For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ಪತ್ನಿ ಕಣ್ಣೀರು ಹಾಕಿದ್ದರು : ಹಳೆ ನೆನೆಪು ಹಂಚಿಕೊಂಡ ಜಗ್ಗೇಶ್

  |

  ಪ್ರೀತಿ ಪ್ರೇಮ ಎಂದ ತಕ್ಷಣ ಕನ್ನಡ ಚಿತ್ರರಂಗದಲ್ಲಿ ನೆನಪಿಗೆ ಬರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಸ್ಯಾಂಡಲ್ ವುಡ್ ನ ಪ್ರೀತಿಯ ರಾಯಭಾರಿ ರವಿಚಂದ್ರನ್ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ.

  ರವಿಚಂದ್ರನ್ ಹಾಗೂ ಸುಮತಿ ದಂಪತಿ ಇಂದು ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿ ಇದ್ದಾರೆ. ಅವರ ಮದುವೆಯಾಗಿ ಇಂದಿಗೆ 32 ವರ್ಷ ತುಂಬಿದೆ. ಈ ಕ್ರೇಜಿ ಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಳೆ ನೆನಪನ್ನು ಹಂಚಿಕೊಂಡಿದ್ದಾರೆ.

  'ಪ್ರೇಮಿಗಳ ದಿನ' ಪ್ರೇಮಲೋಕದ ರಣಧೀರನಿಗೆ ಡಬಲ್ ಸಂಭ್ರಮ

  ರವಿಚಂದ್ರನ್ ಅವರ 'ರಣಧೀರ' ಸಿನಿಮಾದಲ್ಲಿ ನಟಿಸಿದ ಜಗ್ಗೇಶ್ ಆ ಚಿತ್ರದ ಸಂದರ್ಭದಲ್ಲಿ ನಡೆದ ಘಟನೆಯನ್ನು ಅಭಿಮಾನಿಗಳ ಜೊತೆಗೆ ಹೇಳಿಕೊಂಡಿದ್ದಾರೆ. ಮುಂದೆ ಓದಿ...

  ಜಗ್ಗೇಶ್ ಶುಭಾಶಯ

  ಜಗ್ಗೇಶ್ ಶುಭಾಶಯ

  ವಿವಾಹ ವಾರ್ಷಿಕೋತ್ಸವದ ಸಂತಸದಲ್ಲಿ ಇರುವ ರವಿಚಂದ್ರನ್ ದಂಪತಿಗೆ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದರ ಜೊತೆಗೆ ಮದುವೆಯ ಬಳಿಕ 'ರಣಧೀರ' ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದ ಒಂದು ಭಾವನಾತ್ಮಕ ಸನ್ನಿವೇಶವನ್ನು ತಿಳಿಸಿದ್ದಾರೆ.

  ಕಣ್ಣೀರು ಹಾಕಿದ ಸುಮತಿ

  ತಮ್ಮ ಮದುವೆಯಾದ 15 ದಿನಗಳ ಬಳಿಕ 'ರಣಧೀರ' ಶೂಟಿಂಗ್ ನಲ್ಲಿ ರವಿಚಂದ್ರನ್ ಭಾಗಿಯಾಗಿದ್ದರಂತೆ. ಹಾಡಿನ ಚಿತ್ರೀಕರಣ ಬಾಕಿ ಇದ್ದು, ಬಾ ಬಾರೋ ರಣಧೀರ ಹಾಡಿನ ಶೂಟಿಂಗ್ ನಡೆಯುತ್ತಿತಂತೆ. ಚಿತ್ರೀಕರಣದ ಸೆಟ್ ಗೆ ಗಂಡನನ್ನು ಕಾಣಲು ಆಗಮಿಸಿದ ರವಿಚಂದ್ರನ್ ಪತ್ನಿ ಸುಮತಿ ಕಣ್ಣೀರು ಹಾಕಿದರಂತೆ.

  ಭಾವುಕರಾದ ಜಗ್ಗೇಶ್

  ಭಾವುಕರಾದ ಜಗ್ಗೇಶ್

  ಪತ್ನಿ ಕಣ್ಣೀರು ಕಂಡು ಕೆಲಸ ಬಿಟ್ಟು ರವಿಚಂದ್ರನ್ ಅವರನ್ನು ಸಂತೈಸಿದರಂತೆ. ಪತ್ನಿಗೆ ಸಣ್ಣ ನೋವಾದರೂ ರವಿಚಂದ್ರನ್ ತಡೆದುಕೊಳ್ಳುತಿರಲಿಲ್ಲವಂತೆ. ಆ ಕ್ಷಣಕ್ಕೆ ಇದನ್ನು ಕಂಡ ಜಗ್ಗೇಶ್ ತಮ್ಮ ಪತ್ನಿ ಪರಿಮಳಾ ಹಾಗೂ ಮಕ್ಕಳನ್ನು ನೆನೆದು ಭಾವುಕರಾದರಂತೆ. ಅವರ ಮಗ ಗುರು ಆಗ 6 ತಿಂಗಳ ಮಗು ಆಗಿದ್ದರಂತೆ.

  ಅಪ್ಪ ಅಮ್ಮನಿಗೆ ಮನೋರಂಜನ್ ವಿಶ್

  ಅಪ್ಪ ಅಮ್ಮನಿಗೆ ಮನೋರಂಜನ್ ವಿಶ್

  ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆ ಹಾಗೂ ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ''ನೀವು ಇಬ್ಬರೂ ಯಾವಾಗಲೂ ನಗುತಿರಿ. ನಾನು ಇಂದು ಸಂಜೆ ನಿಮಗೆ ನನ್ನ ಪ್ರೀತಿ ಪಾತ್ರರನ್ನು ತಿಳಿಸುತ್ತೇನೆ.'' ಎಂದು ಟ್ವೀಟ್ ಮಾಡಿದ್ದಾರೆ.

  English summary
  Kannada actor Jaggesh wishes for Ravichandran and Sumathi's wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X