»   » ನೋಡ ಬನ್ನಿರಾ ಕನ್ನಡದ ಬಿಸಿಬಿಸಿ ಐಟಂ ಸಾಂಗುಗಳ

ನೋಡ ಬನ್ನಿರಾ ಕನ್ನಡದ ಬಿಸಿಬಿಸಿ ಐಟಂ ಸಾಂಗುಗಳ

Posted By:
Subscribe to Filmibeat Kannada

ಪಡ್ಡೆಗಳ ಕಣ್ಣಿಗೆ 'ಮದ್ರಾಸ್ ಐ' ತರುವಂತಹ ಮೈಮಾಟ ಹೊಂದಿರುವ ಯಾನಾ ಗುಪ್ತಾ ಮತ್ತು ಮಲ್ಲಿಕಾ ಶೆರಾವತಳನ್ನು ಯಾವಾಗ ಜೋಗಿ ಪ್ರೇಮ್ ಸ್ಯಾಂಡಲ್ ವುಡ್ಡಿಗೆ ಕರೆತಂದರೋ ಅಂದೇ ನಮ್ಮ ಗಾಂಧಿನಗರದ ಕೆಲ ನಿರ್ಮಾಪಕರು ಬಾಲಿವುಡ್ಡಿನ ಇನ್ನಷ್ಟು ಬೆಡಗಿಯರ contact information ಗಳನ್ನು ತಮ್ಮ ಡೈರಿಗಳಲ್ಲಿ ಸೇವ್ ಮಾಡಿಕೊಂಡರಂತೆ.

ದುಡ್ಡೇ ದೊಡ್ದಪ್ಪ ಅನ್ನೋ ಈ ಕಾಲದಲ್ಲಿ ನಿರ್ಮಾಪಕ ಎಷ್ಟು 'ಡಬ್ಬುಲು' ಬಿಚ್ಚಲು ತಯಾರಿರುತ್ತಾರೋ ಅದಕ್ಕೆ ಅನುಗುಣವಾಗಿ ಬಟ್ಟೆ ಬಿಚ್ಚಲು ತಯಾರಿರುವ ಬೆಡಗಿನ ಅರಗಿಣಿಯರಿಗೆ ಇಲ್ಲೂ ಕೊರತೆಯಿಲ್ಲ.. ಅಲ್ಲೂ ಇಲ್ಲ.

ಆ ಕಾಲದ ಕ್ಯಾಬರೆ ನರ್ತನ ಕಾಲಕ್ಕೆ ತಕ್ಕಂತೆ, ಅಭಿಮಾನಿಗಳ ನೋಟಕ್ಕೆ ತಕ್ಕಂತೆ ಹೊಸ ಅವಿಷ್ಕಾರ ಪಡೆದುಕೊಂಡು ಐಟಂ ಸಾಂಗ್ ಎಂದು ಪುನರ್ಜನ್ಮ ಪಡೆಯಿತು ಅಂದರೆ ಬಹುಷ: ಐಟಂ ಸಾಂಗಿಗೆ ಕೊಡಬಹುದಾದ ಸರಿಯಾದ ವ್ಯಾಖ್ಯಾನವಿರಬಹುದೆನೋ?

ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್ಟಾದ ಕೆಲವೊಂದು ಐಟಂ ಹಾಡುಗಳು ಸ್ಲೈಡಿನಲ್ಲಿ..

ಚಾರ್ಮಿ ಕೌರ್

ನಟಿ ಚಾರ್ಮಿ ಕೌರ್ ಕನ್ನಡದ ಚಿತ್ರವೊಂದರಲ್ಲಿ ಮೊದಲಬಾರಿಗೆ ಐಟಂ ನಂಬರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್, ಯೋಗಿ ಅಭಿನಯದ 'ಯಾರೇ ಕೂಗಾಡಲೀ' ಚಿತ್ರದಲ್ಲಿ ಅವರು ಐಟಂ ಸಾಂಗ್ ನಲ್ಲಿ ಕುಣಿದಿದ್ದಾರೆ.

