Just In
Don't Miss!
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Automobiles
ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ
- News
ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್ಬರ್ಗ್
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ಯಾನ್ ಇಂಡಿಯಾ ಚರ್ಚೆಯ ನಂತರ ಯಶ್ ಬಗ್ಗೆ ಜಗ್ಗೇಶ್ ಟ್ವೀಟ್
''ನನ್ನ ಹಿರಿಮಗನ ವಯಸ್ಸಿನವ, ಉಧ್ಯಮದ ಒಳಗೆ ನಮ್ಮಗಳ ವಿಶ್ವಾಸ ಹಿರಿಯರು ಕಿರಿಯರ ಜೊತೆ ಸೌಹಾರ್ದಯುವಾಗಿದೆ'' ಎಂದು ಹಿರಿಯ ನಟ ಜಗ್ಗೇಶ್ ಅವರು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆ ಹಿರಿಯ ನಟ ಜಗ್ಗೇಶ್ ಇತ್ತೀಚಿಗಷ್ಟೆ ಪ್ರೆಸ್ ಮೀಟ್ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜಗ್ಗೇಶ್ ಅವರ ಹೇಳಿಕೆ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ನವರಸ ನಾಯಕನ ವಿರುದ್ಧ ತಿರುಗಿಬಿದ್ದಿದ್ದರು. ಜಗ್ಗೇಶ್ ಅವರು ಯಶ್ ಅವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದರು.
'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ': ನಟ ಜಗ್ಗೇಶ್ ಅಸಮಾಧಾನ
ಆದ್ರೆ, ಜಗ್ಗೇಶ್ ಅಂದು ಪ್ರೆಸ್‌ಮೀಟ್‌ನಲ್ಲಿ ಯಾರ ಹೆಸರು ಉಲ್ಲೇಖಿಸಿರಲಿಲ್ಲ. ಇದೀಗ, ಯಶ್ ಅವರ ಹಳೆ ಸಂದರ್ಶನದ ತುಣುಕು ಒಂದನ್ನು ಹಂಚಿಕೊಂಡಿರುವ ಜಗ್ಗೇಶ್, ಯಶ್ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ನನ್ನ ಹಿರಿಮಗನ ವಯಸ್ಸಿನವ
ಕನ್ನಡದ ಖಾಸಗಿ ಮಾಧ್ಯಮವೊಂದರ ಸಂದರ್ಶನ ಜಗ್ಗೇಶ್ ಅವರ ಬಗ್ಗೆ ಯಶ್ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ನವರಸ ನಾಯಕ ''ನನ್ನ ಹಿರಿಮಗನ ವಯಸ್ಸಿನವ..!! ನನ್ನಂತೆ ಯಾರ ಸಹಾಯವಿಲ್ಲದೆ ಬೆಳೆದವ ಎಂಬ ಹೆಮ್ಮೆಯಿದೆ..!! ಉಧ್ಯಮದ ಒಳಗೆ ನಮ್ಮಗಳ ವಿಶ್ವಾಸ ಹಿರಿಯರು ಕಿರಿಯರ ಜೊತೆ ಸೌಹಾರ್ದಯುವಾಗಿದೆ!'' ಎಂದು ಹೇಳುವ ಮೂಲಕ ನಾವು ಚೆನ್ನಾಗಿದ್ದೇವೆ ಎಂದು ಸಾರಿ ಹೇಳಿದ್ದಾರೆ.

ಹಿಂಬಾಲಕರಿಗಾಗಿ ಅಲೆಯುವ ತಂತ್ರವಾದಿಗಳಿಗೆ ಗೊತ್ತಿಲ್ಲ
''ಸಾಮಾಜಿಕ ಜಾಲತಾಣದಲ್ಲೆ ಲೈಕ್ಸ್‌ಗಾಗಿ ಜೀವಿಸಿ ಮೊಬೈಲ್ನಲ್ಲೆ ಬದುಕುವ ಹಾಗು ಇತ್ತೀಚಿಗೆ ಯ್ಯೂಟ್ಯೂಬ್ ಖಾತೆ ತೆರೆದು ಹಿಂಬಾಲಕರಿಗಾಗಿ ಅಲೆಯುವ ತಂತ್ರವಾದಿಗಳಿಗೆ ಅರಿವಾಗದು'' ಎಂದು ತಮ್ಮನ್ನು ಟೀಕಿಸಿದ ಕೆಲವರಿಗೆ ಜಗ್ಗೇಶ್ ಪ್ರತ್ಯುತ್ತರ ನೀಡಿದ್ದಾರೆ.
ಮಾರುವೇಷದಲ್ಲಿ 'KGF' ನೋಡಿದ ಜಗ್ಗೇಶ್ : ದರ್ಶನ್ ಫ್ಯಾನ್ ಮಾತಿಗೆ ಜಗ್ಗೇಶ್ ಭಾವುಕ

ಪ್ಯಾನ್ ಇಂಡಿಯಾ ವಿವಾದ ಏನಿದು?
''ಯಾವುದು ಅದು ಪ್ಯಾನ್ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ ಕನ್ನಡಿರಿಗೆ ಕೆಲಸ ಇಲ್ಲ..ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ'' ಎಂದು ನಟ ಜಗ್ಗೇಶ್ ಕಿಡಿ ಕಾರಿದ್ದರು. ಈ ಹೇಳಿಕೆಯನ್ನು ಯಶ್ ಅವರನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು ಕೆಲವರು ನವರಸ ನಾಯಕನ ವಿರುದ್ಧ ತಿರುಗಿಬಿದ್ದಿದ್ದರು. ಆದ್ರೆ, ಜಗ್ಗೇಶ್ ಅವರು ಹೀಗೆ ಹೇಳಿದ್ದು ಕನ್ನಡ ಚಿತ್ರರಂಗದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡೇ ಹೊರತು ಯಶ್ ಅವರನ್ನು ಟಾರ್ಗೆಟ್ ಮಾಡಿಲ್ಲ ಎನ್ನುವುದನ್ನು ಅರಿಯಬೇಕು. ಏಕಂದ್ರೆ, ಈ ಹಿಂದೆ ಯಶ್ ಅವರ ಬಗ್ಗೆ ಹಾಗೂ ಕೆಜಿಎಫ್ ಸಿನಿಮಾ ಬಗ್ಗೆ ಜಗ್ಗೇಶ್ ಬಹಿರಂಗವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

'ಕೆಜಿಎಫ್' ನೋಡಿ ಖುಷ್ ಆದೆ
ಮಾರುವೇಷದಲ್ಲಿ ಕೆಜಿಎಫ್ ಸಿನಿಮಾ ನೋಡಿದ್ದ ಜಗ್ಗೇಶ್ ನಂತರ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದರು. ''2 ಅಕ್ಷರದ ನಟ 3 ಅಕ್ಷರದ ಮನಗಳ 2 ಅಕ್ಷರದಿಂದ ಕಲಾಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟ hats off dear.. ಯಶ್ ಕನ್ನಡ ಮನಗಳ ಖುಷಿ ಪಡಿಸಿದ ನಿರ್ದೇಶಕ ನೀಲ್ ನೀನು ಅಸಮಾನ್ಯ ಪ್ರತಿಭೆ. ಕನ್ನಡವೆಂದರೆ ಇದ್ದ ತಾತ್ಸಾರ ಮನಸ್ಥಿತಿ ಬದಲಾಗುವಂತೆ ಮಾಡಿಬಿಟ್ಟಿರಿ. ಹೊಂಬಾಳೆ ಫಿಲ್ಮ್ಸ್ ನಿಮ್ಮ ಎದೆಗಾರಿಕೆಗೆ ನನ್ನ ಸಲಾಂ.. 'ಕೆಜಿಎಫ್' ನೋಡಿ ಖುಷ್ ಆದೆ.'' - ಜಗ್ಗೇಶ್, ನಟ
''ಕೆ.ಜಿ.ಎಫ್ ಫ್ಲಾಪ್ ಆಗುತ್ತೆ'' ಅಂದೋರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ ನಟ ಜಗ್ಗೇಶ್.!