರುವ ದಾಖಲೆಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮಗಳು ರಶ್ಮಿಕಾ ಖ್ಯಾತ ನಟಿಯಾಗಿ ಗುರಿತಿಸಿಕೊಂಡಿರುವುದಲ್ಲದೆ, ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿಸಿದಲ್ಲದೆ, ಆದಾಯ ಕೂಡ ದುಪ್ಪಟ್ಟಾಗಿದೆ.

ಬಿಗ್ ಬಜೆಟ್ ಸಿನಿಮಾಗಳಲ್ಲಿ ರಶ್ಮಿಕಾ

ಬಿಗ್ ಬಜೆಟ್ ಸಿನಿಮಾಗಳಲ್ಲಿ ರಶ್ಮಿಕಾ

ರಶ್ಮಿಕಾ ಮಂದಣ್ಣ ಸದ್ಯ ಬಿಗ್ ಬಜೆಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಸ್ಟಾರ್ ನಟರ ಜೊತೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳು ಅಂದ್ಮೇಲೆ ರಶ್ಮಿಕಾ ಸಂಭಾವನೆ ಕೂಡ ಅಷ್ಟೆ ಇರುತ್ತೆ.

ಕೋಟಿ ದಾಟಿದ ರಶ್ಮಿಕಾ ಸಂಭಾವನೆ

ಕೋಟಿ ದಾಟಿದ ರಶ್ಮಿಕಾ ಸಂಭಾವನೆ

ರಶ್ಮಿಕಾ ಸದ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮಹೇಶ್ ಬಾಬು ಜೊತೆ ಸರಿಲೇರು ನೀಕವ್ವರು ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಆ ಸಿನಿಮಾಗೆ ಕೋಟಿ ಮೇಲೆ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಯಶಸ್ಸು ಸಿಕ್ಕ ಮೇಲೆ ರಶ್ಮಿಕಾ ಸಂಭಾವನೆ ಕೋಟಿದಾಟಿದ್ದು, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳು ಕೂಡ ರಶ್ಮಿಕಾ ಅದಾಯದ ಮೂಲವಾಗಿದೆ.

ಸಂಭಾವನೆ ವಿಚಾರದಲ್ಲಿ ಸುಳ್ಳು ಮಾಹಿತಿ

ಸಂಭಾವನೆ ವಿಚಾರದಲ್ಲಿ ಸುಳ್ಳು ಮಾಹಿತಿ

ಸಂಭಾವನೆ ವಿಚಾರದಲ್ಲಿ ರಶ್ಮಿಕಾ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ ಹಿಟ್ ಆದ ನಂತರ ಮತ್ತೆ ಶೇರ್ ಕೂಡ ಪಡೆಯುತ್ತಾರಂತೆ, ಜೊತೆಗೆ ಜಾಹೀರಾತು ಏಜೆನ್ಸಿಗಳ ಜೊತೆಯೂ ರಶ್ಮಿಕಾ ಷೇರು ವ್ಯವಹಾರ ನಡೆಸುತ್ತಿದ್ದಾರಂತೆ. ಇದರ ಜೊತೆಗೆ ರಶ್ಮಿಕಾ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆಯಂತೆ. ಈ ಎಲ್ಲಾ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ರಶ್ಮಿಕಾ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಐಶಾರಾಮಿ ಕಾರು ಖರೀದಿ

ಐಶಾರಾಮಿ ಕಾರು ಖರೀದಿ

ರಶ್ಮಿಕಾ ಮಂದಣ್ಣ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೆ ರಶ್ಮಿಕಾ ಎರಡು ಕಾರ್ ಅನ್ನು ಖರೀದಿಸಿದ್ದಾರೆ. ಅಲ್ಲದೆ ಟ್ಯಾಕ್ಸ್ ಕಟ್ಟಿಲ್ಲ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಈ ಎಲ್ಲಾ ಅಂಶಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ಮನೆ ಮೇಲೆ ದಾಳಿ ಮಾಡಿದ್ದಾರೆ.

ರಶ್ಮಿಕಾ ಫ್ಯಾಮಿಲಿ ಬ್ಯಾಗ್ರೌಂಡ್

ರಶ್ಮಿಕಾ ಫ್ಯಾಮಿಲಿ ಬ್ಯಾಗ್ರೌಂಡ್

ರಶ್ಮಿಕಾ ತಂದೆ ಮದನ್ ಮಂದಣ್ಣ ಮೂಲತಹ ಕೊಡಗು ಜಿಲ್ಲೆಯ ವಿರಾಜಪೇಟೆಯವರು. ವಿರಾಜಪೇಟೆಯಲ್ಲಿ ರಶ್ಮಿಕಾ ಅವರ ದೊಡ್ಡ ಬಂಗಲೆ ಇದೆ. ತಂದೆ ಬಹುದೊಡ್ಡ ಕಾಫಿ ಬೆಳೆಗಾರರು. ಜೊತೆಗೆ ಸೆರೆನಿಟಿ ಎನ್ನುವ ಒಂದು ದೊಡ್ಡ ಹಾಲ್ ಕೂಡ ಇದೆ. ಇನ್ನು ಅವರ ಫ್ಯಾಮಿಲಿಗೆ ಸಂಭಂದಿಸಿದ ಹಾಗೆ ಕಮರ್ಶಿಯಲ್ ಕಾಂಪ್ಲೆಕ್ಸ್ ಗಳು ಕೂಡ ಇವೆ ಎಂದು ಹೇಳಲಾಗುತ್ತಿದೆ.

More from Filmibeat

English summary
Income Tax ride on kannada actress Rashmika Mandanna house in Virajapete.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X