For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಡುಗರನ್ನು ಹೀಯಾಳಿಸಿದ್ರಾ ಜಗ್ಗೇಶ್? ಆಡಿಯೋ ಕ್ಲಿಪ್‌ ಬಗ್ಗೆ ಸ್ಪಷ್ಟನೆ

  By ಫಿಲ್ಮಿಬೀಟ್ ಡೆಸ್ಕ್
  |

  ನವರಸ ನಾಯಕ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ದರ್ಶನ್ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಸಿನಿಮಾವೊಂದರ ಪ್ರಚಾರದ ಕುರಿತು ನಿರ್ಮಾಪಕರೊಬ್ಬರಿಗೆ ಸಲಹೆ ನೀಡುತ್ತಿದ್ದ ಸಂದರ್ಭದಲ್ಲಿ ದರ್ಶನ್ ಜೊತೆಗಿರುವ ಹುಡುಗರ ಬಗ್ಗೆ ಹೀಯಾಳಿಸಿ ಮಾತುಗಳನ್ನಾಡಿದ್ದಾರೆ ಎಂದು ಆಡಿಯೋ ಕ್ಲಿಪ್‌ವೊಂದು ಹರಿದಾಡುತ್ತಿದೆ.

  ಚಿಕ್ಕ ಹುಡುಗನ ಆಟ ಇದು ಎಂದು ದರ್ಶನ್ ಫ್ಯಾನ್ಸ್ ಗೆ ಸ್ಪಷ್ಟನೆ ಕೊಟ್ಟ ಜಗ್ಗೇಶ್

  ''ನಮ್ಮ ಹತ್ರ ಇರೋರೆಲ್ಲ ಹಾರ್ಡ್ ವರ್ಕರ್ಸ್. ಬಟ್... ದರ್ಶನ್ ಅವರ ಥರ ಇದ್ದಾರಲ್ಲಾ? ಅವರ ಥರ....ತಲೆ ಮಾಂಸ ಕಳಿಸಿ ಅಣ್ಣಾ.. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರು ಯಾರು ಇಲ್ಲ ನನ್ನ ಹತ್ರ...' ಎಂದು ದಾಸನ ಜೊತೆಗಾರರ ಬಗ್ಗೆ ಜಗ್ಗೇಶ್ ಟೀಕಿಸಿದ್ದಾರೆ. ಈ ಆಡಿಯೋ ಕೇಳಿದ ಡಿ ಫ್ಯಾನ್ಸ್ ನಟ ಜಗ್ಗೇಶ್ ಅವರ ಮೇಲೆ ಕೆಂಡಕಾರುವಂತಾಗಿದೆ. ಈ ಬೆಳವಣಿಗೆ ಕುರಿತು ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ..?

  ಆಡಿಯೋ ಕ್ಲಿಪ್‌ ಬಗ್ಗೆ ಜಗ್ಗೇಶ್ ಸ್ಪಷ್ಟನೆ

  ಆಡಿಯೋ ಕ್ಲಿಪ್‌ ಬಗ್ಗೆ ಜಗ್ಗೇಶ್ ಸ್ಪಷ್ಟನೆ

  ''ಚಿತ್ರ ಪ್ರಚಾರಕ್ಕೆ fakenews spread ಮಾಡುವ ಹುನ್ನಾರ! ಒಬ್ಬ ಚಿಕ್ಕಹುಡುಗನದು ಈ ಆಟ! ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗು ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗಗೆಲ್ಲಿ ನನ್ನ ವಿನಂತಿ!'' ಎಂದು ಜಗ್ಗೇಶ್ ಟ್ವೀಟ್ ಮಾಡಿ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ದರ್ಶನ್ ಹುಡುಗರಿಗೆ 'ತಲೆ ಮಾಂಸದ' ಸರ್ಟಿಫಿಕೇಟ್: ಸಾಕ್ಷಿ ಸಮೇತ ಸಿಕ್ಕಿಬಿದ್ದ ಜಗ್ಗೇಶ್

  ಜಗ್ಗೇಶ್ ದೂರವಾಣಿಯಲ್ಲಿ ಮಾತನಾಡಲ್ಲ

  ಜಗ್ಗೇಶ್ ದೂರವಾಣಿಯಲ್ಲಿ ಮಾತನಾಡಲ್ಲ

  ''ಜಗ್ಗಣ್ಣ ಹಾಗು ದರ್ಶನ ಸಾರ್ ವಿಶ್ವಾಸಕ್ಕೆ ಬೆಂಕಿ ಹಚ್ಚುವ ಹುನ್ನಾರ ಮಾಡುವವರಿಗೆ ಒಂದೆ ಮಾತು. ಎಷ್ಟೆ ಇಂಥ ವ್ಯೆರ್ಥ ಪ್ರಯತ್ನ ಮಾಡಿದರು ಇವರಿಬ್ಬರ ಮಧ್ಯ ತಂದಿಡುವುದು ಅಸಾಧ್ಯ! ಹಾಗು ಜಗ್ಗಣ್ಣ ಯಾರ ಜೊತೆ ದೂರವಾಣಿ ಬಳಸೋಲ್ಲಾ ಅದು ನೆನಪಿರಲಿ...'' ಎಂದು ಜಗ್ಗೇಶ್ ಅಭಿಮಾನಿಗಳ ಅಧಿಕೃತ ಟ್ವಿಟ್ಟರ್ ಖಾತೆ ಸ್ಪಷ್ಟಪಡಿಸಿದೆ.

  ಕ್ಷಮೆ ಕೇಳಬೇಕು ಎಂದು ಡಿ ಫ್ಯಾನ್ಸ್ ಒತ್ತಾಯ

  ಕ್ಷಮೆ ಕೇಳಬೇಕು ಎಂದು ಡಿ ಫ್ಯಾನ್ಸ್ ಒತ್ತಾಯ

  ನಟ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳು ಹಾಗೂ ಅವರ ಜೊತೆಗಿರುವ ಹುಡುಗರ ಬಗ್ಗೆ ಈ ರೀತಿ ಹೇಳಿರುವುದು ತಪ್ಪು. ದಯವಿಟ್ಟು ಈ ಬಗ್ಗೆ ಕ್ಷಮೆ ಕೇಳಿ ಮತ್ತು ವಿಡಿಯೋ ಬಗ್ಗೆ ಸರಿಯಾದ ಸ್ಪಷ್ಟನೆ ಕೊಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

  ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು- ಜಗ್ಗೇಶ್ ಬೇಸರ

  ಆಡಿಯೋ ಸತ್ಯಾಸತ್ಯತೆ ಏನು?

  ಆಡಿಯೋ ಸತ್ಯಾಸತ್ಯತೆ ಏನು?

  ಆಡಿಯೋದಲ್ಲಿ ನಿರ್ಮಾಪಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆ ಕೊಟ್ಟಿರುವ ಜಗ್ಗೇಶ್, ಮಾತಿನ ಮಧ್ಯೆ 'ದರ್ಶನ್ ಹುಡುಗರ ಥರಾ ತಲೆ ಮಾಂಸ ಕಳಿಸಿ, ನೂರು ಕುರಿ ಕಳಿಸಿ ಅನ್ನೋರು ನನ್ನ ಬಳಿ ಇಲ್ಲ'' ಎಂದಿದ್ದಾರೆ. ಜಗ್ಗೇಶ್ ಅಭಿಮಾನಿಗಳು ಈ ಆಡಿಯೋ ಜಗ್ಗೇಶ್ ಅವರದ್ದಲ್ಲ ಅಂತಿದ್ದಾರೆ. ಜಗ್ಗೇಶ್ ಅವರು ನೋಡಿದ್ರೆ ''ಇದು ಪ್ರಚಾರಕ್ಕಾಗಿ ಮಾಡಿರುವ ಕೆಲಸ'' ಎಂದಿದ್ದಾರೆ. ಈ ಕಡೆ ಡಿ ಫ್ಯಾನ್ಸ್ ಕ್ಷಮೆ ಕೇಳಿ ಅಂತಿದ್ದಾರೆ. ಆ ಆಡಿಯೋ ಕ್ಲಿಪ್ ಸತ್ಯಾಸತ್ಯತೆ ಹೊರಬಿದ್ದರಷ್ಟೇ ನಿಜ ಏನು ಎಂದು ಹೊರಬೀಳಲಿದೆ.

  English summary
  Audio Clip Controversy: Kannada actor Jaggesh Clarification on Audio Clip About Darshan Fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X