»   » ನಟ ಬುಲೆಟ್ ಪ್ರಕಾಶ್ ಗೆ 'ಇಟ್ರಲ್ಲಪ್ಪೋ ಬತ್ತಿ'

ನಟ ಬುಲೆಟ್ ಪ್ರಕಾಶ್ ಗೆ 'ಇಟ್ರಲ್ಲಪ್ಪೋ ಬತ್ತಿ'

Posted By:
Subscribe to Filmibeat Kannada

ಈ ಬತ್ತಿ ಇಡೋ ಕಾರ್ಯಕ್ರಮಗಳು ಸ್ಯಾಂಡಲ್ ವುಡ್ ಗೆ ಹೊಸದಲ್ಲ ಬಿಡಿ. ಆಗಾಗ ಅವರಿಗೆ ಇವರು, ಇನ್ನೊಬ್ಬರಿಗೆ ಮತ್ತೊಬ್ಬರು ಬತ್ತಿ ಇಡುತ್ತಲೇ ಇರುತ್ತಾರೆ. ಈಗ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರಿಗೂ ಯಾರೋ ಬತ್ತಿ ಇಟ್ಟಿದ್ದಾರೆ. ಅವರಿಗೂ 'ಇಟ್ರಲ್ಲಪ್ಪೋ ಬತ್ತಿ' ಅಂತೀರಾ.

ಇದು ಬುಲೆಟ್ ಪ್ರಕಾಶ್ ಅವರ ಹೊಸ ಚಿತ್ರದ ಶೀರ್ಷಿಕೆ. ಇಟ್ರಲ್ಲಪ್ಪೋ ಬತ್ತಿ ಚಿತ್ರವನ್ನು ಎಲ್.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಯಶವಂತಪುರದ ಕರುಮರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.

Actor Bullet Prakash

ಬುಲೆಟ್‌ಪ್ರಕಾಶ್, ಮಿತ್ರಾ, ಶಶಿಕಲಾ, ಅಶ್ವಿನಿ ಅವರು ಅಭಿನಯಿಸಿದ ಮೊದಲ ಸನ್ನಿವೇಶಕ್ಕೆ ವೆಂಕಟೇಶಮೂರ್ತಿ ಅವರು ಆರಂಭಫಲಕ ತೋರಿದರೆ ಲಕ್ಷ್ಮೀನಾರಾಯಣಸೋನಿ ಕ್ಯಾಮೆರಾ ಚಾಲನೆ ಮಾಡಿದರು.

ನಟಿ ನಯನಕೃಷ್ಣಾ ಮುಖ್ಯಭೂಮಿಕೆಯಲ್ಲಿದ್ದ ;ಕೊಟ್ಳಲಪ್ಪೋ ಕೈ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಿಷಿ ಈ ಹೊಸ ಚಿತ್ರದ ನಿರ್ದೇಶಕರು. ಅವರ ನಿರ್ದೇಶನದ 'ಕೊಟ್ಳಲ್ಲಪ್ಪೋ ಕೈ' ಚಿತ್ರ ಭಾರಿ ರಾದ್ಧಾಂತಕ್ಕೆ ಕಾರಣವಾಗಿತ್ತು. ನಟಿ ನಯನಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿಯೇ ಚಪ್ಪಲಿ ತೆಗೆದುಕೊಂಡು ಹೊಡೆದು ವಿವಾದ ಸೃಷ್ಟಿಸಿದ್ದರು.

ಅದೆಲ್ಲಾ ಹಳೆ ಕಥೆ ಆಯಿತು. ಇಟ್ರಲ್ಲಪ್ಪೋ ಬತ್ತಿ ಚಿತ್ರದ ವಿಚಾರಕ್ಕೆ ಬಂದರೆ, ಹಾಸ್ಯಮಯ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಗೋವಾದಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹಾಡುಗಳನ್ನು ರಚಿಸಿದ್ದಾರೆ.

ಎರಡು ಹಾಡುಗಳಿರುವ ಈ ಚಿತ್ರಕ್ಕೆ ಮಧುರ ಸಂಗೀತ ನೀಡುತ್ತಿದ್ದಾರೆ. ಶಂಕರ್ ಛಾಯಾಗ್ರಹಣ, ಕುಮಾರ್ ಸಂಕಲನ, ಓಂರಾಜ್ ನೃತ್ಯ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ಗಣೇಶ್ ಅವರ ನಿರ್ಮಾಣ ನಿಯಂತ್ರಣವಿರುವ ಈ ಚಿತ್ರದ ತಾರಾಬಳಗದಲ್ಲಿ ಬುಲೆಟ್‌ಪ್ರಕಾಶ್, ಮಿತ್ರಾ, ಶಶಿಕಲಾ, ಅಶ್ವಿನಿ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Comedy actor Bullet Prakash's new film titled as 'Itrallappo Batti' (which means backbiting) directed by Kotlallappo Kia fame Rishi. The films 30 days shooting will be held in Goa and Bangalore. 
 
Please Wait while comments are loading...