»   » ಜಗ್ಗೇಶ್, ಕೋಮಲ್ ತಂದೆ ಶಿವಲಿಂಗೇಗೌಡ ದೈವಾಧೀನ

ಜಗ್ಗೇಶ್, ಕೋಮಲ್ ತಂದೆ ಶಿವಲಿಂಗೇಗೌಡ ದೈವಾಧೀನ

Posted By:
Subscribe to Filmibeat Kannada

ಕನ್ನಡದ ಖ್ಯಾತ ಹಾಸ್ಯನಟರಾದ ಜಗ್ಗೇಶ್ ಹಾಗೂ ಕೋಮಲ್ ಕುಮಾರ್ ಅವರ ತಂದೆ ಶಿವಲಿಂಗೇಗೌಡ ಅವರು ನಿನ್ನೆ (29 ಸೆಪ್ಟೆಂಬರ್ 2012) ಸಂಜೆ 4.45ರ ಸಮಯದಲ್ಲಿ ಬೆಳ್ಳೂರಿನ ಶ್ರೀಆದಿಚುಂಚನಗಿರಿ (ಬಿಜಿಎಸ್) ಆಸ್ಪತ್ರೆಯಲ್ಲಿ ದೈವಾಧೀನರಾದರು. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸದೇ ಕೆಲವು ದಿನಗಳಾಗಿದ್ದವು.

ಎಂಭತ್ತಾರು ವಯಸ್ಸಿನ ಶಿವಲಿಂಗೇಗೌಡರಿಗೆ ಜಗ್ಗೇಶ್, ಕೋಮಲ್ ಸೇರಿದಂತೆ ಮೂರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶಿವಲಿಂಗೇಗೌಡ ಅವರ ಅಂತ್ಯಕ್ರಿಯೆ ಇಂದು (30 ಸೆಪ್ಟೆಂಬರ್ 2012) ಮಧ್ಯಾಹ್ನ 1.30ಕ್ಕೆ ತುಮಕೂರು ಮಾಯಸಂದ್ರದ ಜಡೆಮಾಯಸಂದ್ರದಲ್ಲಿರುವ ಜಗ್ಗೇಶ್ ಅವರ ತೋಟದ ಮನೆಯಲ್ಲಿ ನಡೆಯಲಿದೆ. ಈ ಕಾರ್ಯದಲ್ಲಿ ಜಗ್ಗೇಶ್, ಕೋಮಲ್ ಕುಟಂಬ ಸೇರಿದಂತೆ ಚಿತ್ರರಂಗದ ಬಹಳಷ್ಟು ಗಣ್ಯರು ಭಾಗವಹಿಸಲಿದ್ದಾರೆ.

ಮಾಯಸಂದ್ರದ ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಶಿವಲಿಂಗೇಗೌಡರು. ಮಾಯಸಂದ್ರ ಹೋಬಳಿಯಲ್ಲಿ ಪ್ರಪ್ರಥಮವಾಗಿ ಚಲನಚಿತ್ರ ಪ್ರದರ್ಶನ ಮಾಡಿ ಚಲನಚಿತ್ರ ಮಂದಿರವನ್ನೂ ನಿರ್ಮಿಸಿದ ಹೆಗ್ಗಳಿಕೆ ಇವರದು. ಆ ಕಾಲದಲ್ಲೇ ನಾಟಕ, ಸಿನಿಮಾಗಳು ಸೇರಿದಂತೆ ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವುದರ ಜೊತೆ ಸಾಕಷ್ಟು ಸೃಜನಶೀಲ ಕಲೆಗಳಲ್ಲಿಯೂ ಒಲವು ಹೊಂದಿದವರಾಗಿದ್ದರು.

ಕನ್ನಡ ಚಲನಚಿತ್ರಕ್ಕೆ ತುಂಬಾ ಹಿಂದೆ ಈ ಮೂಲಕ ಕೊಡುಗೆ ಕೊಟ್ಟಿದ್ದ ಶಿವಲಿಂಗೇಗೌಡರ ಪುತ್ರರಾದ ಜಗ್ಗೇಶ್ ಹಾಗೂ ಕೋಮಲ್ ತಮ್ಮ ನಟನೆ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸುವುದರ ಜೊತೆ ಸಾಕಷ್ಟು ಸಾಮಾಜಿಕ ಸೇವೆಗಳ ಮೂಲಕವೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂದಹಾಗೆ, ಜಗ್ಗೇಶ್ ಅಭಿನಯದ 'ಮಂಜುನಾಥ, ಬಿಎಎಲ್ಎಲ್ ಬಿ' ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೆ ಕೋಮಲ್ ಅಭಿನಯದ 'ನಂದೀಶ ಚಿತ್ರೀಕರಣದ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)

English summary
Shivalingegowda, strong pillar in the family of Kannada Comedy actors Jaggesh and Komal Kumar, passed away on Saturday (29 ಸೆಪ್ಟೆಂಬರ್ 2012) evening at 4.45 in BGS Hospital, Bellur Cross. He built a first Movie Theater in Mayasandra in Tumkur. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada