Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದು ವರ್ಷದಲ್ಲಿ ಐಟಿ ದಾಳಿಗೆ ಒಳಗಾದ ಟಾಪ್ ಸಿನಿಮಾ ಸ್ಟಾರ್ಸ್ ಪಟ್ಟಿ!
ಸಿನಿಮಾ ಸ್ಟಾರ್ ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಸದ್ಯ, ತಮಿಳು ನಟ ವಿಜಯ್ ಅವರ ಮನೆ ಮತ್ತು ಕಚೇರಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿ ಹಣವನ್ನು ಮತ್ತು ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಸಿನಿಮಾ ನಟರ ಮನೆ ಮೇಲೆ ದಾಳಿ ಆಗತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ಸಿನಿಮಾ ಮಂದಿ ಮನೆ ಮತ್ತು ಕಚೇರಿ ಮೇಲೆ ರೇಡ್ ಆಗಿತ್ತು. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಐಟಿ ವಿಚಾರಣೆ ಎದುರಿಸಿದ ಸ್ಟಾರ್ ಗಳು ಯಾರು?

ಸ್ಯಾಂಡಲ್ವುಡ್ ನಟರ ಟಾರ್ಗೆಟ್ ಆಗಿದ್ದರು
2019ರ ಜನವರಿ ತಿಂಗಳಲ್ಲಿ ಕನ್ನಡದ ಸ್ಟಾರ ನಟರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ಆಗಿತ್ತು. ನಟ ಪುನೀತ್ ರಾಜ್ ಕುಮಾರ್, ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮತ್ತು ಶಿವರಾಜ್ ಕುಮಾರ್ ಮನೆ ಮೇಲೆ ದಾಳಿ ಆಗಿತ್ತು. ಈ ಸಂಬಂಧ ಐಟಿ ಕಚೇರಿಯಲ್ಲಿ ವಿಚಾರಣೆ ಕೂಡ ಎದುರಿಸಿದ್ದರು.
ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್

ಶ್ರೀಮಂತ ನಿರ್ಮಾಪಕರು
ಸ್ಟಾರ್ ನಟರ ಜೊತೆ ಅವರ ಚಿತ್ರಗಳನ್ನು ನಿರ್ಮಿಸಿದ್ದ ಶ್ರೀಮಂತ ನಿರ್ಮಾಪಕರು ಮನೆ ಮತ್ತು ಕಚೇರಿಗಳ ಮೇಲೂ ಅದೇ ದಿನ ಐಟಿ ದಾಳಿ ನಡೆದಿತ್ತು. ಜಯಣ್ಣ, ವಿಜಯ್ ಕಿರಗಂದೂರ್, ಸಿ ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್ ಮನೆಗೆ ಭೇಟಿ ನೀಡಿದ ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದರು.

ತೆಲುಗು ನಟರೂ ಟಾರ್ಗೆಟ್
2019ರ ನವೆಂಬರ್ ತಿಂಗಳಲ್ಲಿ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಹಾಗೂ ಕೆಲವರು ನಟರಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಐಟಿ ದಾಳಿ ಆಗಿತ್ತು. ತೆಲುಗು ನಿರ್ಮಾಪಕ ಸುರೇಶ್ ಬಾಬು, ನಟ ನಾನಿ, ವೆಂಕಟೇಶ್ ಅವರ ಮನೆ ಮತತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡಿದ್ದರು.
ತೆಲುಗು ನಟ ವೆಂಕಟೇಶ್, ನಾನಿ ಮನೆ ಮೇಲೆ ಐಟಿ ದಾಳಿ

ಜನವರಿಯಲ್ಲಿ ರಶ್ಮಿಕಾ ಮಂದಣ್ಣ
2020ರ ಜನವರಿ 16 ರಂದು ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿರಾಜಪೇಟೆಯ ನಿವಾಸಕ್ಕೆ ಭೇಟಿ ಮಾಡಿ ದಾಖಲೆ ಪರಿಶೀಲಿಸಿದ್ದರು.
ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ: ಗಮನಿಸಬೇಕಾದ ಅಂಶಗಳು

ತೆಲುಗು ನಿರೂಪಕಿಯರ ಮನೆ ಮೇಲೆ ರೇಡ್
ಕಳೆದ ಡಿಸೆಂಬರ್ ತಿಂಗಳಲ್ಲಿ ತೆಲುಗು ಟಿವಿ ಹಾಗೂ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಸುಮಾ ಮತ್ತು ಅನುಸೂಯ ಹಾಗೂ ನಟಿ ಲಾವಣ್ಯ ತ್ರಿಪಾಠಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿಆಗಿತ್ತು ಎಂಬ ಸುದ್ದಿ ವರದಿ ಆಗಿತ್ತು. ಈ ಮೂವರಿಗೆ ಸಂಬಂಧಿಸಿದ ಸಂಸ್ಥೆ, ಕಂಪನಿಗಳ ವಿವರ ಪಡೆದಿದ್ದು, ಎಲ್ಲವೂ ಸರಿಯಾಗಿದ್ಯಾ ಎಂದು ಪರಿಶೀಲಿಸಿದ್ದರಂತೆ.
ತೆಲುಗು ಖ್ಯಾತ ನಿರೂಪಕಿ ಸುಮಾ-ಅನುಸೂಯ ಮನೆ ಮೇಲೆ ಐಟಿ ದಾಳಿ

ಹೊಸ ಸೇರ್ಪಡೆ ವಿಜಯ್
ಸಿನಿಮಾ ಉದ್ಯಮದಲ್ಲಿ ಹೆಚ್ಚು ಕಪ್ಪು ಹಣ ಹರಿದಾಡುತ್ತಿದೆ ಎಂಬ ಮಾತಿದೆ. ನಿರ್ಮಾಪಕರು ಮತ್ತು ನಟರ ನಡುವೆ ನಡೆಯುವ ವ್ಯವಹಾರಿಕ ವಹಿವಾಟುಗಳ ಮೇಲೆ ಐಟಿ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹಾಗಾಗಿ, ಸತತವಾಗಿ ಸಿನಿಮಾ ಸ್ಟಾರ್ ಗಳು ಟಾರ್ಗೆಟ್ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ, ತಮಿಳು ನಟ ವಿಜಯ್ ಈಗ ಐಟಿ ಅಧಿಕಾರಿಗಳ ಕೆಂಗಣ್ಣಿಗೆ ಬಿದಿದ್ದಾರೆ. ಮುಂದೆ ಯಾರು ಎಂಬುದು ಈಗ ಪ್ರಶ್ನೆಯಾಗಿದೆ.