»   » ಸುದೀಪ್ ಅಭಿಮಾನಿ ಕೇಳಿದ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರ ಇದು.!

ಸುದೀಪ್ ಅಭಿಮಾನಿ ಕೇಳಿದ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರ ಇದು.!

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೂರು ದಶಕಗಳು ತುಂಬಿವೆ. ಇನ್ನು ಸುದೀಪ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಎರಡು ದಶಕಗಳು ಕಳೆದಿವೆ.

ಚಂದನವನದ ಈ ಇಬ್ಬರು ಸ್ಟಾರ್ ನಟರ ಬಗ್ಗೆ ನಾವೀಗ ಮೆಲುಕು ಹಾಕುತ್ತಿರುವುದಕ್ಕೂ ಒಂದು ಕಾರಣ ಇದೆ. ಅದೇನು ಅಂದ್ರೆ, ತಮ್ಮ ಮೂರು ದಶಕಗಳ ಸಿನಿ ಜರ್ನಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್... ಹೀಗೆ ಹಲವು ನಟರ ಜೊತೆ ಜಗ್ಗೇಶ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ ಕಿಚ್ಚ ಸುದೀಪ್ ಕೂಡ ರವಿಚಂದ್ರನ್ ಜೊತೆ ಕಾಣಿಸಿಕೊಂಡು ಕಮಾಲ್ ಮಾಡಿದ್ದಾರೆ. ಇದೀಗ 'ದಿ ವಿಲನ್' ಮೂಲಕ ಶಿವಣ್ಣ ಜೊತೆಗೂ ಸುದೀಪ್ ತೆರೆ ಹಂಚಿಕೊಳ್ಳಲಿದ್ದಾರೆ.[ಬಾಂಬ್ ಹಾಕಿದ್ದು ಬುಲೆಟ್ ಪ್ರಕಾಶ್, ಖಡಕ್ ಉತ್ತರ ಕೊಟ್ಟಿದ್ದು ಜಗ್ಗೇಶ್.!]

ನಿಧಾನವಾಗಿ ಮಲ್ಟಿ ಸ್ಟಾರರ್ ಸಿನಿಮಾ ಟ್ರೆಂಡ್ ಸ್ಯಾಂಡಲ್ ವುಡ್ ನಲ್ಲಿ ಶುರು ಆಗುತ್ತಿರುವಾಗ, ಸುದೀಪ್ ಜೊತೆ ಜಗ್ಗೇಶ್ ಒಂದೇ ಸಿನಿಮಾದಲ್ಲಿ ನಟಿಸಬಹುದಾ.?

ಪ್ರಶ್ನೆ ಕೇಳಿದ್ದು ಅಭಿಮಾನಿ

ಅಷ್ಟಕ್ಕೂ, 'ಸುದೀಪ್-ಜಗ್ಗೇಶ್ ಒಟ್ಟಿಗೆ ನಟಿಸಬಹುದಾ.?' ಎಂಬ ಪ್ರಶ್ನೆ ನಮ್ಮದಲ್ಲ. ಬದಲಾಗಿ ಕಿಚ್ಚ ಸುದೀಪ್ ರವರ ಅಪ್ಪಟ ಅಭಿಮಾನಿಯದ್ದು. ಈ ಪ್ರಶ್ನೆ ಹೊಳೆದ ಕೂಡಲೆ, ಜಗ್ಗೇಶ್ ಬಳಿ ಓರ್ವ ಸುದೀಪ್ ಫ್ಯಾನ್ ಕೇಳಿದ್ದಾರೆ.

ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರ

ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ಜಗ್ಗೇಶ್ ಗೆ ಸುದೀಪ್ ಅಭಿಮಾನಿಯಿಂದ, ''ನೀವು ಮತ್ತು ದೀಪಣ್ಣ ರವರನ್ನ ನಾವು ಒಂದೇ ಸಿನಿಮಾದಲ್ಲಿ ನೋಡಬಹುದಾ'' ಎಂಬ ಪ್ರಶ್ನೆ ತೂರಿ ಬಂತು. ಅದಕ್ಕೆ ಜಗ್ಗೇಶ್ ಏನಂದರು ಗೊತ್ತಾ.?

'ರುಬ್ಬೋಣ' ಎಂದ ಜಗ್ಗೇಶ್

''ನಿಮ್ಮ ಬಾಸ್ ರೆಡಿನಾ ಕೇಳಿ.! ರುಬ್ಬೋಣ'' ಎಂದು ಸಕಾರಾತ್ಮಕವಾಗಿ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಒಳ್ಳೆ ಕಾಂಬಿನೇಷನ್

ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೇ ನೇರವಾಗಿ ಕಚಗುಳಿ ಇಡುವ ಜಗ್ಗೇಶ್ ಒಂದ್ಕಡೆ, ಇನ್ನೊಂದ್ಕಡೆ ಕೆಚ್ಚೆದೆಯ ಕಿಚ್ಚ ಸುದೀಪ್. ಇಬ್ಬರೂ ಒಟ್ಟಿಗೆ ನಟಿಸಿದರೆ, ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗುವುದರಲ್ಲಿ ಅನುಮಾನ ಇಲ್ಲ. ಈ ಐಡಿಯಾ ಇನ್ನೂ ಯಾರಾದರೂ ನಿರ್ದೇಶಕ/ನಿರ್ಮಾಪಕರಿಗೆ ಬರಬೇಕು ಅಷ್ಟೇ.!

English summary
Kannada Actor Jaggesh is ready to act with Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada