»   » ಕಾಮುಕ ನಿರ್ಮಾಪಕರ ಹುಟ್ಟಡಗಿಸಲು ಒಂದಾದ ಕನ್ನಡ ಸಿನಿಮಾರಂಗ

ಕಾಮುಕ ನಿರ್ಮಾಪಕರ ಹುಟ್ಟಡಗಿಸಲು ಒಂದಾದ ಕನ್ನಡ ಸಿನಿಮಾರಂಗ

By Pavithra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿದ ಶ್ರುತಿ ಹರಿಹರನ್ | Oneindia Kannada

  ಕಳೆದ ಎರಡು ದಿನಗಳಿಂದ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ (ಕಾಸ್ಟಿಂಗ್ ಕೌಚ್)ಸಿನಿಮಾರಂಗದಲ್ಲಿ ಆಗುವ ಲೈಂಗಿಕ ಕಿರುಕುಳದ ಬಗ್ಗೆ ನಟಿ ಶೃತಿ ಮನಸ್ಸು ಬಿಚ್ಚಿ ಮಾತನಾಡಿದ್ದರು. ಚಿತ್ರರಂಗಕ್ಕೆ ಬರುವಾಗ ತಮಗಾದ ಅನುಭವವನ್ನ ಹೇಳಿಕೊಂಡಿರುವುದಕ್ಕೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕೇಳಿ ಬಂದಿದ್ದವು.

  ಸಿನಿಮಾರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಹೋರಾಟ ಮಾಡಲು ಕನ್ನಡ ಸಿನಿಮಾರಂಗ ಒಂದಾಗ ಬೇಕಿದೆ. ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೋರಾಟ ಮಾಡಬೇಕೆಂದು ಮನವಿ ಮಾಡಿದ್ದ ಶೃತಿ ಹರಿಹರನ್ ಜೊತೆಗೆ ಚಿತ್ರರಂಗದ ಅನೇಕರು ಕೈ ಜೋಡಿಸಿದ್ದಾರೆ.

  ಲೈಂಗಿಕ ಕಿರುಕುಳದ ಹೇಳಿಕೆಯ ನಂತರ: ಶೃತಿ ಕೊಟ್ಟ ಮೊದಲ ಪ್ರತಿಕ್ರಿಯೆ

  ಕನ್ನಡ ಸಿನಿಮಾರಂಗದ ಅನೇಕರು ಶೃತಿಯ ಮಾತಿಗೆ ಬೆಲೆ ನೀಡಿ ನಿಮ್ಮ ಪರವಾಗಿ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಹಾಗಾದ್ರೆ ಈ ಬಗ್ಗೆ ಮಾತನಾಡಿರುವ ಕಲಾವಿದರು ಯಾರು? ಯಾವ ನಾಯಕಿಯರು ಶೃತಿ ಮಾತಿಗೆ ಮರು ಧ್ವನಿ ಆಗಿದ್ದಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಶೃತಿ ಜೊತೆ ಕೈ ಜೋಡಿಸಿದ ಜಗ್ಗೇಶ್

  ಚಿತ್ರರಂಗದಲ್ಲಿ ಆದ ಕಹಿ ಅನುಭವದ ಬಗ್ಗೆ ಮಾತನಾಡಿದ್ದ ಶೃತಿ ಹರಿಹರನ್ ಅವರಿಗೆ ಧೈರ್ಯ ತುಂಬುವ ಕೆಲಸವನ್ನ ನಟ ನವರಸ ನಾಯಕ ಜಗ್ಗೇಶ್ ಮಾಡಿದ್ದಾರೆ.

  "ಒಬ್ಬ ಹಿರಿಯ ನಟನಾಗಿ ಹೇಳುವೆ. ಆ ರೀತಿ ಯಾರೆ ನಿಮಗೆ ತಲಹರಟೆ ಮಾಡಿದ್ದರೆ ಧೈರ್ಯವಾಗಿ ಹೆಸರು ಹೇಳಿ ಕಾನೂನು ಕ್ರಮಕ್ಕೆ ಯತ್ನಿಸಿ.ಎಲ್ಲೋ ಯಾರೋ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟು ಗೊಂದಲ ಸೃಷ್ಠಿಸಬೇಡಿ. ನಮ್ಮ ಉದ್ಯಮಕ್ಕೆ ತನ್ನದೆ ಆದ ಘನತೆ ಇದೆ". ಎಂದು ಟ್ವಿಟ್ ಮಾಡಿದ್ದಾರೆ.

  ನಿರ್ಮಾಪಕರ ಸಂಘದಲ್ಲಿ ಸಭೆ

  ನಟ ಜಗ್ಗೇಶ್ ಈ ಬಗ್ಗೆ ತಾವೇ ಜವಾಬ್ದಾರಿ ತೆಗೆದುಕೊಂಡು ಕನ್ನಡ ಚಲನಚಿತ್ರ ನಿರ್ಮಾಪಕ ಸಂಘಕ್ಕೆ ವಿಷಯವನ್ನ ಮುಟ್ಟಿಸಿದ್ದಾರೆ. ಆದಷ್ಟು ಬೇಗ ನಿರ್ಮಾಪಕರ ಸಂಘದಲ್ಲಿ ಸಭೆಯನ್ನೂ ಮಾಡಲು ನಿರ್ಧಾರ ಮಾಡಲಾಗಿದೆ. ನಿರ್ಮಾಪಕರ ಸಂಘದ ಸದಸ್ಯರ ಜೊತೆ ಮುಕ್ತವಾಗಿ ಚರ್ಚೆ ಮಾಡಿ ಎಂದು ಶೃತಿ ಅವರಿಗೆ ಸಲಹೆಯನ್ನೂ ನೀಡಿದ್ದಾರೆ.

  ಶೃತಿ ಜೊತೆಯಾದ ಮೇಘನಾ ರಾಜ್

  ನಟಿ ಮೇಘನಾರಾಜ್ ಶೃತಿ ಹರಿಹರನ್ ಹೋರಾಟಕ್ಕೆ ಜೊತೆ ಆಗಿದ್ದಾರೆ. "ನಿನ್ನ ಬಗ್ಗೆ ಹೆಮ್ಮೆ ಆಗುತ್ತದೆ. ನಿಮ್ಮ ನಡೆ ತುಂಬಾ ಜನರಿಗೆ ಸ್ಪೂರ್ತಿ ನೀಡಲಿದೆ". ಎಂದು ಟ್ವಿಟ್ ಮಾಡಿದ್ದಾರೆ.

  ಒಳ್ಳೆಯವರ ಜೊತೆ ಕೆಟ್ಟವರು ಇದ್ದಾರೆ

  "ಚಿತ್ರರಂಗಕ್ಕೆ ಬರುವ ಹೊಸಬರು ಹಾಗೂ ಚಿತ್ರರಂಗದ ಹೆಸರು ಹೇಳಿಕೊಂಡು ಮೋಸ ಮಾಡುವವರು ಅನೇಕರಿದ್ದಾರೆ. ಇಂತವರು ಕೆಲವರಿಗೆ ಮೋಸ ಮಾಡುತ್ತಾರೆ. ಆದರೆ ಎಲ್ಲರನ್ನೂ ಹೀಗೆ ಮಾಡಲು ಸಾಧ್ಯವಿಲ್ಲ. ಜೈ ಹೋ' ಎಂದು ನಟಿ ಸಂಜನಾ ಟ್ವೀಟ್ ಮಾಡಿದ್ದಾರೆ.

  ಹೋರಾಟಕ್ಕೆ ತಯಾರಾದ ಶ್ರದ್ಧಾ ಶ್ರೀನಾಥ್

  "ಶೃತಿ ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ. ಲೈಗಿಂಕ ಕಿರುಕುಳದ ಬಗ್ಗೆ ನಾವೆಲ್ಲರೂ ಗೌಪ್ಯತೆ ಕಾಪಾಡುತ್ತೆವೆ. ಯಾವಾಗ ನಾವು ಜೋರಾಗಿ ಈ ಬಗ್ಗೆ ಮಾತನಾಡುತ್ತೇವೆ ಆಗ ಸರಿ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ" ಎಂದಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್.

  English summary
  Actor Jaggesh support to actress Shruthi Hariharan statement about sexual harassment in the film industry. Actress Meghna Raj and Sanjana have tweeted about this.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more