ರವೀನಾ ಟಂಡನ್

1999 ರಲ್ಲಿ ಬಿಡುಗಡೆಯಾದ ಉಪೇಂದ್ರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ರವೀನಾ ಟಂಡನ್ 'ಮಸ್ತ್ ಮಸ್ತ್ ಹುಡುಗಿ ಬಂದ್ಲು' ಅನ್ನೋ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಚಿತ್ರದಲ್ಲಿ ಮೂರು ಜನ ಹಿರೋಯಿನ್ ಗಳ ಪೈಕಿ ರವೀನಾ ಕೂಡಾ ಒಬ್ಬರು.

ಮುಮೈತ್ ಖಾನ್

ಆಗಸ್ಟ್ 2010 ತಿಂಗಳಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ ಶೌರ್ಯ ಚಿತ್ರದಲ್ಲಿ 'ಹಂಡ್ರೆಡು ಪರ್ಸೆಂಟು ಪ್ರೀತೀಲಿ ಪಕ್ಕಾ ನಾನು' ಹಾಡಿಗೆ ದರ್ಶನ್ ಜೊತೆ ಮುಮೈತ್ ಖಾನ್ ಬಿಂದಾಸ್ ಸ್ಟೆಪ್ ಹಾಕಿದ್ದರು.

ಯಾನಾ ಗುಪ್ತಾ

2005ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್ ಅಭಿನಯದ ಜೋಗಿ ಚಿತ್ರದಲ್ಲಿ ' ನೀ ಗರತಿಯಂಗೆ ಸೆರಗಾಕಿ ಕೊಂಡ್ರೆ, ಬಿನ್ ಲಾಡೆನ್ ನಮ್ ಮಾವ್; ಚಿತ್ರಕ್ಕೆ ಶಿವರಾಜ್ ಕುಮಾರ್ ಮತ್ತು ತಂಡದೊಂದಿಗೆ ಯಾನಾ ಗುಪ್ತಾ ತುಂಡು ಉಡುಗೆಯಲ್ಲಿ ಡ್ಯಾನ್ಸ್ ಮಾಡಿದ್ದರು.

ಮಲ್ಲಿಕಾ ಶೆರಾವತ್

ಡಿಸೆಂಬರ್ 2007ರಲ್ಲಿ ಬಿಡುಗಡೆಯಾದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮಲ್ಲಿಕಾ ಶೆರಾವತ್, ಚಿತ್ರದ ನಾಯಕ ಪ್ರೇಮ್, ಸಿಹಿಕಹಿ ಚಂದ್ರು ಮತ್ತು ಸಹ ಕಲಾವಿದರ ಜೊತೆಗೆ ಸ್ಟೆಪ್ ಹಾಕಿದ್ದರು. ಈ ಒಂದು ಹಾಡಿಗೆ ಮಲ್ಲಿಕಾಗೆ ಐವತ್ತು ಲಕ್ಷ ಸಂಭಾವನೆ ಕೊಡಲಾಗಿತ್ತು ಎನ್ನುವ ಸುದ್ದಿಯಿತ್ತು.

ರಮ್ಯಾ

ಜಾನಿ ಮೇರಾ ನಾಮ್ ಪ್ರೀತಿ ಮೆರಾ ಕಾಮ್ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ಗೋಲ್ಡನ್ ಗರ್ಲ್ ರಮ್ಯಾ ಊರಿಗೊಬ್ಳೆ ಪದ್ಮಾವತಿ ಅನ್ನೋ ಸೂಪರ್ ಹಿಟ್ ಹಾಡಿಗೆ ಸ್ಟೆಪ್ ಹಾಕಿದ್ದರು.

ರಾಗಿಣಿ ದ್ವಿವೇದಿ

ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ರಾಗಿಣಿ ದ್ವಿವೇದಿ "ತುಪ್ಪ ಬೇಕಾ ತುಪ್ಪ.." ಎಂದು ಕುಣಿದಿದ್ದನ್ನು ಸಿನಿರಸಿಕರು ಮರೆಯುವುದುಂಟೇ? ರವಿಚಂದ್ರನ್, ರಮೇಶ್ ಜೊತೆ ಹೆಜ್ಜೆ ಹಾಕಿದ ರಾಗಿಣಿಯ ಈ ಐಟಮ್ ಡ್ಯಾನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಐಟಂ ರಾಣಿ ದೊರಕಿದಂತಾಗಿದೆ. ಅಲ್ಲದೇ ಈಕೆ ಉಪೇಂದ್ರ ಅಭಿನಯದ ಆರಕ್ಷಕ ಚಿತ್ರದಲ್ಲೂ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದರು. ಈ ಹಾಡಿನಲ್ಲಿ ರಾಗಿಣೀ ಬಿಕನಿ ಮತ್ತು ಅಂಡರ್ ವಾಟರ್ ಡ್ರೆಸ್ಸಿನಲ್ಲಿ ಕಾಣಿಸಿಕೊಂಡಿದ್ದರು.

ಇಲಿಯಾನ ಡಿ ಕ್ರುಜ್

ಇಂದ್ರಜಿತ್ ಲಂಕೇಶ್ ನಿರ್ದೇಶನದ ತುಂಟ ತುಂಟಿ ಚಿತ್ರದಲ್ಲಿ ದಕ್ಷಿಣಭಾರತದ ಹಾಟ್ ನಟಿ ಇಲಿಯಾನ ಡಿ ಕ್ರುಜ್ ಐಟಂ ಹಾಡೊಂದಕ್ಕೆ ನರ್ತಿಸಿದ್ದರು.

ನಿಖಿತಾ ತುಕ್ರಾಲ್

ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸ್ನೇಹಿತರು ಚಿತ್ರದಲ್ಲಿ ನಿಖಿತಾ ಐಟಂ ಸಾಂಗಿನಲ್ಲಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್, ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ತರುಣ್ ಚಂದ್ರ ಜೊತೆ ನಿಖಿತಾ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಪೂಜಾ ಗಾಂಧಿ

ದಂಡುಪಾಳ್ಯ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾಗಾಂಧಿ ಗುರುಪ್ರಸಾದ್ ಅವರ ಬಿಡುಗಡೆಗೆ ಸಿದ್ದವಾಗಿರುವ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ತಮ್ಮ ಸೊಂಟ ಕುಣಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಮೇಘನಾ ನಾಯ್ಡು

ಆ ದಿನಗಳು ಚಿತ್ರ ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶಿಸುತ್ತಿರುವ 'ಪರಾರಿ' ಚಿತ್ರದಲ್ಲಿ ತಮ್ಮ ಸೊಂಟ ಕುಣಿಸಿದ್ದಾರೆ ಮೇಘನಾ ನಾಯ್ಡು.

ಐಂದ್ರಿತಾ ರೇ

ಮಹೇಶ್ ಬಾಬು ನಿರ್ದೇಶನದ ಪ್ರೇಮ್ ಅಡ್ಡಾ ಚಿತ್ರದಲ್ಲಿ ಐಂದ್ರಿತಾ ರೇ ಐಟಂ ಸಾಂಗೊಂದರಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ರಾಗಿಣಿ ದ್ವಿವೇದಿ ಮಾಡ ಬೇಕಿದ್ದ ಈ ಡ್ಯಾನ್ಸಗೆ ಐಂದ್ರಿತಾ ಕೊನೇ ಗಳಿಗೆಯಲ್ಲಿ ಆಯ್ಕೆಯಾಗಿದ್ದರು.

ರಾಖಿ ಸಾವಂತ್

ಪ್ರಜ್ವಲ್ ದೇವರಾಜ್ ಅಭಿನಯದ ಗೆಳೆಯ ಚಿತ್ರದಲ್ಲಿ ರಾಖಿ ಸಾವಂತ್ ಐಟಂ ಸಾಂಗಿನಲ್ಲಿ ಕಾಣಿಸಿಕೊಂಡಿದ್ದರು.

English summary
Some of the best item songs seen in recent days in Kannada Films
Please Wait while comments are loading...