»   » ಮಂಜುನಾಥ ಬಿಎ ಎಲ್ ಎಲ್ ಬಿ 'ಶೀರ್ಷಿಕೆ' ವಿವಾದ

ಮಂಜುನಾಥ ಬಿಎ ಎಲ್ ಎಲ್ ಬಿ 'ಶೀರ್ಷಿಕೆ' ವಿವಾದ

Posted By:
Subscribe to Filmibeat Kannada
Jaggesh
ಇಂದು (14 ಸೆಪ್ಟೆಂಬರ್ 2012) ಬಿಡುಗಡೆಯಾಗಿರುವ ನವರಸ ನಾಯಕ ಜಗ್ಗೇಶ್ ಅಭಿನಯದ 'ಮಂಜುನಾಥ ಬಿಎ ಎಲ್ ಎಲ್ ಬಿ' ಚಿತ್ರದ ನಿರ್ಮಾಪಕ ಎ ಸುರೇಶ್, ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಬೋರ್ಡ್ ಗೆ ಹೈಕೋರ್ಟ್ ನಿಂದ ತುರ್ತು ನೋಟಿಸ್ ಜಾರಿಯಾಗಿದೆ. ಚಿತ್ರದ ಶೀರ್ಷಿಕೆಯಲ್ಲಿ 'ಬಿಎ ಎಲ್ ಎಲ್ ಬಿ' ಎಂಬ ಪದವನ್ನು ಕಿತ್ತುಹಾಕುವಂತೆ ಸೂಚಿಸಿ ಎನ್ ಕೆ ವಿಜಯ್ ಕುಮಾರ್ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

'ಮಂಜುನಾಥ ಬಿಎ ಎಲ್ ಎಲ್ ಬಿ' ಚಿತ್ರದಲ್ಲಿರುವ 'ಬಿಎ ಎಲ್ ಎಲ್ ಬಿ' ತೆಗೆಯುವಂತೆ ನ್ಯಾಯಮೂರ್ತಿ ಆನಂದಭೈರರೆಡ್ಡಿ ಆದೇಶ ಹೊರಡಿಸಿದ್ದಾರೆ. ಚಿತ್ರದಲ್ಲಿ 'ಕುಡಿತ' ಹಾಗೂ 'ಬಾಟಲಿ' ಬಳಕೆ ದೃಶ್ಯಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೂ ಈ ಕುರಿತು ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರದ ಶೀರ್ಷಿಕೆ ಬಗ್ಗೆ ಕಳೆದ 14 ದಿನಗಳ ಮೊದಲೇ ವಿವಾದ ಎದ್ದಿತ್ತು. ಆದರೆ ಆ ಬಗ್ಗೆ ನಿರ್ಮಾಪಕ ಸುರೇಶ್ ಹಾಗೂ ನಿರ್ದೇಶಕ ಮೋಹನ್ ಸ್ಪಷ್ಟೀಕರಣ ನೀಡಿದ್ದರು.

"ನಮ್ಮ 'ಮಂಜುನಾಥ ಬಿಎ ಎಲ್ ಎಲ್ ಬಿ' ಚಿತ್ರದಲ್ಲಿ ಲಾಯರ್ ಬಗ್ಗೆ ಯಾವುದೇ ಅವಹೇಳನ ಮಾಡಿಲ್ಲ. ಅಲ್ಲದೇ ಚಿತ್ರದ ಲಾಯರ್ ಪಾತ್ರಧಾರಿ ನಾಯಕ ಲಾಯರ್ ಕೋಟು ಹಾಕಿರುವಾಗ ಬಾಟಲಿ ಎತ್ತಿ ಕುಡಿಯುವುದಿಲ್ಲ ಅಥವಾ ಕೋಟ್ ಹಾಕಿರುವಾಗ ಕುಡಿಯುತ್ತಾ ಮಾತನಾಡಿರುವ ಯಾವ ದೃಶ್ಯವೂ ಇಲ್ಲ" ಎಂದಿದ್ದರು. ಹೀಗಾಗಿ ಈಗ ಮತ್ತೆ ಎದ್ದಿರುವ ವಿವಾದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯ ಕಂಡುಬರುತ್ತಿಲ್ಲ.

ಇಷ್ಟೇ ಅಲ್ಲ, ನಿರ್ಮಾಪಕರು ಈ ಕುರಿತು ಕೆವಿಯಟ್ ಪಡೆದಿರುವುದರಿಂದ ಚಿತ್ರದ ಶೀರ್ಷಿಕೆಗಾಗಲೀ ಅಥವಾ ಪ್ರದರ್ಶನಕ್ಕಾಗಲೀ ಯಾವುದೇ ತೊಂದರೆಯಿಲ್ಲ. ಆದರೆ ಚಿತ್ರ ಬಿಡುಗಡೆಯಾದ ಇಂದೇ ಈ ವಿವಾದ ಮತ್ತೆ ತಲೆ ಎತ್ತಿರುವುದು ಚಿತ್ರಕ್ಕೆ ಭಾರಿ ಪ್ರಚಾರವನ್ನಂತೂ ಕೊಡಲಿದೆ.

ಈ 'ಮಂಜುನಾಥ ಬಿಎ ಎಲ್ ಎಲ್ ಬಿ' ಚಿತ್ರವು 2007 ರಲ್ಲಿ ಬಿಡುಗಡೆಯಾಗಿರುವ ಮಮ್ಮುಟ್ಟಿ ಹಾಗೂ ಪಾರ್ವತಿ ಮಿಲ್ಟನ್ ಅಭಿನಯದ ಮಲಯಾಳಂ ಚಿತ್ರದ ರೀಮೇಕ್. ಕನ್ನಡದ ಈ 'ಮಂಜುನಾಥ ಬಿಎ ಎಲ್ ಎಲ್ ಬಿ' ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಜಗ್ಗೇಶ್ ಜೊತೆ ರೀಮಾ ವೋರಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ, ಚಿತ್ರಕಥೆ-ಸಂಭಾಷಣೆ ಬರೆದಿರುವ ಎಸ್ ಮೋಹನ್ ನಿರ್ದೇಶನವನ್ನೂ ಮಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Justice Anandabhaira Reddy issued Notice for Kannada Movie 'Manjunath BA LLB' for its Title word 'BA LLB'. Now it became a big Controversy. This movie released Today on 14th September 2012. Jaggesh and Reema Vora are acted in lead role. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada