For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆ ಕೊಡೋದು ಯಾರು?

  |

  ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ದೈನಂದಿನ ಬಹುತೇಕ ಅಪ್‌ಡೇಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಾರೆ. ಸಿನಿಮಾ, ರಿಯಾಲಿಟಿ ಶೋ, ವಿಶೇಷತೆಗಳು ಹಾಗೂ ವೈಯಕ್ತಿಕ ವಿಚಾರಗಳು ಹೀಗೆ ಎಲ್ಲ ವಿಷಯದ ಬಗ್ಗೆಯೂ ಮಾಹಿತಿ ಕೊಡ್ತಾರೆ.

  ರಾಯರ ಪರಮ ಭಕ್ತನಾಗಿರುವ ಜಗ್ಗೇಶ್ ಅವರು ಅಭಿಮಾನಿಗಳನ್ನು ದೇವರಂತೆ ಕಾಣುವ ನಟ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಅಥವಾ ಕಾಮೆಂಟ್ ಮಾಡುವವರಿಗೆ ಪ್ರತಿಕ್ರಿಯೆ ಸಹ ಕೊಡ್ತಾರೆ.

  ರಾಯರ ಜೊತೆ ನಡೆದ ಮರೆಯಲಾಗದ ಘಟನೆ ಬಿಚ್ಚಿಟ್ಟ ನಟ ಜಗ್ಗೇಶ್ರಾಯರ ಜೊತೆ ನಡೆದ ಮರೆಯಲಾಗದ ಘಟನೆ ಬಿಚ್ಚಿಟ್ಟ ನಟ ಜಗ್ಗೇಶ್

  ನೆಟ್ಟಿಗರು ಸಣ್ಣಪುಟ್ಟ ಟ್ವೀಟ್‌ಗೂ ಪ್ರತಿಕ್ರಿಯೆ ಜಗ್ಗೇಶ್ ಅವರನ್ನು ನೋಡಿದಾಗ, ಕೆಲವೊಮ್ಮೆ ಅನುಮಾನ ಮೂಡುವುದು ಸಹಜ. ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯನ್ನು ತಾವೇ ಉಪಯೋಗಿಸುತ್ತಾರಾ ಅಥವಾ ತಮ್ಮ ಸಹಾಯಕರ ಮೂಲಕ ಅಪ್‌ಡೇಟ್ ಮಾಡ್ತಾರಾ ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ.

  ಅಂತಹ ಅನುಮಾನ ಇದ್ದರೆ ದೂರ ಮಾಡಿಕೊಳ್ಳಿ. ಏಕಂದ್ರೆ, ಜಗ್ಗೇಶ್ ತಮ್ಮ ಟ್ವಿಟ್ಟರ್‌ ಮೂಲಕ ನೀಡುವ ಪ್ರತಿಯೊಂದು ಪ್ರತಿಕ್ರಿಯೆ ಹಾಗೂ ಪೋಸ್ಟ್‌ಗಳನ್ನು ತಾವೇ ಖುದ್ದಾಗಿ ಹಾಕುತ್ತಾರೆ.

  ಈ ಕುರಿತು ಅಭಿಮಾನಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಕ್ಕೆ ಸ್ವತಃ ಜಗ್ಗೇಶ್ ಅವರೇ ಸ್ಪಷ್ಟಪಡಿಸಿದ್ದಾರೆ. ''ನಂಗೊಂದ ಡೌಟೂ...ಅಕ್ಕ ಹೇಳ್ತಿದ್ಲೂ..ನಾವು ಕೊಡೋ ಕಾಮೆಂಟಿಗೆ ರಿಪ್ಲ್ ಮಾಡೋದು ನೀವಲ್ಲ, ನಿಮ್ಮ ಅಸಿಸ್ಟೆಂಟ್ಸ್ ಅಂತ ನಿಜಾನ ಅಣ್ಣ..ಪ್ಲೀಸ್ ಉತ್ತರಿಸಿ....'' ಎಂದು ಟ್ವೀಟ್ ಮಾಡಿದ್ದರು.

  ಇದಕ್ಕೆ ಉತ್ತರಿಸಿರುವ ಜಗ್ಗೇಶ್ ''ನಾನು ನನ್ನ ಅಭಿಮಾನಿಗಳ ರಾಯರಂತೆ ಪ್ರೀತಿಸುವೆ! ಪ್ರತಿ ಕಾಮೆಂಟು ನನ್ನ ಕೈಬೆರಳಿಂದ ಅಚ್ಚಾಗುತ್ತದೆ! ರಾಯರ ಆಣೆ! ನನ್ನ ಸಾಮಾಜಿಕ ಖಾತೆ ಯಾರಿಗು ಮುಟ್ಟಲು ಬಿಡೋಲ್ಲಾ! am too possessive'' ಎಂದಿದ್ದಾರೆ.

  ಜಗ್ಗೇಶ್ ಅವರನ್ನು 639785 ಜನರು ಟ್ವಿಟ್ಟರ್‌ನಲ್ಲಿ ಫಾಲೋ ಮಾಡ್ತಾರೆ. ಜಗ್ಗೇಶ್ ಅವರು ಸಹ ಒಂಬತ್ತು ಖಾತೆಗಳನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡ್ತಾರೆ.

  English summary
  Jaggesh made it clear that not any assistant's handling my social media pages, i only use my twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X