For Quick Alerts
  ALLOW NOTIFICATIONS  
  For Daily Alerts

  ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ: 'ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು' ಎಂದ ಜಗ್ಗೇಶ್

  |

  ನಟಿ ಸಂಯುಕ್ತಾ ಹೆಗಡೆ ಮತ್ತು ಸ್ನೇಹಿತರ ಮೇಲೆ ನಡೆದ ಹಲ್ಲೆಯನ್ನು ಅನೇಕರು ಖಂಡಿಸಿದ್ದಾರೆ. ಬೆಂಗಳೂರಿನ ಪಾರ್ಕ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂಯುಕ್ತಾ ಹೆಗಡೆ ಮತ್ತು ಸ್ನೇಹಿತರ ಮೇಲೆ ಸ್ಪೋರ್ಟ್ಸ್ ಬಗ್ಗೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಕವಿತಾ ರೆಡ್ಡಿ ಎನ್ನುವ ಮಹಿಳೆ ಹಲ್ಲೆ ಮಾಡಿದ್ದಾರೆ.

  ವೈರಲ್ ಆಯ್ತು Prashanth Sambaragi ಪಾರ್ಟಿ ಫೋಟೋ | Oneindia Kannada

  ಈ ಘಟನೆಯನ್ನು ನಟಿ ಸಂಯುಕ್ತಾ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕರು ಹಲ್ಲೆ ಮಾಡಿದ ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ಸ್ ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ಸಂತೋಷ್ ಆನಂದ್ ರಾಮ್ ಹಾಗೂ ಮೇಘನಾ ಗಾಂವ್ಕರ್ ಮತ್ತು ಪಾರುಲ್ ಯಾದವ್ ಸೇರಿದ್ದಂತೆ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ.

  ಸಂಯುಕ್ತ ಹೆಗಡೆ ಮೇಲೆ ಹಲ್ಲೆ: ನಟಿಯ ಬೆಂಬಲಕ್ಕೆ ನಿಂತ ಕನ್ನಡದ ಸ್ಟಾರ್ಸ್

  ಈ ಬಗ್ಗೆ ಈಗ ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಯಾವುದೇ ಒಂದು ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕವೇ ಪ್ರತಿಕ್ರಿಯೆ ನೀಡುವ ಜಗ್ಗೇಶ್ ಇದೀಗ ಸಂಯುಕ್ತ ಮೇಲಿನ ಹಲ್ಲೆ ಪ್ರಕರಣದ ಬಗ್ಗೆಯೂ ಮಾತನಾಡಿದ್ದಾರೆ. ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು ಎಂದು ಹೇಳುವ ಮೂಲಕ ಹಲ್ಲೆ ಮಾಡಿದ ಕವಿತಾ ರೆಡ್ಡಿಗೆ ಟಾಂಗ್ ಕೊಟ್ಟಿದ್ದಾರೆ.

  "ಕೋಪ ದುಃಖಕ್ಕೆ ಮೂಲ. ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು. ಇತ್ತೀಚಿಗೆ ಜಾಲತಾಣ ಪ್ರಚಾರಕ್ಕೆ ಮೊಬೈಲ್ ರೆಕಾರ್ಡ್ ಚಾಲುಮಾಡಿ ಕಾಲುಕೆರೆದು ಬರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇಂದು ಬಾಪ್ ಕಟ್ ಪ್ಯಾಂಟ್ ಶರ್ಟಿನ ಹೆಂಗಸು ಅನ್ಯಳ ಬಟ್ಟೆ ಬಗ್ಗೆ ಬುದ್ಧಿ ಹೇಳುವಂತೆ ಕೈ ಮಾಡಿ ರೆಕಾರ್ಡ್ ಮಾಡುತ್ತಾಳೆ. ನಾವು ನೋಡಿ ಪರ ವಿರೋಧ ಚರ್ಚೆ ಮಾಡುತ್ತೇವೆ." ಎಂದು ಹೆಸರು ಹೇಳದೆ ಟ್ವೀಟ್ ಮಾಡಿದ್ದಾರೆ.

  ತುಂಡುಡುಗೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಸಂಯುಕ್ತಾ ಮೇಲೆ ಹಲ್ಲೆ ಮಾಡಿದ ಕವಿತಾ ರೆಡ್ಡಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಕವಿತಾ ರೆಡ್ಡಿ ಸ್ಪೋರ್ಟ್ಸ್ ಬಟ್ಟೆ ಧರಿಸಿ ಓಡುತ್ತಿರುವ ಫೋಟೋವನ್ನು ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

  English summary
  Kannada Actor Jaggesh Reaction about onslaught on Actress Samyuktha Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X