For Quick Alerts
  ALLOW NOTIFICATIONS  
  For Daily Alerts

  ಮೊಮ್ಮಗ 'ಅರ್ಜುನ'ನಿಗಾಗಿ ಪೌರಾಣಿಕ ವೇಷ ತೊಟ್ಟ ಜಗ್ಗೇಶ್.!

  By Harshitha
  |

  ಪುಟ್ಟ ಮಕ್ಕಳು ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ... ಚಿಕ್ಕ ಮಕ್ಕಳನ್ನು ಆಡಿಸುತ್ತಿದ್ದರೆ, ಸಮಯ ಹೋಗುವುದೇ ಗೊತ್ತಾಗಲ್ಲ. ನಟ ಜಗ್ಗೇಶ್ ಗೂ ಅಷ್ಟೇ, ತಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಎಲ್ಲಿಲ್ಲದ ಖುಷಿ.

  ಸಿನಿಮಾ ಶೂಟಿಂಗ್ ಹಾಗೂ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ಚಿತ್ರೀಕರಣದಲ್ಲಿ ಬಿಜಿಯಾಗಿರುವ ನಟ ಜಗ್ಗೇಶ್ ಭಾನುವಾರ ಯಾವಾಗ ಆಗುತ್ತೋ ಅಂತ ಕಾಯುತ್ತಿರುತ್ತಾರೆ. ಯಾಕಂದ್ರೆ, ಮೊಮ್ಮಗ ಅರ್ಜುನ ಜೊತೆ ಆಟವಾಡಲು ಅವರು ಫ್ರೀ ಆಗುವುದೇ ಅವತ್ತು.

  ಪುಟಾಣಿ ಅರ್ಜುನನ ಮೇಲೆ ಪ್ರೀತಿ ಇಟ್ಟಿರುವ ನಟ ಜಗ್ಗೇಶ್, ಕಂದಮ್ಮನನ್ನು ರಂಜಿಸಲು ಪೌರಾಣಿಕ ವೇಷ ಧರಿಸಿದ್ದಾರೆ. ಇಲ್ಲಿಯವರೆಗೂ ಜಗ್ಗೇಶ್ ರನ್ನ ಅರ್ಜುನ ಪೌರಾಣಿಕ ವೇಷದಲ್ಲಿ ನೋಡಿಲ್ಲ. ಹೀಗಾಗಿ ಇಂದು (ಭಾನುವಾರ) ಪೌರಾಣಿಕ ವೇಷದಲ್ಲಿ ತಾತನ ದರ್ಶನ ಅರ್ಜುನನಿಗೆ ಆಗಿದೆ.

  ಜಗ್ಗೇಶ್ ಪುತ್ರನ ಬಾಳಲ್ಲಿ ಪೀ ಪೀ ಪೀ ಢುಂ ಢುಂಜಗ್ಗೇಶ್ ಪುತ್ರನ ಬಾಳಲ್ಲಿ ಪೀ ಪೀ ಪೀ ಢುಂ ಢುಂ

  ''ಮೊಮ್ಮಗ ಅರ್ಜುನ ನೋಡಿರದ ಪೌರಾಣಿಕ ವೇಷದೊಂದಿಗೆ..
  ತಾತನ ಪೌರಾಣಿಕ ವೇಷ ಕಂಡು ಮೂಕವಿಸ್ಮಿತನಾದ ಅರ್ಜುನ..
  ಅವನ ಸಂತೋಷಕ್ಕಾಗಿ ನನ್ನ ಸಣ್ಣ ಯತ್ನ
  ಮಕ್ಕಳು ಅಸಲು, ಮೊಮ್ಮಕ್ಕಳು ಬಡ್ಡಿ
  ಮನುಷ್ಯರಿಗೆ ಅಸಲಿಗಿಂತ ಬಡ್ಡಿ ಮೇಲೆ ಆಸೆ ಹೆಚ್ಚು
  ವಾರದ ಯಾಂತ್ರಿಕ ಬದುಕು ಬದಲಿಸಲು ಭಾನುವಾರ ನನ್ನ ಬಳಿ ಬಂದು ಬಿಡುತ್ತಾನೆ
  ನಮ್ಮ ಸಂತೋಷ ನಾವೇ ಗಳಿಸಿ ಬದುಕಬೇಕು.!'' ಎಂದು ಫೋಟೋ ಸಮೇತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ಮಕ್ಕಳು ಅತ್ತಾಗ ಸಮಾಧಾನ ಮಾಡಲು ಮೊಬೈಲ್, ಐ-ಪ್ಯಾಡ್ ಕೊಡುವ ಕಾಲ ಇದು. ಅಂಥದ್ರಲ್ಲಿ ಮೊಮ್ಮಗನ ಖುಷಿಗಾಗಿ ಪೌರಾಣಿಕ ವೇಷ ತೊಟ್ಟು ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿರುವ ಜಗ್ಗೇಶ್ ಗೆ ನಮ್ಮದೊಂದು ಸಲಾಂ.

  English summary
  Jaggesh's Mythological look for his grand son Arjuna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X