»   » ಸುದೀಪ್ ದಂಪತಿಗೆ ಜಗ್ಗೇಶ್ ಅವರಿಂದ ಸಂತಾನ ಸಲಹೆ

ಸುದೀಪ್ ದಂಪತಿಗೆ ಜಗ್ಗೇಶ್ ಅವರಿಂದ ಸಂತಾನ ಸಲಹೆ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದ ನವರಸ ನಾಯಕ ಜಗ್ಗೇಶ್ ಪ್ರತಿ ಕಲಾವಿದರ ಜೊತೆಗೂ ಅನ್ಯೂನ್ಯವಾಗಿರುವ ನಟ. ಎಲ್ಲರನ್ನು ತಮ್ಮ ಸಹೋದರರಂತೆ ನೋಡಿಕೊಳ್ಳುತ್ತಾ ಪ್ರತಿಯೊಬ್ಬರ ಬಳಿಯೂ ಸಂತೋಷದಿಂದ ಮಾತನಾಡುತ್ತಾ ಎಲ್ಲರಿಗೂ ಒಳಿತನ್ನು ಬಯಸುವ ಜಗ್ಗೇಶ್ ಕಿಚ್ಚ ಸುದೀಪ್ ದಂಪತಿಗೆ ಒಂದು ಸಲಹೆಯನ್ನ ನೀಡಿದ್ದಾರೆ.

ತಮ್ಮ ಟ್ವಿಟ್ಟರ್ ನಲ್ಲಿ ಸುದೀಪ್ ಹಾಗೂ ಪತ್ನಿ ಪ್ರಿಯಾ ಮತ್ತು ಮಗಳು ಇರುವ ಫೋಟೋವನ್ನ ರೀ-ಟ್ವಿಟ್ ಮಾಡುವ ಮೂಲಕ ಸಣ್ಣದೊಂದು ಅಡ್ವೈಸ್ ಮಾಡಿದ್ದಾರೆ. "ಸುಂದರವಾದ ಚಿತ್ರ, ಗಂಡು ಮಗು ಪ್ರಾಪ್ತಿರಸ್ತು. ಕರುನಾಡು ಕಾಯುತ್ತಿದೆ ಜ್ಯೂನಿಯರ್ ಕಿಚ್ಚನಿಗಾಗಿ" ಎಂದು ಟ್ವೀಟ್ ಮಾಡಿದ್ದಾರೆ.

Jaggesh has advice Kiccha Sudeep to have a boy baby

ಜಗ್ಗೇಶ್ ಮಾಡಿರುವ ಟ್ವಿಟ್ ಗೆ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ನಮಗೂ ಕೂಡ ಇಂತದ್ದೇ ಆಸೆ ಇತ್ತು ಎಂದು ಅನೇಕರು ಮೆಸೆಜ್ ಮಾಡುವ ಮೂಲಕ ಜೂನಿಯರ್ ಕಿಚ್ಚನಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಜಗ್ಗೇಶ್ ಅವರ ಸಲಹೆಗೆ ಸಪೋರ್ಟ್ ಕೊಟ್ಟಿದ್ದಾರೆ.

ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಅಡ್ಡಕ್ಕೆ ಕನ್ನಡದ ಮತ್ತೊಬ್ಬ ನಟನ ಎಂಟ್ರಿ!

Jaggesh has advice Kiccha Sudeep to have a boy baby

ಮತ್ತಷ್ಟು ಅಭಿಮಾನಿಗಳು ನಿಮಗೂ ಹೆಣ್ಣು ಮಗುವಾಗಲಿ ಈಗಲೂ ಕಾಲ ಮಿಂಚಿಲ್ಲ ಎಂದು ಜಗ್ಗೇಶ್ ಅವರಿಗೆ ಸಲಹೆ ನೀಡಿದ್ದಾರೆ. ಒಟ್ಟಾರೆ ಈ ಸುದ್ದಿ ಟ್ವಿಟ್ಟರ್ ನಲ್ಲಿ ಬಾರಿ ಸದ್ದು ಮಾಡುತ್ತಿದ್ದು ಸುದೀಪ್ ಅಭಿಮಾನಿಗಳಿಗೆ ತಮ್ಮ ಆಸೆಯನ್ನ ಜಗ್ಗೇಶ್ ಅವರು ವ್ಯಕ್ತ ಪಡಿಸಿರೋದು ಖುಷಿ ತಂದಿದೆ.

English summary
Kannada Actor Jaggesh has taken his Twitter account to advice Kiccha Sudeep to have a boy baby.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X